Liquor sale: ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌! ಅಕ್ಟೋಬರ್ 1ರಿಂದಲೇ ಹೊಸ ಮದ್ಯ ನೀತಿ ಜಾರಿ

Share the Article

Liquor sale: ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌ ಒಂದು ಇಲ್ಲಿದೆ. ಹೌದು, ಅಕ್ಟೋಬರ್ 1ರಿಂದಲೇ ಆಂಧ್ರಪ್ರದೇಶ ರಾಜ್ಯದ ನೂತನ ಮದ್ಯ ನೀತಿ ಜಾರಿಗೆ ಬರಲಿದೆ.

ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ನೇತೃತ್ವದ ಸಂಪುಟ ಸಭೆಯಲ್ಲಿ ಹೊಸ ಮದ್ಯದ ನೀತಿ ಜಾರಿಗೆಗೆ ಗ್ರೀನ್ ಸಿಗ್ನಲ್ ನೀಡಿದ್ದು, ಅಕ್ಟೋಬರ್ 1ರಿಂದಲೇ ಆಂಧ್ರಪ್ರದೇಶ ರಾಜ್ಯದ ಹೊಸ ಮದ್ಯ ನೀತಿ ಜಾರಿಗೆ ಬರಲಿದ್ದು, ಈ ಹೊಸ ಮದ್ಯ ನೀತಿಯಲ್ಲಿ ಎಲ್ಲಾ ಬ್ರಾಂಡ್ ಗಳ 180 ಎಂಎಲ್ ಮದ್ಯದ ಬಾಟಲಿಗಳಿಗೆ ಕೇವಲ 99 ರೂ. ಗರಿಷ್ಠ ದರ ನಿಗದಿಪಡಿಸಲಾಗಿದೆ.

ಸದ್ಯ ಆಂಧ್ರಪ್ರದೇಶದಲ್ಲಿರುವ 3736 ಚಿಲ್ಲರೆ ಮದ್ಯ ಮಾರಾಟ (Liquor sale) ಅಂಗಡಿಗಳಲ್ಲಿ ಶೇಕಡ 10ರಷ್ಟು ಕಳ್ಳು ತೆಗೆಯುವ ಸಮುದಾಯದವರಿಗೆ ನೀಡಲಾಗುವುದು. ಆನೈನ್ ಲಾಟರಿ ವ್ಯವಸ್ಥೆ ಮೂಲಕ ಇವುಗಳನ್ನು ಹಂಚಿಕೆ ಮಾಡಲಾಗುವುದು ಎಂದು ತಿಳಿಸಲಾಗಿದೆ.

Leave A Reply