Free Gold: ಈ ನಾಲ್ಕು ಸ್ಥಳಗಳಲ್ಲಿ ಉಚಿತವಾಗಿ ಚಿನ್ನ ಸಿಗುತ್ತೆ! ಎರಡು ಸ್ಥಳ ನಮ್ಮ ದೇಶದಲ್ಲೇ ಇದೆ?!

Free Gold: ಚಿನ್ನ ಖರೀದಿ ಒಂದು ರೀತಿಯ ಹೂಡಿಕೆಯ ಮಾರ್ಗ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ದ ಮೇಲೆ ಹೂಡಿಕೆ ಮಾಡುತ್ತಾರೆ. ಅದಲ್ಲದೆ ವರ್ಷ ಕಳೆದಂತೆ ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಬೆಲೆ ಎಷ್ಟೇ ಹೆಚ್ಚಾದರೂ ಖರೀದಿಸುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಆದರೆ, ಇಷ್ಟು ಮೌಲ್ಯ ಹೊಂದಿರುವ ಈ ಚಿನ್ನ ಜಗತ್ತಿನಲ್ಲಿ 4 ಸ್ಥಳಗಳಲ್ಲಿ ಉಚಿತವಾಗಿ ದೊರೆಯುತ್ತದೆ ಅನ್ನೋದು ನಿಮಗೆ ಗೊತ್ತಿದೆಯಾ! ಹೌದು, ಇವುಗಳಲ್ಲಿ ಎರಡು ಪ್ರದೇಶಗಳು ನಮ್ಮ ದೇಶದಲ್ಲಿವೆ.

 

ಹೌದು, ಚಿನ್ನ ಸಿಗುವ ಜಾಗವಿದೆ ಎಂದು ಹೇಳಿದರೆ ನೀವು ಒಪ್ಪಿಕೊಳ್ಳಲು ಸ್ವಲ್ಪ ಕಷ್ಟಕರ. ಆದ್ರೆ ಅಂತಹ ಸ್ಥಳಗಳು ಯಾವುದೆಂದು ಇಲ್ಲಿ ತಿಳಿಸಲಾಗಿದೆ. ನೀವು ಇಲ್ಲಿ ಸ್ವಲ್ಪ ಕಷ್ಟ ಪಟ್ಟರೆ ನಿಮಗೆ ಉಚಿತವಾಗಿ ಚಿನ್ನ ಸಿಗುತ್ತದೆ. ಸದ್ಯ ಜಗತ್ತಿನಲ್ಲಿ ಅಂತಹ 4 ಸ್ಥಳಗಳಿವೆ. ಅವುಗಳಲ್ಲಿ 2 ಭಾರತದಲ್ಲಿವೆ. ಮುಖ್ಯವಾಗಿ ನಮ್ಮ ದೇಶದಲ್ಲೂ ಚಿನ್ನ ಉಚಿತವಾಗಿ (Free Gold) ಸಿಗುವ ಸ್ಥಳಗಳಿವೆ. ಭಾರತದಲ್ಲಿ ಇಂತಹ ಎರಡು ನದಿಗಳಿವೆ. ಅದುವೇ ಸ್ವರ್ಣರೇಖಾ ಚಿನ್ನ ಹರಿಯುವ ನದಿ. ಇಲ್ಲಿ ಜನರು ಚಿನ್ನವನ್ನು ಹೊರತೆಗೆಯಲು ನದಿಯಿಂದ ಮರಳನ್ನು ಹೊರತೆಗೆಯುತ್ತಾರೆ.

ಇನ್ನು ಕರ್ಕರಿ ನದಿಯು ಸ್ವರ್ಣರೇಖಾ ನದಿಯ ಉಪನದಿಯಾಗಿದ್ದು, ಇಲ್ಲೂ ಕೂಡ ಮರಳಿನಲ್ಲಿ ಚಿನ್ನ ಸಿಗುತ್ತದೆ. ಈ ನದಿಯ ಮರಳಲ್ಲಿ ಮಿಶ್ರಣವಾಗಿರುವ ಚಿನ್ನವನ್ನು ಪಡೆಯಲು ಜನರು ನದಿಯಿಂದ ಮರಳನ್ನು ತೆಗೆಯುತ್ತಾರೆ.

ಇನ್ನು ಕೆನಡಾದ ಕಿಲೋಡೈಕ್ ನದಿಯಿಂದ ಹೆಚ್ಚಿನ ಪ್ರಮಾಣದ ಚಿನ್ನವನ್ನು ಗಣಿಗಾರಿಕೆ ಮಾಡಲಾಗುತ್ತದೆ. ಇದು ಈ ವಲಯದ ಅನೇಕ ಜನರಿಗೆ ಜೀವನಾಧಾರವಾಗಿದೆ.

ಜೊತೆಗೆ ಯುನೈಟೆಡ್ ಸ್ಟೇಟ್ಸ್‌ನ ಮಿಸೌರಿ ನದಿಯ ಮರಳಿನಲ್ಲಿ ಚಿನ್ನ ಸಿಗುತ್ತದೆ. ಇಲ್ಲಿನ ಸ್ಥಳೀಯರು ನದಿಯಲ್ಲಿ ಸಿಕ್ಕ ಚಿನ್ನವನ್ನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ.

Leave A Reply

Your email address will not be published.