Abhiman Studio: ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ತಡೆ: ಅಭಿಮಾನಿ ಬಳಗ ಪ್ರತಿಭಟನೆಗೆ ಕರೆ

Share the Article

Abhiman Studio: ಇಂದು ನಟ ಡಾ.ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬ ಹಿನ್ನಲೆ, ಅಭಿಮಾನ್‌ ಸ್ಟುಡಿಯೋದಲ್ಲಿರೋ ವಿಷ್ಣು ಸ್ಮಾರಕಕ್ಕೆ (Abhiman Studio Vishnuvardhan Memorial) ಪೂಜೆ ಸಲ್ಲಿಸದಂತೆ ನಟ ಬಾಲಣ್ಣ ಅವರ ಮಕ್ಕಳಿಂದ ಆಕ್ಷೇಪ ವ್ಯಕ್ತವಾಗಿದೆ. ಆದ್ದರಿಂದ ಅಭಿಮಾನ್‌ ಸ್ಟುಡಿಯೋ ಮುಂದೆ ದಿ. ಡಾ.ವಿಷ್ಣುವರ್ಧನ್‌ ಅಭಿಮಾನಿಗಳು ಪ್ರತಿಭಟನೆಗೆ ಮುಂದಾಗಿದ್ದಾರೆ.

ಹೌದು, ಇಂದು ದಿ. ಡಾ.ವಿಷ್ಣುವರ್ಧನ್ ಅವರ 74ನೇ ಜನ್ಮದಿನದ ಅಂಗವಾಗಿ ಸಾವಿರಾರು ಅಭಿಮಾನಿಗಳು (Vishnu Fans) ಬೆಂಗಳೂರಿನ ಅಭಿಮಾನ್‌ ಸ್ಟುಡಿಯೋ ಸ್ಮಾರಕಕ್ಕೆ ಪೂಜೆ ಸಲ್ಲಿಸಲು ಆಗಮಿಸಿದ್ದರು, ಆದ್ರೆ ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸದಂತೆ ನಟ ಬಾಲಣ್ಣ ಅವರ ಮಕ್ಕಳು ಕೋರ್ಟಿನಿಂದ ತಡೆಯಾಜ್ಞೆ ಒಪ್ಪಿಗೆ ಪಡೆದಿದ್ದು, ಅಭಿಮಾನಿಗಳನ್ನು ತಡೆದಿದ್ದಾರೆ. ಅಷ್ಟು ಮಾತ್ರವಲ್ಲದೆ ಸ್ಟುಡಿಯೋ ಗೇಟ್‌ ಬೀಗ ಹಾಕಿ ಸ್ಮಾರಕ ಮೈಸೂರಿನಲ್ಲಿ ಆಗಿರುವುದರಿಂದ ಅಲ್ಲಿಗೇ ಹೋಗಿ ಪೂಜೆ ಮಾಡುವಂತೆ ಖಡಕ್ ಆಗಿ ವಾರ್ನ್ ಮಾಡಿದ್ದಾರೆ. ಇದರಿಂದ ಆಕ್ರೋಶಗೊಂಡ ಅಭಿಮಾನಿಗಳು ಸ್ಮಾರಕದ ಗೇಟ್‌ ಬಳಿ ಪ್ರತಿಭಟನೆಗೆ ನಿರ್ಧರಿಸಿದ್ದಾರೆ.

ಆದ್ರೆ ಅಭಿಮಾನಿಗಳು ಪೂಜೆ ಸಲ್ಲಿಸೋಕೆ ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ. ಇದರ ಹೊರತಾಗಿಯೂ ಕೋರ್ಟ್ ತಡೆಯಾಜ್ಞೆ ನೆಪ ಹೇಳಿ ಕೆಂಗೇರಿ ಪೋಲಿಸರು ಅನುಮತಿಗೆ ನಿರಾಕರಿಸಿದ್ದಾರೆ ಎನ್ನಲಾಗಿದೆ.ಇದರಿಂದ ಅಸಮಾಧಾನಗೊಂಡ ನೂರಾರು ಸಂಖ್ಯೆಯ ವಿಷ್ಣುವರ್ಧನ್‌ ಅಭಿಮಾನಿಗಳು ಅಭಿಮಾನ್‌ ಸ್ಟುಡಿಯೋ ಗೇಟ್‌ ಬಳಿಯೇ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

Leave A Reply

Your email address will not be published.