Ganesha chaturthi: ಗಣೇಶ ಹಬ್ಬದಲ್ಲಿ ಅಬ್ಬರದ ಡಿಜೆ: ಡಿಜೆ ಸದ್ದಿಗೆ ಬಲಿಯಾದ ವೃದ್ದ ಹಾಗೂ ಗುಬ್ಬಚ್ಚಿಗಳು!

Ganesha chaturchi: ಗಣಪತಿ ಮೂರ್ತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿಜೆ ಸೌಂಡ್ ಅಬ್ಬರಕ್ಕೆ ವೃದ್ಧರೊಬ್ಬರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು ಎನ್ನಲಾಗಿದೆ. ತೀವ್ರ ಶಬ್ದ ಮಾಲಿನ್ಯ ಮತ್ತು ಲೇಸರ್ ಬೆಳಕಿಗೆ ಗುಬ್ಬಚ್ಚಿಗಳೂ ಬಲಿಯಾಗಿವೆ. ತೀರ್ಥಹಳ್ಳಿ ತಾಲೂಕಿನ ಬೇಗುವಳ್ಳಿಯಲ್ಲಿ ಗಣಪತಿ ಮೆರವಣಿಗೆ ವಿಜೃಂಭಣೆಯಿಂದ ನಡೆದಿದ್ದು, ಬಿದರಹಳ್ಳಿಯ ಇ.ಎಸ್.ಶಾಮಣ್ಣ (66) ಪಾಲ್ಗೊಂಡಿದ್ದರು. ಕೊನೆಕೊನೆಗೆ ಡಿಜೆ ಸೌಂಡ್ ಅಬ್ಬರಕ್ಕೆ ಶಾಮಣ್ಣ ತಲೆಸುತ್ತಿನಿಂದ ತೀವ್ರ ಅಸ್ವಸ್ಥಗೊಂಡರು. ಸ್ವಲ್ಪ ಸಮಯದಲ್ಲೇ ಹೃದಯಾಘಾತಕ್ಕೆ ಒಳಗಾಗಿ ಮೃತರಾದರು. ಇದಕ್ಕೆ ಡಿಜೆ ಸೌಂಡ್ ಕಾರಣ ವಾಗಿರಬಹುದು ಎಂಬ ಶಂಕೆಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.

ಡಿಜೆ ಸೌಂಡ್, ಲೇಸರ್ ಬೆಳಕು ಹೆಚ್ಚಾದ ಕಾರಣ ಆಜಾದ್ ರಸ್ತೆಯ ಡಿವೈಡರ್ ಪಾರ್ಕ್‌ ಮರಗಳಲ್ಲಿ ವಾಸವಾಗಿದ್ದ ಗುಬ್ಬಚ್ಚಿಗಳು ಗೂಡಿನಿಂದ ಹಾರಿ ಹೋಗಿವೆ. ಕೆಲವು ಗುಬ್ಬಚ್ಚಿಗಳು ಸತ್ತಿವೆ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಸಂದೇಶ ಜವಳಿ ಹೇಳಿದ್ದಾರೆ.

Leave A Reply

Your email address will not be published.