Sunil Kumar: ಇಡೀ ರಾಜ್ಯದ ಜನರು ಒಪ್ಪಿಕೊಳ್ಳುವಂತ ನಾಯಕತ್ವ ಕರ್ನಾಟಕ ಬಿಜೆಪಿಗೆ ಇನ್ನು ಸಿಗಬೇಕಷ್ಟೆ – ಸುನಿಲ್ ಕುಮಾರ್ ಅಚ್ಚರಿ ಸ್ಟೇಟ್ಮೆಂಟ್ !!
Sunil Kumar: ಯಡಿಯೂರಪ್ಪನವರ ನಂತರ ಅಥವಾ ಅವರನ್ನು ಕಡೆಗಣಿಸಿದ ಬಳಿಕ ರಾಜ್ಯ ಬಿಜೆಪಿಯಲ್ಲಿ ಯಾರೊಬ್ಬರೂ ಸಮರ್ಥವಾದ ನಾಯಕತ್ವ ಗುಣ ಹೊಂದಿರುವ ನಾಯಕರಿಲ್ಲ. ಇದು ನಾಡಿನ ಜನ ಮಾತ್ರವಲ್ಲ ಹೈಕಮಾಂಡ್ ಗೂ ಗೊತ್ತು. ಹೀಗಾಗಿ ಜನರ ಓಲೈಕೆಗಾಗಿ ಅಲ್ಲದೆ ಸದ್ಯ ಈಗಿರುವ ನಾಯಕರಲ್ಲಿ ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವ ನಾಯಕತ್ವ ಗುಣ ಇರುವ ಯಡಿಯೂರಪ್ಪರನವರ ಸುಪುತ್ರ ಬಿ ವೈ ವಿಜಯೇಂದ್ರ(BY Vijayendra) ಅವರನ್ನು ಹೈಕಮಾಂಡ್ ಬಿಜೆಪಿಯ ರಾಜ್ಯಾಧ್ಯಕ್ಷನನ್ನಾಗಿ ಮಾಡಿದೆ.
ವಿಜಯೇಂದ್ರನನ್ನು ರಾಜ್ಯಾಧ್ಯಕ್ಷ ಮಾಡಿರುವುದು ಸ್ವ ಪಕ್ಷದ ರಾಜ್ಯ ನಾಯಕರಿಗೇ ಸಹಿಸಲು ಆಗುತ್ತಿಲ್ಲ. ಅಲ್ಲದೆ ಅವರ ನಾಯಕತ್ವವನ್ನು ಹೆಚ್ಚಿನ ನಾಯಕರು ಒಪ್ಪಿಲ್ಲ, ಕೆಲವರು ಅವರನ್ನು ತಮ್ಮ ನಾಯಕ, ಅಧ್ಯಕ್ಷ ಎಂದು ಸ್ವೀಕರಿಸಯೂ ಇಲ್ಲ. ಒಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೇ ಸಮಾಧಾನ ಇಲ್ಲ. ಕೆಲವರು ದಿನವೂ ವಿಜಯೇಂದ್ರನ ವಿರುದ್ಧ ವಾಗ್ದಾಳಿ ಮಾಡೋದನ್ನು ನೋಡಿದ್ದೇವೆ. ಇದೀಗ ಈ ಬೆನ್ನಲ್ಲೇ ಕಾರ್ಕಳ ಶಾಸಕರು, ಮಾಜಿ ಸಚಿವರು ಹಾಗೂ ಬಿಜೆಪಿಯ ಪ್ರಬಲ ನಾಯಕ ಸುನಿಲ್ ಕುಮಾರ್(Sunil Kumar) ಅವರು ಬಿಜೆಪಿ ನಾಯಕತ್ವದ ಬಗ್ಗೆ ಅಚ್ಚರಿ ಸ್ಟೇಟ್ಮೆಂಟ್ ನೀಡಿದ್ದಾರೆ.
ಹೌದು, ಬಿಜೆಪಿ ನಾಯಕ ಸುನಿಲ್ ಕುಮಾರ್ ‘ಇಡೀ ರಾಜ್ಯದ ಜನರು ಒಪ್ಪಿಕೊಳ್ಳುವಂಥ ನಾಯಕತ್ವ ಇನ್ನಷ್ಟೇ ಬಿಜೆಪಿಗೆ ಸಿಗಬೇಕಿದೆ’ ಎಂದು ಹೇಳಿದ್ದಾರೆ. ಇದು ವಿಜಯೇಂದ್ರನ ನಾಯಕತ್ವವನ್ನು ಸ್ವತಃ ಸುನಿಲ್ ಕೂಡ ಒಪ್ಪಿಲ್ಲವೇನೋ? ಅಥವಾ ಲೀಡರ್ ಶಿಪ್ ಸಾಲದೇನೋ ಎಂಬಂತೆ ಹೇಳಿಕೆ ನೀಡಿದಂತಿದೆ ಎಂದು ಜನರು ವಿಶ್ಲೇಷಿಸಿದ್ದಾರೆ.
ಸುನಿಲ್ ಕುಮಾರ್ ಹೇಳಿದ್ದೇನು?
ಹಿರಿಯ ತಲೆಮಾರಿನ ನಂತರ ಬಿಜೆಪಿಗೆ ಇಡಿ ರಾಜ್ಯವೇ ಒಪ್ಪಿಕೊಳ್ಳುವಂಥ ಸರ್ವಸ್ಪರ್ಶಿ ನಾಯಕತ್ವ ಇನ್ನಷ್ಟೇ ಸಿಗಬೇಕಿದೆ. ಈಗಿರುವ ಹೊಸ ತಂಡ ಒಂದೊಂದು ಪ್ರದೇಶಕಷ್ಟೇ ಸೀಮಿತವಾದ ಶಕ್ತಿಯನ್ನು ಸಂಚಯಿಸಿಕೊಂಡಿದೆ. ಇಡೀ ರಾಜ್ಯಕ್ಕೆ ತನ್ನ ಪ್ರಭಾ ವಲಯವನ್ನು ಹಿಗ್ಗಿಸಿಕೊಳ್ಳುವಂಥ ನಾಯಕತ್ವ ಇನ್ನಷ್ಟೇ ಲಭಿಸಬೇಕಿದೆ. ಎಲ್ಲ ವರ್ಗ, ಪ್ರದೇಶ, ಜಾತಿ, ಸಮುದಾಯ ಒಪ್ಪುವಂಥ ನಾಯಕತ್ವ ಬೆಳೆಯಬೇಕು. ಹೀಗಾಗಿ ಬಿಜೆಪಿಯಲ್ಲಿ ಈಗ ಸಂಘರ್ಷದಂತೆ ಕಾಣುವ ಬೆಳವಣಿಗೆಗಳು ಕಾಣಿಸುತ್ತಿದೆ. ಇದು ಸಾಮರ್ಥ್ಯ ಸಾಬೀತು ಮಾಡುವ ಹಂತದ ಸಹಜ ಕ್ರಿಯೆಯಷ್ಟೇ. ಇದನ್ನು ಭಿನ್ನಮತ ಎಂದು ವ್ಯಾಖ್ಯಾನಿಸುವುದು ತಪ್ಪು. ಹಂತ ಹಂತವಾಗಿ ಇದು ತಿಳಿಯಾಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಹೇಳಿದ್ದಾರೆ.