Deepika Das: ಬ್ಲೌಸ್‌ ಹಾಕದೇ ದೇವಸ್ಥಾನದಲ್ಲಿ ಫೋಟೋಶೂಟ್‌ ಮಾಡಿಸಿದ ದೀಪಿಕಾ ದಾಸ್‌

Deepika Das: ಖ್ಯಾತ ದೇವಸ್ಥಾನ ಒಂದರಲ್ಲಿ ಕನ್ನಡ ಕಿರುತೆರೆಯ ನಾಗಿಣಿ, ಬಿಗ್ ಬಾಸ್ ನಲ್ಲಿ ಖ್ಯಾತಿ ಪಡೆದ ದೀಪಿಕಾ ದಾಸ್ (Deepika Das) ಬ್ಲೌಸ್ ಹಾಕದೆ ಸೀರೆ ಧರಿಸಿ ಫೋಟೋ ಶೂಟ್ ಮಾಡಿ ಇದೀಗ ತನ್ನ ಒಂದೊಂದೆ ಅತಿರೇಖ ಬುದ್ಧಿಯಿಂದ ನೆಟ್ಟಿಗರ ಕೋಪಕ್ಕೆ ಗುರಿಯಾಗುತ್ತಿದ್ದಾರೆ.

ಇತ್ತೀಚಿಗೆ ದೀಪಿಕಾ ದಾಸ್ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೇಲೆ ಟ್ರಾವಲಿಂಗ್ ಮತ್ತು ಸಿನಿಮಾ ಶೂಟಿಂಗ್ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದ್ಯಕ್ಕೆ ದೀಪಿಕಾ ದಾಸ್ ಮದುವೆ ಆದ ಮೇಲೆ ನಟಿಸಿರುವ ಸಿನಿಮಾ ಹ್ಯಾಷ್‌ಟ್ಯಾಗ್‌ ಪಾರು ಪಾರ್ವತಿ ಸಿನಿಮಾದ ಫಸ್ಟ್‌ ಲುಕ್‌ ಮತ್ತು ಟೈಟಲ್ ಲಾಂಚ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ.

ಇನ್ನು ದೀಪಿಕಾ ಬಗ್ಗೆ ಹೇಳುವುದಾದರೆ ಪ್ರಯಾಣ ಮಾಡುವುದು ಅಂದ್ರೆ ದೀಪಿಕಾ ದಾಸ್‌ಗೆ ಸಿಕ್ಕಾಪಟ್ಟೆ ಇಷ್ಟ. ಅಂತೆಯೇ ಇತ್ತೀಚಿಗೆ ವಿದೇಶಕ್ಕೆ ಹಾರಿರುವ ಘಟನೆಗಳು ಸಾಕಷ್ಟಿದೆ, ಏಕೆಂದರೆ ಇನ್‌ಸ್ಟಾಗ್ರಾಂನಲ್ಲಿ ಪ್ರತಿಯೊಂದು ಫೋಟೋ ಶೂಟ್ ನ್ನು ಅಪ್ಲೋಡ್ ಮಾಡುತ್ತಾರೆ. ಅಂತೆಯೇ ಇದೀಗ ದೀಪಿಕಾ ದಾಸ್ ಬಾಲಿ ಕಡೆ ಪ್ರಯಾಣ ಮಾಡಿದ್ದರು. ಆ ಸಂದರ್ಭದಲ್ಲಿ ಅಲ್ಲಿನ ಸಂಸ್ಕೃತಿ ಸಂಸ್ಕಾರ ತಕ್ಕಂತೆ ಉಡುಪು ಧರಿಸಿ ಫೋಟೋ ಶೂಟ್ ಮಾಡಿದ್ದಾರೆ.

ಸದ್ಯ ಪುರಾತಣ ದೇವಸ್ಥಾನಕ್ಕೆ ದೀಪಿಕಾ ದಾಸ್ ಭೇಟಿ ನೀಡಿದ್ದಾರೆ. ಅಂತೆಯೇ ಅಲ್ಲಿನ ಶೈಲಿಯನ್ನು ಫಾಲೋ ಮಾಡಿದ್ದಾರೆ. ಹಸಿರು ಮತ್ತು ಕ್ರೀಂ ಕಾಂಬಿಷೇನ್‌ನಲ್ಲಿ ಬಾಲಿ ಜನರಂತೆ ಸೀರೆ ಧರಿಸಿ ಕೈಯಲ್ಲಿ ಛತ್ರಿ ಹಿಡಿದು ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ‘ನಮ್ಮ ನಡುವೆ ಬೇರೆ ಬೇರೆ ಭಾಷೆ , ಬೇರೆ ಬೇರೆ ಸಂಪ್ರದಾಯ ಮತ್ತು ಬೇರೆ ಬೇರೆ ಮೈ ಬಣ್ಣ ಇರಬಹುದು ಆದರೆ ನಾವೆಲ್ಲಾ ಸೇರುವುದು ಮನುಷ್ಯನ ಜಾತಿಗೆ’ ಎಂದು ದೀಪಿಕಾ ದಾಸ್ ಬರೆದುಕೊಂಡಿದ್ದಾರೆ.

ಆದರೆ ದೀಪಿಕಾ ದಾಸ್ ಸೀರೆ ಧರಿಸಿ ಗೋಪುರದ ಮುಂದೆ ಪೋಸ್ ಕೊಟ್ಟಿದ್ದು ಓಕೆ ಆದ್ರೆ ಇದಕ್ಕೆ ಬ್ಲೌಸ್ ಹಾಕಿಲ್ಲ ಅನ್ನೋದು ಮಾತ್ರ ಬೇಸರ ತಂದಿದೆ. ಆದ್ದರಿಂದ ನೀವು ಯಾವ ದೇಶಕ್ಕೆ ಬೇಕಿದ್ದರೂ ಹೋಗಿ ಆದ್ರೆ ದಯವಿಟ್ಟು ಭಾರತೀಯ ಸಂಸ್ಕಾರವನ್ನು ಮರೆಯಬೇಡಿ ಎಂದಿದ್ದಾರೆ.

Leave A Reply

Your email address will not be published.