Bigg Boss Kannada 11: ಈ ಬಾರಿಯ ಬಿಗ್ ಬಾಸ್ ನಲ್ಲಿ ಸ್ವರ್ಗ- ನರಕದ ಸಣ್ಣ ಝಲಕ್ ಪ್ಲೇ ಇಲ್ಲಿದೆ ನೋಡಿ!

Bigg Boss Kannada 11:  ಕನ್ನಡಿಗರ ಫೆವರೇಟ್ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ -11 (Bigg Boss Kannada -11) ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದ್ದು, ಪ್ರೊಮೊ ಕೂಡಾ ಬಿಡುಗಡೆ ಆಗಿದೆ. ಇನ್ನು ನಿರೂಪಕನಾಗಿ ನಮ್ಮೆಲ್ಲರ ನೆಚ್ಚಿನ ಕಿಚ್ಚ ಮಿಂಚಲಿದ್ದಾರೆ. ಅಂತೆಯೇ ಇದೀಗ ಮೊದಲ ಪ್ರೋಮೋದಂತೆ 2ನೇ ಪ್ರೋಮೋ ಕೂಡ ಸಖತ್ ಖಡಕ್ ಆಗಿ‌ ಮೂಡಿ ಬಂದಿದೆ.‌ ಇದರಲ್ಲಿ ಸುದೀಪ್ (Sudeep) ಸ್ವರ್ಗ ಮತ್ತು ನರಕದ ಪಾಠವನ್ನು ಮಾಡಿದ್ದಾರೆ.

 

ಹೌದು, ಈ ಪ್ರೋಮೋ ಆರಂಭದಲ್ಲಿಯೇ ಕೆಲವು ಯುವಕ-ಯುವತಿಯರು ಸ್ವರ್ಗದಲ್ಲಿ ಡೈನಿಂಗ್ ಟೇಬಲ್ ಮೇಲೆ ಕುಳಿತು ಮೋಜು ಮಸ್ತಿ ಮಾಡಿ ಆಹಾರ ಸೇವಿಸುತ್ತಿದ್ದಾರೆ. ಆಗ ಎಂಟ್ರಿ ಕೊಡುವ ಕಿಚ್ಚ ಸುದೀಪ್, ಕತ್ತಲು, ಬೆಂಕಿ, ನೋವು, ಹಿಂಸೆ, ನರಕವಾದರೆ ಬೆಳಕು, ಸಂತೋಷ, ಸುಖ ನೆಮ್ಮದಿ ಸ್ವರ್ಗದಲ್ಲಿರುತ್ತೆ. ಕೆಲವೊಮ್ಮೆ ನರಕದಲ್ಲಿರುವವರು ಸ್ವರ್ಗದಲ್ಲಿರುತ್ತಾರೆ, ಸ್ವರ್ಗದಲ್ಲಿರುವವರು ನರಕದಲ್ಲಿರುತ್ತಾರೆ. ಎಂದು ತಮ್ಮದೇ ಶೈಲಿಯಲ್ಲಿ ಸ್ವರ್ಗ (Heaven) ಮತ್ತು ನರಕದ (Hell) ಜೀವನದ ಬಗ್ಗೆ ಮಾತನಾಡಿದ್ದಾರೆ.

ಪ್ರೋಮೊ ವಿಡಿಯೋ ಇಲ್ಲಿದೆ

ಆದ್ರೆ ಇಲ್ಲಿ ಯಾರು ಸ್ನೇಹಿತರಾಗುತ್ತಾರೆ ಎಂದು ನಂಬಿರುತ್ತೇವೆಯೋ ಅವರೇ ಬೆನ್ನಿಗೆ ಚೂರಿ ಹಾಕಬಹುದು, ಈ ಮೂಲಕ ಬಿಗ್​ ಬಾಸ್ ಮನೆಯಲ್ಲಿ ಯಾವ ಸಂಬಂಧವೂ ಶಾಶ್ವತವಲ್ಲ. ಇದು ಬಿಗ್ ಬಾಸ್ ಹೊಸ ಅಧ್ಯಾಯ, ಒಟ್ಟಿನಲ್ಲಿ ಎರಡರಲ್ಲೂ ಕಿಚ್ಚು ಇರುತ್ತೆ ಎಂದು ಪ್ರೋಮೋ ಮೂಲಕ ಮಾತನಾಡಿದ್ದಾರೆ. ಈ ಮೂಲಕ ಈ ಸಲ ದೊಡ್ಮನೆ ಆಟ ಸಖತ್ ಟ್ವಿಸ್ಟ್ ನೀಡುತ್ತೆ ಅನ್ನೋದು ಕನ್ಫರ್ಮ್ ಆಗಿದೆ.

ಮುಖ್ಯವಾಗಿ ಹೊಸ ಪ್ರೋಮೋದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಸಮಯದ ಬಗ್ಗೆ ತಿಳಿಸಿದ್ದು,  ಸೆ.29ರಂದು ಸಂಜೆ 6ಕ್ಕೆ ಗ್ರ್ಯಾಂಡ್ ಆಗಿ ಲಾಂಚ್ ಆಗುತ್ತಿದ್ದು, ಪ್ರತಿದಿನ ರಾತ್ರಿ 9.30ಕ್ಕೆ ಶೋ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ.

Leave A Reply

Your email address will not be published.