Rat: ಇಲಿಗಳನ್ನು ಕೊಲ್ಲದೆ ಅವುಗಳಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಉಪಾಯ!

Rat: ಮನೆಯಲ್ಲಿ ಇಲಿಗಳ ಕಾಟ ತಪ್ಪಿಸಲು ಅವುಗಳನ್ನು ಓಡಿಸುವ ಪ್ರಯತ್ನದಲ್ಲಿ ನೀವು ಹಲವು ಭಾರಿ ಸೋತಿರಬಹುದು. ಆದ್ರೆ ನಿಮಗಾಗಿ ಇಲ್ಲಿ ಸುಲಭವಾದ ವಿಧಾನ ತಿಳಿಸಲಾಗಿದೆ. ಹೌದು, ಇಲಿಗಳನ್ನು (Rat) ಕೊಲ್ಲದೆ ಅವುಗಳಿಂದ ಮುಕ್ತಿ ಪಡೆಯಲು ಅದಕ್ಕಾಗಿ ಮನೆಯಲ್ಲಿರುವ ಈ ಪದಾರ್ಥಗಳು ಬಳಸಿದರೆ ಸಾಕು.

 

ಮುಖ್ಯವಾಗಿ ಇಲಿಗಳನ್ನು ಓಡಿಸಲು ನೀವು ಪುದೀನಾ ಎಣ್ಣೆಯನ್ನು ಬಳಸಿ. ನೀವು ಹತ್ತಿಯಲ್ಲಿ ಪುದೀನಾ ಎಣ್ಣೆಯನ್ನು ಅದ್ದಿ ಮೂಲೆಗಳಲ್ಲಿ ಇಟ್ಟಾಗ ಪುದಿನಾ ಎಣ್ಣೆ ಯ ಗಾಢ ವಾಸನೆಯಿಂದ ಇಲಿಗಳು ದೂರ ಹೋಗುತ್ತವೆ.

ಇನ್ನು ಇಲಿಗಳು ನಿಮ್ಮ ಮನೆಗೆ ಬರದಂತೆ ತಡೆಯಲು ನೀವು ಕಪಾಟುಗಳು, ಡ್ರಾಯರ್‌ಗಳು ಮತ್ತು ಮುಖ್ಯ ದ್ವಾರದ ಬಳಿ ತೇಜಪತ್ರವನ್ನು (ಪುಲಾವ್ ಎಲೆ) ಬಳಸಿ.

ಅಲ್ಲದೆ ದಾಲ್ಚಿನ್ನಿ, ಕೆಂಪು ಮೆಣಸಿನಕಾಯಿ ಮತ್ತು ಆಲಮ್ ನಂತಹ ಬಲವಾದ ವಾಸನೆ ಮತ್ತು ಸುವಾಸನೆಯ ವಸ್ತುಗಳನ್ನು ಬಳಸುವುದರಿಂದ ನೀವು ಇಲಿಗಳನ್ನು ದೂರವಿಡಬಹುದು. ಅದಕ್ಕಾಗಿ ದಾಲ್ಚಿನ್ನಿಯ ಕಡ್ಡಿಯನ್ನು ಹಾಗೆಯೇ ಮೂಲೆಗಳಲ್ಲಿ ಇಡಬಹುದು, ಅದರ ಪುಡಿಯನ್ನು ಮಾಡಿ ಸಿಂಪಡಿಸಬಹುದು ಅಥವಾ ದಾಲ್ಚಿನ್ನಿ ಎಣ್ಣೆಯನ್ನು ಸಹ ಬಳಸಬಹುದು.

ಅಥವಾ ನೀವು ಆಲಮ್‌ನ ಸಣ್ಣ ತುಂಡನ್ನು ಇಡಬಹುದು. ಇಲಿಗಳಿಗೆ ಅದರ ವಾಸನೆ ಮತ್ತು ರುಚಿ ಇಷ್ಟವಾಗುವುದಿಲ್ಲ. ಅಥವಾ ಆಲಮ್ ಪುಡಿಯನ್ನು ನೀರಿನಲ್ಲಿ ಕರಗಿಸಿ ಸಿಂಪಡಿಸಬಹುದು. ಅದಲ್ಲದೆ ಮನೆಯ ಮೂಲೆಗಳಲ್ಲಿ ಕೆಂಪು ಮೆಣಸಿನಕಾಯಿ ಪುಡಿಯನ್ನು ಸಿಂಪಡಿಸಬಹುದು ಅಥವಾ ನೀರಿನಲ್ಲಿ ಕೆಂಪು ಮೆಣಸಿನಕಾಯಿ ಕರಗಿಸಿ ಸಿಂಪಡಿಸಬಹುದು.

ಸಾಮಾನ್ಯವಾಗಿ ಬೆಳಗ್ಗೆ ಸಂಜೆ ಮನೆಯಲ್ಲಿ ದೇವರಿಗೆ ದೀಪ ಹಚ್ಚುವಾಗ ಕರ್ಪೂರ ಹಚ್ಚುವುದರಿಂದ ಕೀಟಗಳು ಮತ್ತು ಇಲಿಗಳು ಸಹ ಓಡಿಹೋಗುತ್ತವೆ, ಏಕೆಂದರೆ ಇಲಿಗಳಿಗೆ ಕರ್ಪೂರದ ವಾಸನೆ ಇಷ್ಟವಾಗುವುದಿಲ್ಲ.

Leave A Reply

Your email address will not be published.