Dasara Holidays 2024: ಈ ಬಾರಿ ದಸರಾ ರಜೆಯ ಮೋಜು ಎಷ್ಟು ದಿನ? ಎಲ್ಲಿಂದ ಎಲ್ಲಿವರೆಗೆ ಇಲ್ಲಿ ತಿಳಿಯಿರಿ
Dasara Holidays 2024: ಪ್ರತಿ ವರ್ಷವು ದಸರಾ ಬಂತೆಂದರೆ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗುತ್ತದೆ. ಈ ಹಿನ್ನಲೆ ನಗರದಲ್ಲಿರುವ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರು ತಮ್ಮ ಹುಟ್ಟೂರಿಗೆ ಪ್ರಯಾಣ ಬೆಳೆಸುತ್ತಾರೆ.
ಅಂತೆಯೇ ಈ ವರ್ಷ (Dasara Holidays 2024) ದಸರಾ ರಜೆ ಯಾವಾಗ ಮತ್ತು ಎಷ್ಟು ರಜೆ ಎಂದು ಇಲ್ಲಿ ತಿಳಿಸಲಾಗಿದೆ.
ಈಗಾಗಲೇ ರಾಜ್ಯದಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ದಸರಾ ರಜೆ ಘೋಷಿಸಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಅದರಂತೆ ಈ ವರ್ಷ ರಾಜ್ಯದ ಶಾಲೆಗಳಿಗೆ 10 ದಿನ ರಜೆ ನೀಡುವ ಸಾಧ್ಯತೆ ಇದೆ. ಅಂದರೆ ಅಕ್ಟೋಬರ್ 4ರಿಂದ ದಸರಾ ರಜೆ ಆರಂಭವಾಗಲಿದ್ದು, ಅಕ್ಟೋಬರ್ 13ಕ್ಕೆ ರಜಾದಿನಗಳು ಕೊನೆಗೊಳ್ಳುವ ಸಾಧ್ಯತೆ ಇದೆ. ಅಕ್ಟೋಬರ್ 14ರಿಂದ ಮತ್ತೆ ಶಾಲಾ-ಕಾಲೇಜುಗಳು ಆರಂಭವಾಗಲಿವೆ. ಅದರೊಂದಿಗೆ ಅಕ್ಟೋಬರ್ 2 ರಂದು ಗಾಂಧಿ ಜಯಂತಿಯಂದು ರಜೆ ಬರುತ್ತದೆ. ಅಕ್ಟೋಬರ್ 3ರಂದು ಕೂಡ ಸರ್ಕಾರ ರಜೆ ನೀಡಿದಲ್ಲಿ ಒಟ್ಟು 12 ದಿನ ರಜೆ ಇರಲಿದೆ.
ಒಟ್ಟಿನಲ್ಲಿ ಅಕ್ಟೋಬರ್ ತಿಂಗಳ ರಜೆಯ ಕಾರಣ 17 ದಿನ ಮಾತ್ರ ತರಗತಿಗಳು ನಡೆಯಲಿವೆ. ಆದರೆ, ದಸರಾ ರಜೆಗಳ ಕುರಿತು ರಾಜ್ಯ ಸರ್ಕಾರ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಒಂದು ವೇಳೆ ಘೋಷಣೆ ಬಂದರೆ ಒಟ್ಟು ಎಷ್ಟು ದಿನಗಳ ರಜೆಗಳ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.