Government schemes: ವಿವಿಧ ರೀತಿಯಲ್ಲಿ ಹಣ ಬರುವ ಯೋಜನೆಗಳ ಪೂರ್ಣ ಮಾಹಿತಿ ಇಲ್ಲಿದೆ!
Government schemes: ಕರ್ನಾಟಕ ರಾಜ್ಯ ಸರಕಾರದ ಹಲವಾರು ಇಲಾಖೆಗಳ ಮೂಲಕ ಸಾರ್ವಜನಿಕರಿಗೆ ಹಣ ನೀಡುವ ಹಲವಾರು ಯೋಜನೆಗಳಿವೆ. ಮುಖ್ಯವಾಗಿ ಆರ್ಥಿಕವಾಗಿ ಸಬಲರಾಗಲು ಈ ಯೋಜನೆಗಳು ಜಾರಿ ತರಲಾಗಿದೆ. ಆ ಯೋಜನೆಗಳು ಯಾವವು ಮತ್ತು ಯಾವ ಇಲಾಖೆಗಳಲ್ಲಿ ಈ ಯೋಜನೆಗಳಿವೆ (Government schemes) ಎಂದು ನಿಮಗೆ ಇಲ್ಲಿ ವಿವರವಾಗಿ ತಿಳಿಸಲಾಗಿದೆ.
ಕೃಷಿ ಇಲಾಖೆ ಯೋಜನೆ ಮತ್ತು ಹಣ:ರೈ
ತರ ಅಭಿವೃದ್ಧಿ ಮಾಡಲು ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಕಿಸಾನ್ (PM Kisan) ಯೋಜನೆಯಡಿ ರೈತರಿಗೆ ಪ್ರೋತ್ಸಾಹ ಧನವಾಗಿ ಪ್ರತಿ ವರ್ಷ ಮೂರು ಕಂತುಗಳಲ್ಲಿ 6,000 ರೂ. ನಂತೆ ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಾಕಲಾಗುತ್ತೆ.
ಕಂದಾಯ ಇಲಾಖೆಯ ಯೋಜನೆಗಳು ಮತ್ತು ಹಣ:
ವಿಧವಾ ಪಿಂಚಣಿ ಯೋಜನೆ:
ಈ ಯೋಜನೆಯಡಿ ವಿಧವೆ ಮಹಿಳೆಗೆ ಪ್ರತಿ ತಿಂಗಳು 800 ರೂಪಾಯಿ ಪಿಂಚಣಿ ಬರುತ್ತದೆ.
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆ:
ಈ ಯೋಜನೆಯಡಿ ಅರ್ಜಿದಾರರಿಗೆ ಪ್ರತಿ ತಿಂಗಳು 800 ರಿಂದ 1200 ರೂಪಾಯಿ ವರೆಗೆ ಪಿಂಚಣಿ ನೀಡಲಾಗುತ್ತೆ.
ಸಂಧ್ಯಾ ಸುರಕ್ಷಾ ಯೋಜನೆ:
ಸಂಧ್ಯಾ ಸುರಕ್ಷಾ ಯೋಜನೆಯಡಿ ಅರ್ಜಿದಾರರಿಗೆ ಪ್ರತಿ ತಿಂಗಳು 1000 ರಿಂದ 1200 ರೂಪಾಯಿ ವರೆಗೆ ಪಿಂಚಣಿ ಬರುತ್ತದೆ.
ಅಂಗವಿಕಲರ ಮತ್ತು ಬುದ್ಧಿಮಾಂದ್ಯ ಮಕ್ಕಳ ಪಿಂಚಣಿ ಯೋಜನೆ:
ಈ ಯೋಜನೆಯಡಿ ಹುಟ್ಟಿನಿಂದಲೇ ಶೇ.75 ಕ್ಕಿಂತ ಹೆಚ್ಚು ಅಂಗವಿಕಲತೆ ಇದ್ದಲ್ಲಿ ಪ್ರತಿ ತಿಂಗಳು 1400 ರೂಪಾಯಿ ವರೆಗೆ ಪಿಂಚಣಿ ಬರುತ್ತದೆ.
ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ಪಿಂಚಣಿ:
ಸಾಲ ಬಾಧೆಯಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡರೆ ಅವರ ಪತ್ನಿಗೆ ತಿಂಗಳಿಗೆ 800 ರೂಪಾಯಿ ಪಿಂಚಣಿ ಬರುತ್ತದೆ.
ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಪಿಂಚಣಿ ಯೋಜನೆ:
ಈ ಯೋಜನೆಯಡಿ ಆಸಿಡ್ ದಾಳಿಗೆ ಒಳಗಾದ ಮಹಿಳೆಗೆ ತಿಂಗಳಿಗೆ 10000 ರೂಪಾಯಿಗಳವರೆಗೆ ಪಿಂಚಣಿ ಬರುತ್ತದೆ.
ಎಂಡೋಸಲ್ಪಾನ್ ಸಂತ್ರಸ್ತರಿಗೆ ಮಾಸಿಕ ಪಿಂಚಣಿ ಯೋಜನೆ:
ಎಂಡೋಸಲ್ಪಾನ್ ಗೆ ಒಳಗಾಗಿರುವ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ತಿಂಗಳಿಗೆ 2000 ರಿಂದ 4000 ರೂಪಾಯಿಗಳ ವರೆಗೆ ಪಿಂಚಣಿ ಬರುತ್ತದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆ ಮತ್ತು ಹಣ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ರಾಜ್ಯ ಸರಕಾರದ ಗೃಹ ಲಕ್ಷ್ಮಿ ಯೋಜನೆಯಡಿ ಗೃಹಿಣಿಯರಿಗೆ ಪ್ರತಿ ತಿಂಗಳು 2000 ಸಾವಿರ ಹಣ ನೀಡಲಾಗುತ್ತೆ.