Delta Airlines: ‘ಈ ರೀತಿಯ ಒಳ ಉಡುಪು ಹಾಕೊಂಡು ಬನ್ನಿ.. ‘ ಏರ್‌ಲೈನ್ಸ್ ಒಂದರಿಂದ ಗಗನಸಖಿಯರಿಗೆ ಹೊಸ ನಿಯಮ !!
Delta Airlines: ವಿಮಾನಯಾನ ಎಂದಾಕ್ಷಣ ಆಕಾಶದಲ್ಲಿ ಹಾರಾಟ, ಸುಂದರ ದೃಶ್ಯಗಳ ನೋಟ, ಸಂತೋಷದ ಜೊತೆಗೆ ಸುರಸುಂದರವಾಗಿರೋ ಗಗನಸಖಿಯರೂ ನೆನಪಿಗೆ ಬರುತ್ತಾರೆ. ಅವರ ನಗು, ಮೃದುವಾದ ಮಾತು, ಪ್ರೀತಿಯ ನೋಟ ಎಲ್ಲವೂ ಚಂದ. ಆದರೀಗ ಅಚ್ಚರಿ ಎಂಬಂತೆ ಏರ್ಲೈನ್ಸ್ ಒಂದು ತನ್ನ ಗಗನಸಖಿಯರಿಗೆ ಒಳ ಉಡುಪುಗಳ ಕುರಿತು ಹೊಸ ನಿಯಮ ಜಾರಿಗೊಳಿಸಿದೆ. ಅದರಲ್ಲಿ ಇದೇ ರೀತಿಯ ಒಳ ಉಡುಪು ಧರಿಸಬೇಕು ಎಂದು ಹೇಳಿದೆ.
ಹೌದು, ಫ್ಲೈಟ್ (Flight) ಸಿಬ್ಬಂದಿಗಳಿಗೆ ಡೆಲ್ಟಾ ಏರ್‌ಲೈನ್ಸ್ (Delta Airlines) ಕಠಿಣ ನಿಯಮಾವಳಿಗಳನ್ನು ಹೊರಡಿಸಿದ್ದು, ಹೊರಗಡೆ ಗೋಚರಿಸದಂತಿರುವ, ಸರಿಯಾದ ಒಳ ಉಡುಪುಗಳನ್ನು (Undergarments) ಧರಿಸುವಂತೆ ಆಜ್ಞಾಪಿಸಿದೆ. ಎರಡು ಪುಟಗಳ ಮೆಮೊವನ್ನು ಏರ್‌ಲೈನ್ಸ್ ಹೊರಡಿಸಿದ್ದು, ಸಂದರ್ಶನ, ತರಬೇತಿ ಹಾಗೂ ವೃತ್ತಿ ಸುಧಾರಣೆಗಾಗಿ ಫ್ಲೈಟ್‌ಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ (Staffs) ಸರಿಯಾದ ಉಡುಪುಗಳನ್ನು ಧರಿಸುವಂತೆ ಸೂಚನೆ ನೀಡಿದೆ.
ಎರಡು ಪುಟದ ಮೆಮೊದಲ್ಲಿ ‘ಸಂದರ್ಶನಕ್ಕೆ ಹೇಗೆ ಬರಬೇಕು, ತರಬೇತಿಯ ವೇಳೆ ಹೇಗೆ ಇರಬೇಕು, ವೃತ್ತಿಜೀವನದ ಪ್ರಗತಿಗೆ ಇರುವಂಥ ಅತ್ಯಂತ ಕಟ್ಟುನಿಟ್ಟಾದ ಡ್ರೆಸ್‌ಕೋಡ್‌ನ ವಿವರಗಳನ್ನು ತಿಳಿಸಿದೆ. ಕೇವಲ ಒಳ ಉಡುಪಿನ ಬಗ್ಗೆ ಮಾತ್ರವಲ್ಲ, ಅಂದವಾಗಿ ಕಾಣಿಸಿಕೊಳ್ಳುವ ಬಗ್ಗೆ, ಕೂದಲು, ಆಭರಣ ಮತ್ತು ಬಟ್ಟೆಯ ಬಗ್ಗೆ ಮಹತ್ವದ ಮಾಹಿತಿ ನೀಡಿದೆ. ಅದರಲ್ಲೂ ಒಳಉಡುಪಿನ ಬಗ್ಗೆ ಅತ್ಯಂತ ಅಚ್ಚಕಟ್ಟಾಗಿ ನಿಯಮ ರೂಪಿಸಿದೆ. ಮೆಮೊ ಪ್ರಕಾರ ಸರಿಯಾದ ಒಳಉಡುಪುಗಳು ಧರಿಸುವುದು ಕಡ್ಡಾಯ. ಆದರೆ, ಈ ಒಳಉಡುಪುಗಳು ಯಾರಿಗೂ ಕಾಣಿಸದಂತಿರಬೇಕು ಎಂದು ತಿಳಿಸಲಾಗಿದೆ. ವಿಮಾನಯಾನ ಸಂಸ್ಥೆಯು ವೃತ್ತಿಪರತೆ ಮತ್ತು ಅಚ್ಚುಕಟ್ಟಾದ ನೋಟದ ಬಗ್ಗೆಯೂ ತಿಳಿಸಿದೆ. ಏರ್‌ಲೈನ್‌ನಲ್ಲಿ ಹಾಲಿ ಇರುವ ಹಾಗೂ ಭವಿಷ್ಯದ ಗಗನಸಖಿಯರು ಈ ನಿಯಮಗಳಿಗೆ ಬದ್ಧವಾಗಿರಬೇಕು ಎಂದು ತಿಳಿಸಿದೆ.
ಡೆಲ್ಟಾ ಏರ್ಲೈನ್ಸ್ ಹಾಕಿದ ನಿಯಮಗಳು:
* ಕೂದಲು ನೈಸರ್ಗಿಕ ಬಣ್ಣವನ್ನು ಹೊಂದಿರಬೇಕು, ದಪ್ಪ ಹೈಲೈಟ್‌ಗಳು ಅಥವಾ ಕೃತಕ ಛಾಯೆಗಳು ಅವುಗಳಿಗೆ ಇರಬಾರದು.
* ಉದ್ದನೆಯ ಕೂದಲು ಇದ್ದಲ್ಲಿ, ಅದನ್ನು ಹಿಂದಕ್ಕೆ ಎಳೆಯಬೇಕು ಮತ್ತು ಭುಜಗಳ ಮೇಲೆಯೇ ಇರಬೇಕು. ನಿಮ್ಮ ಬೆನ್ನಿಗೆ ಬರುವಷ್ಟು ಕೂದಲು ಉದ್ದವಾಗಿದ್ದರೆ, ಅವುಗಳನ್ನು ಪಿನ್ ಮಾಡಿ ಕಟ್ಟಬೇಕು.
* ಕಣ್ರೆಪ್ಪೆಗಳು ನೈಸರ್ಗಿಕವಾಗಿಯೇ ಇರಬೇಕು.
* ಉಗುರುಗಳ ವಿಷಯಕ್ಕೆ ಬರುವುದಾದರೆ, ಅವು ಸರಳ ಮತ್ತು ಸೂಕ್ಷ್ಮವಾಗಿರಬೇಕು. ಯಾವುದೇ ನಿಯಾನ್ ಬಣ್ಣಗಳು, ಬಹು-ಬಣ್ಣ, ಹೊಳಪು ಅಥವಾ ಕೈಯಿಂದ ಚಿತ್ರಿಸಿದ ವಿನ್ಯಾಸಗಳಿಗೆ ಅನುಮತಿ ಇರೋದಿಲ್ಲ.
* ಟ್ಯಾಟೂಗಳನ್ನು ಮುಚ್ಚಬೇಕು. ಹಾಗಂತ ಅವುಗಳಿಗೆ ಬ್ಯಾಂಡೇಜ್ ಹಾಕಿಕೊಳ್ಳುವುದು ಪರಿಹಾರವಲ್ಲ.
* ಮೂಗಿನ ಒಂದು ರಂಧ್ರಕ್ಕೆ ಮಾತ್ರ ಚುಚ್ಚಿರಬಹುದು. ಮತ್ತು ಅನುಮತಿಸಲಾದ ಸ್ಟಡ್‌ಗಳಲ್ಲಿ ಚಿನ್ನ, ಬೆಳ್ಳಿ, ಬಿಳಿ ಮುತ್ತು ಅಥವಾ ಸ್ಪಷ್ಟವಾದ ವಜ್ರ/ವಜ್ರದಂತಹವು ಸೇರಿವೆ. ಇವುಗಳ ಹೊರತು ಬೇರೆ ಹಾಕಿಕೊಳ್ಳುವಂತಿಲ್ಲ.
* ಚುಚ್ಚುವ ಆಭರಣದ ವಿಚಾರಕ್ಕೆ ಬರುವುದಾದರೆ, ಪ್ರತಿ ಕಿವಿಗೆ ಎರಡು ಕಿವಿಯೋಲೆಗಳನ್ನು ಮಾತ್ರ ಅನುಮತಿಸಲಾಗಿದೆ ಮತ್ತು ಅವು ಚಿಕ್ಕದಾಗಿರಬೇಕು ಮತ್ತು ನೇತಾಡುವಂತಿರಬಾರದು.
* ಮೂಗಿನ ಹೊರತಾಗಿ ದೇಹದ ಯಾವುದೇ ಭಾಗದಲ್ಲಿ ಚುಚ್ಚಿಕೊಂಡಿದ್ದರೂ, ಅದನ್ನು ಮುಕ್ತವಾಗಿ ತೋರಿಸುವಂತಿಲ್ಲ.
* ಬಟ್ಟೆಯ ವಿಷಯಕ್ಕೆ ಬಂದಾಗ, ಡೆಲ್ಟಾ ವೃತ್ತಿಪರತೆ ಮತ್ತು ಫಿಟ್‌ಗೆ ಒತ್ತು ನೀಡುತ್ತದೆ. ಡ್ರೆಸ್‌ಗಳು ಮತ್ತು ಸ್ಕರ್ಟ್‌ಗಳು ಮೊಣಕಾಲಿನ ಉದ್ದ ಅಥವಾ ಕೆಳಗೆ ಬೀಳಬೇಕು ಮತ್ತು ಅಥ್ಲೆಟಿಕ್ ಬೂಟುಗಳಿಗೆ ಅನುಮತಿ ಇರೋದಿಲ್ಲ. ಬದಲಾಗಿ, ಫ್ಲೈಟ್ ಅಟೆಂಡೆಂಟ್‌ಗಳು ಮುಚ್ಚಿದ ಟೋ ಫ್ಲಾಟ್‌ಗಳು, ಹೀಲ್ಸ್ ಅಥವಾ ಸ್ಲಿಂಗ್-ಬ್ಯಾಕ್ ಬೂಟುಗಳನ್ನು ಆರಿಸಬೇಕಾಗುತ್ತದೆ. ಪುರುಷರಿಗೆ, ಬಟನ್-ಕಾಲರ್ಡ್ ಡ್ರೆಸ್ ಶರ್ಟ್‌ಗಳೊಂದಿಗೆ ಟೈ ಅಗತ್ಯವಿದೆ.
* ಸಂದರ್ಶನದ ದಿನದಂದು, ಡೆಲ್ಟಾ ವಿಮಾನಯಾನವು ಅಶ್ಲೀಲತೆ, ಚೂಯಿಂಗ್ ಗಮ್ ಮತ್ತು ಫೋನ್ ಅಥವಾ ಇಯರ್‌ಬಡ್ ಬಳಕೆಗಾಗಿ ಕಟ್ಟುನಿಟ್ಟಾದ ನೀತಿಯನ್ನು ನಿರ್ವಹಿಸುತ್ತದೆ.