Darshan: ಬಳ್ಳಾರಿ ಜೈಲಧಿಕಾರಿಗಳ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದರ್ಶನ್ ದೂರು ? ಕಾರಣವೇನು?

Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದ(Renukaswamy Murder Case) ಆರೋಪಿ ದರ್ಶನ್‌ಗೆ ಬಳ್ಳಾರಿ ಸೆಂಟ್ರಲ್ ಜೈಲು ಕಾದ ಕಬ್ಬಿಣದಂತಾಗಿದೆ. ಜೈಲಲ್ಲಿದ್ದುಕೊಂಡೇ ದರ್ಶನ್ ತನಗೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿಕೊಡುವಂತೆ ಕೇಳುತ್ತಿದ್ದಾರೆ. ಮಲ ವಿಸರ್ಜನೆ ಚೇರ್ ಆಯಿತು ಟಿವಿ ಕೂಡ ಒದಗಿಸಿದ್ದಾಯಿತು. ಇದೀಗ ಜೈಲಧಿಕಾರಿಗಳಿಗೆ ಬೆಡ್, ತಲೆದಿಂಬು ಮತ್ತು ಚೇರ್‌ಗಾಗಿ ಜೈಲಾಧಿಕಾರಿಗಳಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ

 

ಹೌದು, ಆರೋಪಿ ದರ್ಶನ್(Darshan) ಜೈಲಧಿಕಾರಿಗಳಿಗೆ ಬೆಡ್, ತಲೆದಿಂಬು ಮತ್ತು ಚೇರ್‌ಗೆ ಬೇಡಿಕೆ ಇಟ್ಟಿದ್ದು, ಇದಕ್ಕೆ ಅಧಿಕಾರಿಗಳು ಸರಾಸಗಟವಾಗಿ ನಿರಾಕರಿಸಿದ್ದಾರೆ. ಇದೇ ಕಾರಣಕ್ಕೆ ಬಳ್ಳಾರಿ ಜೈಲಧಿಕಾರಿಗಳ ಮೇಲೆಯೇ ದರ್ಶನ್ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ (Karnataka State Human Rights Commision) ದೂರು ನೀಡುವ ಸಾಧ್ಯತೆಯಿದೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.

ಅಂದಹಾಗೆ ಇನ್ನೂ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ಪ್ರಕರಣದಿಂದಾಗಿ ಜೈಲಧಿಕಾರಿಗಳ ತಲೆದಂಡ ಆಗಿತ್ತು. ಹೀಗಾಗಿ ಬಳ್ಳಾರಿ ಸೆಂಟ್ರಲ್ ಜೈಲು ಸಿಬ್ಬಂದಿ ಭೀತಿಯಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಸಿಬ್ಬಂದಿ ದರ್ಶನ್ ವಿಚಾರವಾಗಿ ಜಾಣ ನಡೆ ಇಡುತ್ತಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.