B Y Vijayendra: ‘ನಮ್ಮ ಶಾಸಕನ ವಿರುದ್ಧ ಮಾತನಾಡಿದವನನ್ನು ರಸ್ತೆಯಲ್ಲಿ ಓಡಾಡಲು ಬಿಡಬೇಡಿ’ – ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರಚೋದನಾಕಾರಿ ಹೇಳಿಕೆ!!

B Y Vijayendra: ರಾಜ್ಯದಲ್ಲಿ ನಾಗಮಂಗಲ, ಮಂಗಳೂರು ಗಲಬೆಗಳು ಸದ್ದು ಮಾಡುತ್ತಿವೆ. ಈ ಬೆನ್ನಲ್ಲೇ ಬಿಜೆಪಿ‌ ಶಾಸಕನ ವಿರುದ್ದ ನಾಲಿಗೆ ಹರಿಬಿಟ್ಟವನನ್ನಾ ರಸ್ತೆ ಮೇಲೆ ಓಡಾಡೋಕೆ ಬಿಡಬೇಡಿ ಎಂದು ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BY Vijayendra)ಪ್ರಚೋದನಕಾರಿ ಭಾಷಣ ಮಾಡಿದ್ದು, ರಾಜ್ಯದಲ್ಲಿ ಕಿಚ್ಚುಹಬ್ಬಿಸಿದೆ.

 

ಇತ್ತೀಚೆಗೆ ಹುಮನಾಬಾದ್ ಬಿಜೆಪಿ ಶಾಸಕ ಸಿದ್ದು ಪಾಟೀಲ್ ವಿರುದ್ಧ ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ್ ನಾಲಿಗೆ ಹರಿಬಿಟ್ಟಿದ್ದರು. ಅವನು ಏನಾದರೂ ಮಾತಾಡಿದರೆ ನಾಲಿಗೆ ಕತ್ತರಿತ್ತೇನೆ, ಸ್ವಲ್ಪ ಸಮಯ ಕೊಡ್ರಿ. ಅವನಿಗೆ ಗಣೇಶನ ಸೊಂಡಿಲಿನಿಂದ ಬೀಸಾಕುತ್ತೇನೆಂದು ಸಿದ್ದು ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಟಕ್ಕರ್ ಕೊಟ್ಟಿರುವ ಬಿಜೆಪಿ‌ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘ ಬಿಜೆಪಿ‌ ಶಾಸಕನ ವಿರುದ್ದ ನಾಲಿಗೆ ಹರಿಬಿಟ್ಟವನನ್ನಾ ರಸ್ತೆ ಮೇಲೆ ಓಡಾಡೋಕೆ ಬಿಡಬೇಡಿ ಎಂದು ಕಿಡಿಕಾರಿದ್ದಾರೆ.

ಬೀದರ್‌ನ ಹುಮ್ನಾಬಾದ್ ತಾಲೂಕಿನ ಹುಡಗಿ ಗ್ರಾಮದಲ್ಲಿ ನಡೆದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿದ ಅವರು, ‘ ಹೆಸರು ಪ್ರಸ್ತಾಪಿಸದೆ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಸಹೋದರ ಹಾಗೂ ಕಾಂಗ್ರೆಸ್ ಎಮ್‌ಎಲ್‌ಸಿ ಚಂದ್ರಶೇಖರ್ ಪಾಟೀಲ್ ವಿರುದ್ದ ಏಕವಚನದಲ್ಲೆ ಹರಿಹಾಯ್ದಿದ್ದು, ಆತ ಅಧಿಕಾರ ಶಾಶ್ವತ ಎನ್ನುವ ದುರಹಂಕಾರದಲ್ಲಿ ಮಾತನಾಡಿದ್ದಾನೆ. ಅಧಿಕಾರ ಶಾಶ್ವತ ಎನ್ನುವ ಭ್ರಮೆಯಲ್ಲಿದ್ದಂತೆ ಕಾಣಿಸುತ್ತದೆ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚಿಸುತ್ತೇನೆ. ನಮ್ಮ ಕಾರ್ಯಕರ್ತರೇನು ಬಳೆ ತೊಟ್ಟುಕೊಂಡು ನಿಂತಿಲ್ಲ. ಅಧಿಕಾರ ಶಾಶ್ವತ ಅಲ್ಲ ಎನ್ನುವುದನ್ನು ನೆನಪು ಮಾಡಿಕೊಡಬೇಕು. ದುರಹಂಕಾರದಲ್ಲಿ‌ ಮಾತನಾಡಿದವನಿಗೆ ಮುಂದಿನ ದಿನಗಳಲ್ಲಿ ಉತ್ತರ ಕೊಡೋಣ ಎಂದು ಗುಡುಗಿದ್ದಾರೆ.

Leave A Reply

Your email address will not be published.