Postmortem: 40ಕ್ಕೂ ಹೆಚ್ಚು ಪೀಸ್ ಮಾಡಿದ ಭೀಕರ ಕೊಲೆಯ ಮರಣೋತ್ತರ ಪರೀಕ್ಷೆ ಹೇಗೆ ನಡೆಯುತ್ತೆ ಗೊತ್ತಾ?
Postmortem: 29 ವರ್ಷದ ಮಹಾಲಕ್ಷ್ಮಿ ಎಂಬ ಮಹಿಳೆಯನ್ನ ವ್ಯಕ್ತಿಯೋರ್ವ ರಣಭೀಕರವಾಗಿ ಕೊಲೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಮಹಿಳೆಯ ಮೃತದೇಹವನ್ನು ಒಂದಲ್ಲ, ಎರಡಲ್ಲ ಬರೋಬ್ಬರಿ 40ಕ್ಕೂ ಹೆಚ್ಚು ಪೀಸ್ ಮಾಡಿ ಫ್ರಿಡ್ಜ್‌ನಲ್ಲಿಟ್ಟಿರುವ (Fridge) ಘಟನೆ ಇಡೀ ಬೆಂಗಳೂರನ್ನೇ ಬೆಚ್ಚಿಬೀಳಿಸಿದೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಕೊಲೆಯಾದ ಮಹಾಲಕ್ಷ್ಮಿ ಕಳೆದ ಒಂದು ವಾರದಿಂದ ಕೆಲಸಕ್ಕೆ ರಜೆ ಮಾಡಿದ್ದು, 10 ದಿನಗಳ ಹಿಂದೆಯೇ ಮಹಾಲಕ್ಷ್ಮಿ ಮೊಬೈಲ್ (Mobile) ಸಹ ಸ್ವಿಚ್‌ಆಫ್ ಆಗಿದೆ. ಹಾಗಾಗಿ 10 ದಿನಗಳ ಹಿಂದೆಯೇ ಕೊಲೆಯಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಇನ್ನು ಕೊಲೆ ಮಾಡಿರುವ ಆರೋಪಿ ತಲೆಮರೆಸಿ ಕೊಂಡಿದ್ದು ಆತನ ಪತ್ತೆಗಾಗಿ ಈಗಾಗಲೇ ಎಂಟು ತಂಡ ರಚಿಸಲಾಗಿದೆ.
ಆರೋಪಿಯು ಕೊಲೆ ಮಾಡಿದ ನಂತರ ದೇಹದ ಪೀಸ್‌ಗಳನ್ನ ನೀಟಾಗಿ ಜೋಡಿಸಿ ಫ್ರಿಡ್ಜ್ ಆನ್ ಮಾಡಿದ್ದ ಕಾರಣ ದೇಹದ ಪೀಸ್‌ಗಳು ಕೊಳೆಯುವ ಹಂತಕ್ಕೆ ಹೋಗಿರಲಿಲ್ಲ. ಇನ್ನು ವಿಷ್ಯ ತಿಳಿದು ಬಿಲ್ಡಿಂಗ್‌ಗೆ ಎಫ್‌ಎಸ್‌ಎಲ್ ಟೀಂ ಎಂಟ್ರಿ ಕೊಟ್ಟಾಗ ಮೃತದೇಹದ ದುರ್ವಾಸನೆ ಬರುತ್ತಿದ್ದು, ಫ್ರಿಡ್ಜ್‌ನೊಳಗೆ ಇಟ್ಟಿದ್ದ ದೇಹದ ತುಂಡುಗಳಿಂದ ರಕ್ತ ತೊಟ್ಟಿಕ್ಕುತ್ತಿದ್ದವು ಎನ್ನಲಾಗಿದೆ.
ಸದ್ಯ ಮಹಾಲಕ್ಷ್ಮಿ ಮೃತದೇಹ ತುಂಡುಗಳ ಮರಣೋತ್ತರ ಪರೀಕ್ಷೆ (Postmortem) ಭಾನುವಾರ (ಇಂದು) ನಗರದ ಬೌರಿಂಗ್ ಆಸ್ಪತ್ರೆಯಲ್ಲಿ (Bowring Hospital) ನಡೆಯಲಿದ್ದು, ಈ ಭೀಕರ ಕೊಲೆಯ ಪೋಸ್ಟ್ ಮಾರ್ಟಂ ಹೇಗೆ ನಡೆಯುತ್ತೆ ಅನ್ನೋದು ನಿಮ್ಮ ಪ್ರಶ್ನೆ ಇರಬಹುದು.
ಮಾಹಿತಿ ಪ್ರಕಾರ, ಮೊದಲು ಪ್ರತಿ ಪೀಸ್‌ಗೂ ನಂಬರಿಂಗ್ ಮಾಡಲಾಗುತ್ತೆ. ನಂತರ ಪ್ರತಿ ಪೀಸ್ ರೆಡಿಯಾಲಿಜಿಕಲ್ ಎಕ್ಸಾಮೀನೇಶನ್ ಮಾಡಲಾಗುತ್ತೆ, ನಂತರ ತುಂಡುಗಳ ಟಾಕ್ಸಿಕಲ್ ಎಕ್ಸಾಮಿನೇಷನ್ ಮತ್ತು ಪ್ಯಾಥಾಲಿಜಿಕಲ್ ಎಕ್ಸಾಮಿನೇಷನ್ ಮಾಡಲಾಗುತ್ತೆ, ಅದಾದ ನಂತರ DNA ಪರೀಕ್ಷೆ ಮಾಡಲಾಗುತ್ತೆ. ಅಂತಿಮವಾಗಿ ಕಂಡು ಬಂದ ಅಂಶಗಳ ಕುರಿತು ವರದಿಯನ್ನ ಸಿದ್ಧಪಡಿಸಲಾಗುತ್ತೆ.
ಜೊತೆಗೆ ಆರೋಪಿಯನ್ನು ಪತ್ತೆ ಹಚ್ಚಲು ಕೃತ್ಯದ ನಡೆದ ಸ್ಥಳಕ್ಕೆ ಬೆರಳಚ್ಚು, ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ತಜ್ಞರು, ಶ್ವಾನದಳ ಹಾಗೂ ವೈದ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.