LPG Gas Cylinder: ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಒಂದೇ ಬಾರಿ 4 ಆಫರ್‌ ಲಭ್ಯ!

LPG Gas Cylinder: ಪ್ರತಿದಿನ ಅಡುಗೆ ಮಾಡೋದಕ್ಕೆ ಗ್ಯಾಸ್‌ ಬೇಕೇ ಬೇಕು. ಆದ್ರೆ ಇತ್ತೀಚಿಗೆ ಅಗತ್ಯವಾಗಿ ದಿನ ಬಳಕೆಗೆ ಬೇಕಾಗಿರುವ ಗ್ಯಾಸ್ ಬೆಲೆ ಗಗನಕ್ಕೆ ಏರಿದೆ. ಹಾಗಿರುವಾಗ ನೀವು ಗ್ಯಾಸ್‌ ಬುಕ್ ಮಾಡುವಾಗ ಇದೊಂದು ಟಿಪ್ ಫಾಲೋ ಮಾಡಿದ್ರೆ ಉತ್ತಮ ಆಫರ್ ನ್ನು ಪಡೆದುಕೊಳ್ಳಬಹುದು. ಹೇಗೆ ಅಂತ ಇಲ್ಲಿ ತಿಳಿಸಲಾಗಿದೆ.

 

ಮುಖ್ಯವಾಗಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಲು ಬೇರೆ ಬೇರೆ ಆಯ್ಕೆ ಇದೆ. ಆದ್ರೆ ಈ ಮೂಲಕ ನೀವು ಗ್ಯಾಸ್ ಸಿಲಿಂಡರ್ ಬುಕ್ ಮಾಡಿದಲ್ಲಿ ಉತ್ತಮ ಕ್ಯಾಶ್ ಬ್ಯಾಕ್ ಪಡೆಯಬಹುದು. ಹೌದು, ನೀವು ಒಂದು ವೇಳೆ ಬಜಾಜ್ ಫಿನ್‌ಸರ್ವ್ ಮೂಲಕ LPG ಗ್ಯಾಸ್ ಸಿಲಿಂಡರ್ ಬುಕಿಂಗ್‌ ಮಾಡಿದಲ್ಲಿ ಆಕರ್ಷಕ ಕೊಡುಗೆಯನ್ನು ಪಡೆಯಬಹುದಾಗಿದೆ.

ನೀವು ಬಜಾಜ್ ಫಿನ್‌ಸರ್ವ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಬುಕ್ ಮಾಡಿದರೆ, ರೂ. ನೀವು 70 ಕ್ಯಾಶ್‌ಬ್ಯಾಕ್ ಪಡೆಯಬಹುದು. ಆದರೆ ಗ್ಯಾಸ್ ಸಿಲಿಂಡರ್ ಅನ್ನು ಬಜಾಜ್ ಪೇ ಯುಪಿಐ ಮೂಲಕ ಪಾವತಿಸಿದರೆ ಮಾತ್ರ ಈ ಆಫರ್ ಸಿಗುತ್ತದೆ.

ಅಷ್ಟು ಮಾತ್ರವಲ್ಲದೆ ವಿದ್ಯುತ್ ಬಿಲ್, ಮೊಬೈಲ್ ರೀಚಾರ್ಜ್, ಡಿಟಿಎಚ್ ರೀಚಾರ್ಜ್ ಇತ್ಯಾದಿಗಳ ಮೇಲೆ ಸಹ ಉತ್ತಮ ಆಫರ್‌ಗಳು ಲಭ್ಯವಿವೆ. ಅಂದರೆ ಒಟ್ಟು ರೂ. 230 ಕ್ಯಾಶ್‌ಬ್ಯಾಕ್ ಸಿಗುತ್ತೆ.

ಇನ್ನು ನೀವು ಬಜಾಜ್ ಪೇ UPI ಮೂಲಕ ಮೊಬೈಲ್ ರೀಚಾರ್ಜ್ 45 ರೂಪಾಯಿವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು. ಅದೇ ವಿದ್ಯುತ್ ಬಿಲ್ ಕಟ್ಟಿದರೆ 70 ರೂಪಾಯಿ ಕ್ಯಾಶ್‌ಬ್ಯಾಕ್ ಕ್ಲೈಮ್ ಮಾಡಬಹುದು.

ಡಿಟಿಎಚ್ ವಿಚಾರಕ್ಕೆ ಬಂದರೆ 45 ರೂಪಾಯಿ ಕ್ಯಾಶ್‌ಬ್ಯಾಕ್ ಲಭ್ಯವಿದೆ. ನೀವು ಬಜಾಜ್ ಪೇ UPI ಮೂಲಕ ಮಾತ್ರ ವಹಿವಾಟುಗಳನ್ನು ನಡೆಸಬೇಕಾಗುತ್ತದೆ. ಆಗ ಮಾತ್ರ ಆಫರ್‌ಗಳು ಅಪ್ಲೈ ಆಗುತ್ತೆ.

ಅದರೊಂದಿಗೆ Paytm ಸಿಲಿಂಡರ್ ಬುಕಿಂಗ್ ಮೇಲೆ ನೀವು 10 ರಿಂದ 1000 ವರೆಗೆ ಕ್ಯಾಶ್​​ಬ್ಯಾಕ್​ ಪಡೆಯಬಹುದು. ಇದಕ್ಕಾಗಿ ಗ್ಯಾಸ್1000 ಪ್ರೋಮೋ ಕೋಡ್ ಬಳಸಬೇಕು. ಪಿಎನ್‌ಬಿ ಕ್ರೆಡಿಟ್ ಕಾರ್ಡ್ ಮೂಲಕ ಸಿಲಿಂಡರ್ ಬುಕ್ ಮಾಡಿದರೆ 30 ಕ್ಯಾಶ್‌ಬ್ಯಾಕ್. ನೀವು ಪ್ರೋಮೋ ಕೋಡ್ FreeGas ಅನ್ನು ಸಹ ಬಳಸಬಹುದು.

1 Comment
  1. monperatoto says

    Daftar Resmi Sekarang Juga situs togel Terpercaya

Leave A Reply

Your email address will not be published.