Bengaluru Mahalaxmi Murder Case: ಬೆಂಗಳೂರು ಮಹಾಲಕ್ಷ್ಮೀ ಕೊಲೆ ಪ್ರಕರಣ; ಇನ್ನೂ ಪತ್ತೆಯಾಗದ ರಕ್ತದ ಕಲೆ

Bengaluru Mahalaxmi Murder Case: ಬೆಂಗಳೂರು ನಗರದ ವೈಯಾಲಿಕಾವಲ್‌ನಲ್ಲಿ ನಡೆದ ಮಹಾಲಕ್ಷ್ಮೀ ಬರ್ಬರ ಹತ್ಯೆ ಪ್ರಕರಣ ಇದೀಗ ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರಿಗೆ ತಲೆ ನೋವಾಗಿದೆ. ಕೊಲೆಯಾದ ಮಹಾಲಕ್ಷ್ಮೀ ಮನೆಯಲ್ಲಿ ರಕ್ತದ ಕಲೆಗಳು ಮತ್ತು ದೇಹ ಕತ್ತರಿಸಿದ ಸ್ಥಳದ ಗುರುತುಗಳು ಇನ್ನೂ ಪತ್ತೆಯಾಗಿಲ್ಲ. ಮಹಾಲಕ್ಷ್ಮೀ ಮನೆಯನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿದರೂ ಎಲ್ಲೂ ರಕ್ತದ ಕಲೆಗಳು ಸಿಗದಿರುವ ರೀತಿಯಲ್ಲಿ ಕೊಲೆ ಆರೋಪಿ ಮನೆಯನ್ನು ಸ್ವಚ್ಛ ಮಾಡಿ ಪರಾರಿಯಾಗಿರುವುದಾಗಿ ವರದಿಯಾಗಿದೆ.

ರಕ್ತ ಕಾಣಬಾರದೆಂದು ಸ್ವಚ್ಛ ಮಾಡಿದರೂ ರಕ್ತದ ಕಲೆಗಳನ್ನು ಎಫ್‌ಎಸ್‌ಎಲ್‌ ತಜ್ಞನರು ಲುಮಿನಾಲ್‌ ಎಂಬ ಕೆಮಿಕಲ್‌ ಬಳಸಿ, 200 ದಿನಗಳ ಹಿಂದಿನ ರಕ್ತದ ಕಲೆಗಳನ್ನು ಕೂಡಾ ಬಳಸಿ ಪತ್ತೆ ಮಾಡುತ್ತಾರೆ. ಆದರೆ ಲುಮಿನಾಲ್‌ ಕೆಮಿಕಲ್‌ ಬಳಸಿ ಮಹಾಲಕ್ಷ್ಮೀ ಕೊಲೆ ಪ್ರಕರಣದಲ್ಲಿ ಬಳಸಿದರೂ ಎಲ್ಲೂ ರಕ್ತದ ಕಲೆಗಳು ಕಂಡು ಬಂದಿಕಲ್ಲ. ಕೊಲೆ ಆರೋಪಿ ಯಾವುದೋ ಕೆಮಿಕಲ್‌ ಬಳಸಿ ಮನೆ ಸ್ವಚ್ಛ ಮಾಡಿರುವ ಶಂಕೆ ಇದೀಗ ಪೊಲೀಸರಿಗೆ ವ್ಯಕ್ತವಾಗಿದೆ.

ಈ ರೀತಿಯ ವರ್ತನೆ ನೋಡಿದರೆ ಕೊಲೆ ಆರೋಪಿ ಮಹಾಲಕ್ಷ್ಮೀಯನ್ನು ಕೊಲೆ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಂಡೇ ಬಂದಿರುವ ರೀತಿ ಕಾಣುತ್ತದೆ ಎಂದ ತನಿಖಾಧಿಕಾರಿಗಳಿಗೆ ಸಂಶಯ ವ್ಯಕ್ತವಾಗಿದೆ.

Leave A Reply

Your email address will not be published.