Surya Ghar Yojana: ಪಿಎಂ ಸೂರ್ಯಘರ್ ಯೋಜನೆಯಲ್ಲಿ ಸಬ್ಸಿಡಿ ಜೊತೆಗೆ ಆದಾಯ ಪಡೆಯಲು ಇಲ್ಲಿದೆ ಮಾಹಿತಿ!

Share the Article

Surya Ghar Yojana: ಪ್ರಧಾನಿ ಸೂರ್ಯ ಘರ್ ಯೋಜನೆ (Surya Ghar Yojana) ಮೂಲಕ ಪ್ರತಿ ತಿಂಗಳು 300 ಯುನಿಟ್ ಉಚಿತ ವಿದ್ಯುತ್ ಲಾಭವನ್ನು ಸುಲಭವಾಗಿ ಪಡೆಯಲು ಸಾಧ್ಯವಿದೆ. ಹೌದು, ಮನೆಯ ಮೇಲೆ ಸೌರಫಲಕ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಹಾಗೂ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಅದರಿಂದಲೂ ಆದಾಯಗಳಿಸುವ ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಭರ್ಜರಿ ಸಬ್ಸಿಡಿಯನ್ನು ನೀಡುತ್ತಿದೆ.

ನಿಮ್ಮ ಮನೆಯ ಮೇಲ್ಛಾವಣಿಯಲ್ಲಿ ಸೌರಫಲಕ ಅಳವಡಿಸಿ ಇದರಿಂದ ಮನೆಗೆ ಬೇಕಾಗುವ ವಿದ್ಯುತ್ ಪಡೆಯಲು ಹಾಗೂ ಹೆಚ್ಚುವರಿ ವಿದ್ಯುತ್‌ನ್ನು ಮಾರಾಟ ಮಾಡಲು ಈ ಯೋಜನೆ ಅವಕಾಶ ಮಾಡಿಕೊಡುತ್ತದೆ. ಉಚಿತ ವಿದ್ಯುತ್ ಹಾಗೂ ಆದಾಯ ಎರಡನ್ನೂ ಈ ಯೋಜನೆ ಮೂಲಕ ಪಡೆಯಲು ಸಾಧ್ಯವಿದೆ.

ಮುಖ್ಯವಾಗಿ ಸೌರಫಲಕ ಅಳವಡಿಕೆಗೆ 1 ಕಿಲೋವ್ಯಾಟ್ ಅಳವಡಿಕೆ ವೆಚ್ಚ ಸರಿಸುಮಾರು 90,000 ರೂಪಾಯಿ, ಇನ್ನು 2 ಕಿಲೋವ್ಯಾಟ್‌ಗೆ 1.5 ಲಕ್ಷ ರೂಪಾಯಿ ಹಾಗೂ 3 ಕಿಲೋವ್ಯಾಟ್‌ಗೆ 2 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಇಷ್ಟು ಮೊತ್ತ ವೆಚ್ಚ ಮಾಡಿ ಸೌರಫಲಕ ಹಾಕಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಸಬ್ಸಿಡಿ ಮೊತ್ತವನ್ನು ಬಳಕೆದಾರನ ಖಾತೆಗೆ ಜಮೆ ಮಾಡಲಿದೆ.

ಒಂದು ವೇಳೆ ನೀವು ಒಂದು ಕಿಲೋವ್ಯಾಟ್ ಸೌರಫಲಕ ವ್ಯವಸ್ಥೆ ಅಳವಡಿಸಿದರೆ ಕೇಂದ್ರ ಸರ್ಕಾರ 18,000 ರೂಪಾಯಿ ಸಬ್ಸಿಡಿ ನೀಡಲಿದೆ. ಇನ್ನು 2 ಕಿಲೋವ್ಯಾಟ್‌ಗೆ 30,000 ರೂಪಾಯಿ ಹಾಗೂ 3 ಕಿಲೋವ್ಯಾಟ್‌ಗೆ 78,000 ರೂಪಾಯಿ ಸಬ್ಸಿಡಿ ನೀಡಲಿದೆ.

ಅಲ್ಲದೆ ಉಚಿತ ವಿದ್ಯುತ್ ಜೊತೆಗೆ ಹೆಚ್ಚುವರಿ ವಿದ್ಯುತ್‌ನ್ನು ಸ್ಥಳೀಯ ಬೆಸ್ಕಾಂ, ಹೆಸ್ಕಾಂ ಅಥವಾ ಇತರ ಕೆಇಬಿ ಸಂಸ್ಥೆಗೆ ಮಾರಾಟ ಮಾಡಲು ಈ ವ್ಯವಸ್ಥೆ ಅವಕಾಶ ಮಾಡಿಕೊಡುತ್ತದೆ. ಇದರಿಂದ ಬಳಕೆದಾರರು ಆದಾಯವನ್ನೂ ಗಳಿಸಲು ಸಾಧ್ಯವಿದೆ.

ಈ ಯೋಜನೆಗೆ ಯಾರು ಬೇಕಾದರೂ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರದ ಅಧಿಕೃತ ಪಿಎಂ ಘರ್ ಮುಕ್ತ ಬಿಜಿಲಿ ಯೋಜನೆ ಅಧಿಕೃತ ವೆಬ್‌ಸೈಟ್ (https://www.pmsuryaghar.gov.in/) ಮೂಲಕ ಸುಲಭವಾಗಿ ಸಲ್ಲಿಕೆ ಮಾಡಬಹುದು.

Leave A Reply