ಪುತ್ತೂರು: ಹೆಲ್ಮೆಟ್ ಧರಿಸಿಲ್ಲ ಎಂದು ಆಟೋ ಚಾಲಕನಿಗೆ ದಂಡ ತೆರಲು ನೋಟಿಸ್ !

Puttur: ಉಪ್ಪಿನಂಗಡಿಯ ಆಟೋರಿಕ್ಷಾ ಚಾಲಕರೊಬ್ಬರಿಗೆ ಹೆಲ್ಮೆಟ್ ಧರಿಸದೆ ವಿಚಿತ್ರ ಕಾರಣ ನೀಡಿ ದಂಡ ವಿಧಿಸಿ ಮೈಸೂರಿನ ತಲಕಾಡು ಪೊಲೀಸರು ನೋಟಿಸ್ ನೀಡಿದ್ದಾರೆ.

 

ಪುತ್ತೂರು ತಾಲೂಕಿನ ಉಪ್ಪಿನಂಗಡಿಯ ಆಟೋ ಚಾಲಕ ರೋಹಿತ್ ರಿಗೆ ಸೆಪ್ಟೆಂಬರ್ 12 ರಂದು ಮಧ್ಯಾಹ್ನ 3.18 ಗಂಟೆಗೆ ಮೈಸೂರು ರಸ್ತೆಯ ತಲಕಾಡು ಜಂಕ್ಷನ್‌ನಲ್ಲಿ ಹೆಲ್ಮೆಟ್ ಧರಿಸದೆ ವಾಹನ ಸವಾರಿ ಮಾಡಿದ್ದರಿಂದ ಮೋಟಾರು ವಾಹನ ಕಾಯಿದೆಯ ಸಂಚಾರಿ ನಿಯಮದಡಿ 500 ರೂಪಾಯಿ ದಂಡ ಪಾವತಿಸಿ ಎಂಬ ಸಂದೇಶ ಬಂದಿದೆ. ಹೀಗೆ ದಂಡ ವಿಧಿಸಿರುವ ಕೆಎ 21 ಬಿ 3862 ಎಂಬ ಹೆಸರಿನ ವಾಹನವು ಆಟೋ

ಆಗಿದೆ. ಆದರೆ ದ್ವಿಚಕ್ರ ವಾಹನದ ಸವಾರರು ಹೆಲ್ಮೆಟ್ ಹಾಕದ ಕಾರಣ ದಂಡ ವಿಧಿಸುವಂತೆ ಹೆಲ್ಮೆಟ್ ಕಾರಣ ನೀಡಿ ದಂಡ ವಿಧಿಸಲಾಗಿದೆ.

ಆದರೆ ಅಸಲಿಗೆ ಉಪ್ಪಿನಂಗಡಿ ಬಳಿಯ ಪೆರಿಯಡ್ಕ ನಿವಾಸಿ ರೋಹಿತ್ ರ ಆಟೋ ಸದರಿ ದಿನ ಅಂದರೆ ಸೆಪ್ಟೆಂಬರ್ 12 ರಂದು ಉಪ್ಪಿನಂಗಡಿಯಲ್ಲೇ ಇತ್ತು. ಜತೆಗೆ ತನಗೆ ಯಾವುದೇ ಸ್ವಂತ ದ್ವಿಚಕ್ರ ವಾಹನ ಕೂಡಾ ಇಲ್ಲ ಎಂದು ರೋಹಿತ್ ತಿಳಿಸಿದ್ದಾಗಿ ವರದಿಯಾಗಿದೆ. ಆದರೆ ಅವರಿಗೆ ಹೆಲ್ಮೆಟ್ ಧರಿಸದೆ ನಿಯಮ ಉಲ್ಲಂಘಿಸಿರುವುದರಿಂದ ದಂಡ ವಿಧಿಸುವಂತೆ ಸಂದೇಶ ಬಂದಿದೆ.

ಈ ರೀತಿ ದಂಡ ಕಟ್ಟಲು ವಾಟ್ಸಾಪ್ ಸಂದೇಶ ನೀಡಲು ಕಾರಣ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ಆಧಾರದ ಮೇಲೆ ತಪ್ಪುಸಂದೇಶ ಕಳುಹಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಸಿ.ಸಿ.ಕ್ಯಾಮರಾದಲ್ಲಿ ನಂಬರ್ ತಪ್ಪಾಗಿ ದಾಖಲಾಗುವ ಸಾಧ್ಯತೆಯಿದೆಯೇ ಎಂಬ ಬಗ್ಗೆ ಅನುಮಾನಗಳಿವೆ.

ಆಟೋ ಮಾಲೀಕ ರೋಹಿತ್ ಈ ಸಂದೇಶ ನೋಡಿ ಕಂಗಾಲಾಗಿದ್ದು, ತಕ್ಷಣವೇ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಅವರು, ಯಾವುದೇ ನೋಟಿಸ್ ಬಾರದೆ ಯಾವುದೇ ನಿರ್ಧಾರ ಕೈಗೊಳ್ಳಬೇಡಿ ಎಂದಿದ್ದಾರೆ. ಬಳಿಕ ರೋಹಿತ್ ಮೈಸೂರಿನ ತಲಕಾಡು ಪೊಲೀಸ್ ಠಾಣೆಯ ನಂಬರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ತಲಕಾಡು ಪೊಲೀಸರು ನಮ್ಮಲ್ಲಿ ಸಿ.ಸಿ. ಕ್ಯಾಮೆರಾದ ಮೂಲಕ ವಾಹನಗಳಿಗೆ ದಂಡ ಹಾಕುವ ವ್ಯವಸ್ಥೆಯಿಲ್ಲ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಆದ್ದರಿಂದ ಈಗ ಬಂದ ಸಂದೇಶ ವಂಚನೆಯ ಜಾಲವೊಂದರ ಸೃಷ್ಟಿ ಆಗಿರಬಹುದು ಎನ್ನಲಾಗಿದೆ.

Leave A Reply

Your email address will not be published.