Darshan: ಬಿಡುಗಡೆ ಆಗ್ತಿದ್ದಂತೆ ರೇಣುಕಾ ಸ್ವಾಮಿ ಕುಟುಂಬಕ್ಕೆ ಏನು ಮಾಡ್ತೀನಿ ಗೊತ್ತಾ? ಜೈಲು ಸಿಬ್ಬಂದಿ ಬಳಿ ದರ್ಶನ್ ಹೇಳಿದ್ದೇನು?

Darshan: ರೇಣುಕಾಸ್ವಾಮಿ ಕೊಲೆ ಆರೋಪದ (Renukaswamy Murder Case) ಹಿನ್ನೆಲೆ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿರುವ (Ballary Central Jail) ದರ್ಶನ್ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ ಆಗುತ್ತಲೇ ಇದ್ದು ಬಿಡುಗಡೆ ಭಾಗ್ಯ ಸದ್ಯಕ್ಕಿಲ್ಲ ಎನಿಸುತ್ತದೆ. ಈ ನೋವಿನ ನಡುವಲ್ಲೂ ದರ್ಶನ್ ಕೊಲೆ ಮಾಡಿದಕ್ಕಾಗಿ ತುಂಬಾ ಪಶ್ಚಾತ್ತಾಪ ಪಡುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರು ಹೊರಗಡೆ ಹೋದ್ಮೇಲೆ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡ್ತೀನಿ ಎಂದು ಕೊಲೆ ಆರೋಪಿ ದರ್ಶನ್ (Actor Darshan) ಪಶ್ಚಾತಾಪದ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ.

 

ಹೌದು, ನಟ ದರ್ಶನ್ ಗೆ ರೇಣುಕಾಸ್ವಾಮಿ ಹತ್ಯೆ ಬಗ್ಗೆ ಪಶ್ಚಾತಾಪ ಕಾಡಲಾರಂಭಿಸಿದೆಯಂತೆ. ಈ ಹಿನ್ನೆಲೆಯಲ್ಲಿ ಜೈಲು ಸಿಬ್ಬಂದಿಯೊಬ್ಬರ ಜೊತೆ ಮನ ಬಿಚ್ಚಿ ಮಾತನಾಡಿದ ದಚ್ಚು ‘ನಾನು ಇಲ್ಲಿಂದ ಹೊರಗಡೆ ಹೋದಮೇಲೆ ರೇಣುಕಾಸ್ವಾಮಿ ಕುಟುಂಬವನ್ನು ಭೇಟಿಯಾಗ್ತೀನಿ, ಸಹಾಯ ಮಾಡ್ತೀನಿ ಎಂದು ಹೇಳಿರವುದಾಗಿ ಮೂಲಗಳು ತಿಳಿಸಿವೆ.

ಅಲ್ಲದೆ ‘ಏನೋ ಮಾಡಲು ಹೋಗಿ ಏನೋ ಆಗಿದೆ. ನನ್ನದು ಸಾಯಿಸುವ ಮನಸಲ್ಲ, ನಾನಂತೂ ಕೊಲೆ ಮಾಡಿಲ್ಲ, ಮೇಲೊಬ್ಬನಿದ್ದಾನೆ. ಎಲ್ಲವನ್ನೂ ಅವನು ನೋಡುತ್ತಾನೆ ಎಂದು ಜೈಲು ಸಿಬ್ಬಂದಿಯೊಬ್ಬರ ಜೊತೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ. ಕಳೆದ ಎರಡು ದಿನದಿಂದ ಆಕ್ಟೀವ್ ಆಗಿರುವ ದರ್ಶನ್ ರೇಣುಕಾಸ್ವಾಮಿ ಕುಟುಂಬದ ಬಗ್ಗೆ ಪತ್ನಿ ವಿಜಯಲಕ್ಷ್ಮಿ ಬಳಿಯೂ ಮಾತನಾಡಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.