Belthangady: ಪತಿ, ಪತ್ನಿ ಆತ್ಮಹತ್ಯೆ; ಕಾರಣ ನಿಗೂಢ
Belthangady: ಕಾಶೀಪಟ್ಣ ಗ್ರಾಮದ ಉರ್ದು ಗುಡ್ಡೆ ನಿವಾಸಿಗಳಾದ ನೊಣಯ್ಯ ಪೂಜಾರಿ (63) ಮತ್ತು ಅವರ ಪತ್ನಿ ಬೇಬಿ (46) ಇವರು ತಮ್ಮ ಮನೆಯ ಸಮೀಪದ ಕಾಡಿನಲ್ಲಿ ಗುರುವಾರ (ಸೆ.19) ರಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕಳೆದ ಐದು ವರ್ಷಗಳಿಂದ ತಲೆನೋವಿನಿಂದ ಬಳಲುತ್ತಿದ್ದ ನೊಣಯ್ಯ ಪೂಜಾರಿ ಹಾಗೂ ಮಕ್ಕಳಿಲ್ಲದ ಕೊರಗಿನಲ್ಲಿ ಇದ್ದ ಪತ್ನಿ. ನೊಣಯ್ಯ ಅವರಿಗೆ ಇದು ಎರಡನೇ ಮದುವೆಯಾಗಿದ್ದು, ಇವರ ಮೊದಲ ಪತ್ನಿ ಹತ್ತು ವರ್ಷದ ಹಿಂದೆ ಸಾವಿಗೀಡಾಗಿದ್ದರು. ನಂತರ ಇವರು ಬೇಬಿಯನ್ನು ಮದುವೆಯಾಗಿದ್ದರು. ಮೊದಲ ಪತ್ನಿಗೆ ಐದು ಗಂಡು, ಒಂದು ಹೆಣ್ಣು ಮಕ್ಕಳಿದ್ದು, ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.