Bigg Boss Kannada-11ರಲ್ಲಿ ಮಹತ್ವದ ಬದಲಾವಣೆ- ವೀಕ್ಷಕರು, ಅಭಿಮಾನಿಗಳಿಗೆ ಭಾರೀ ನಿರಾಸೆ; ಏನದು?

Bigg Boss Kannada -11: ಬಾಸ್‌ ಸೀಸನ್‌ 11ಕ್ಕೆ ಇನ್ನು ವಾರವಷ್ಟೇ ಬಾಕಿ ಇದೆ. ಕಾರ್ಯಕ್ರಮಕ್ಕೆ ವಾಹಿನಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸ್ಪರ್ಧಿಗಳು ಉಳಿದುಕೊಳ್ಳುತ್ತಿರುವ ಮನೆ ರೆಡಿ ಆಗುತ್ತಿದೆ. ಆದರೆ ಈ ನಡುವೆ ಈ ಸಲದ ಬಿಗ್ ಬಾಸ್ ಶೋನಲ್ಲಿ ಅಂದರೆ 11ನೇ ಸೀಸನ್(Bigg Boss Kannada-11)ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

 

ಅದೇನೆಂದರೆ ಇಷ್ಟು ಸೀಸನ್‌ಗಳಲ್ಲಿ ದೂರದರ್ಶನದಲ್ಲಿ ಒಂದೂವರೆ ಗಂಟೆಗಳ ಕಾಲ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಈ ಬಾರಿಯೂ ಅದೇ ಸಮಯ ನಿಗದಿಯಾಗಿದೆ. ಇದಕ್ಕಾಗಿ ಕಲರ್ಸ್‌ ಕನ್ನಡದ 2 ಧಾರಾವಾಹಿಗಳು ಕೂಡಾ ಮುಕ್ತಾಯವಾಗುತ್ತಿದೆ. ಆದರೆ ಈ ಸೀಸನ್‌ನಲ್ಲಿ ಕಳೆದ ಬಾರಿಯಂತೆ 24 ಗಂಟೆಗಳ ಲೈವ್‌ ಇರುವುದಿಲ್ಲವಂತೆ !!

ಹೌದು, 11ನೇ ಸೀಸನ್ ಅಲ್ಲಿ 24ಗಂಟೆಗಳ ಲೈವ್ ಇರೋದಿಲ್ಲ. ಅಷ್ಟೇ ಅಲ್ಲ, ಕಾರ್ಯಕ್ರಮದ ಲೈವ್‌ ಮಿಸ್‌ ಮಾಡಿಕೊಂಡವರು ಅದನ್ನು ಜಿಯೋದಲ್ಲಿ ನೋಡುವ ಅವಕಾಶವಿತ್ತು. ಆದರೆ ಈ ಬಾರಿ ವಾಹಿನಿ ಜಿಯೋದಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡದಿರಲು ನಿರ್ಧರಿಸಿದೆ ಎಂಬ ಮಾತು ಕೇಳಿಬರುತ್ತಿದೆ. ಕಾರ್ಯಕ್ರಮ ಆರಂಭವಾಗಲು ಇನ್ನು 9 ದಿನಗಳಷ್ಟೇ ಬಾಕಿ ಇದೆ. ಕೆಲವೇ ದಿನಗಳಲ್ಲಿ ಸುದೀಪ್‌ ಹಾಗೂ ಕಾರ್ಯಕ್ರಮದ ಪ್ರಮುಖರು ಸುದ್ದಿಗೋಷ್ಠಿ ನಡೆಸಲಿದ್ದಾರೆ. ಈ ಸಮಯದಲ್ಲಿ ಈ ಎಲ್ಲಾ ಗೊಂದಲಗಳಿಗೂ ತೆರೆ ಬೀಳಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಲೈವ ಇಲಲದಿದ್ದರೆ, ವೀಕ್ಷಕರು, ಅಭಿಮಾನಿಗಳಿಗೆ ನಿರಾಸೆ ಉಂಟುಮಾಡೋದು ಪಕ್ಕಾ ಎನ್ನಲಾಗಿದೆ.

Leave A Reply

Your email address will not be published.