National Cinema Day 2024: ಸಿನಿಮಾ ಪ್ರಿಯರಿಗೆ ಬಂಪರ್ ಆಫರ್: ಚಿತ್ರಮಂದಿರದಲ್ಲಿ ಟಿಕೆಟ್ ಬೆಲೆ 99ಕ್ಕೆ ಇಳಿಕೆ

National Cinema Day 2024: ಸಿನಿಮಾ ಪ್ರಿಯರಿಗೆ ಬಂಪರ್ ಆಫರ್ ಒಂದು ಇಲ್ಲಿದೆ ನೋಡಿ. ಹೌದು ಟಿಕೆಟ್ ಬೆಲೆಯನ್ನು 99ಕ್ಕೆ ಇಳಿಕೆ ಮಾಡಲಾಗಿದೆ. ಅರೆ! ಯಾಕೆ ಏನು ಯಾವಾಗ?! ಅಂತ ನಿಮಗೆ ಕುತೂಹಲ ಇದ್ದೇ ಇರುತ್ತೆ, ಬನ್ನಿ ಆ ಬಗ್ಗೆ ಇಲ್ಲಿದೆ ಮಾಹಿತಿ.

 

ಇದೇ ತಿಂಗಳು ಸೆಪ್ಟೆಂಬರ್ 20ರಂದು ರಾಷ್ಟ್ರೀಯ ಸಿನಿಮಾ ದಿನವಾಗಿದ್ದು, ಈ ದಿನದಂದು ಸಿನಿಮಾ ನೋಡುವ ಪ್ರೇಕ್ಷಕರಿಗೆ ಕೈಗೆಟುಕುವ ಬೆಲೆಯಲ್ಲಿ ವಿಶೇಷ ರಿಯಾಯಿತಿ ನೀಡಲಾಗ್ತಿದೆ. ಮುಖ್ಯವಾಗಿ ರಾಷ್ಟ್ರ ವ್ಯಾಪ್ತಿ ಚಿತ್ರಮಂದಿರಗಳಲ್ಲಿ 99 ರೂ.ಗೆ ಟಿಕೆಟ್ ಬೆಲೆ ಇಳಿಕೆ ಮಾಡಲು ‘ಮಲ್ಟಿಫ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ’ (MAI) ನಿರ್ಧರಿಸಿದೆ.

ಸೆ.20ರಂದು ಪಿವಿಆರ್, ಸಿನಿಪೊಲೀಸ್, ಮಿರಜ್, ಐನಾಕ್ಸ್, ಸಿಟಿಪ್ರೈಡ್ ಸೇರಿದಂತೆ 4000ಕ್ಕೂ ಹೆಚ್ಚು ಚಿತ್ರಮಂದಿರಗಳು ರಾಷ್ಟ್ರೀಯ ಸಿನಿಮಾ ದಿನವನ್ನು (National Cinema Day 2024) ಆಚರಿಸಲಿದ್ದು, ಈ ದಿನದಂದು ದೇಶಾದ್ಯಂತ ಚಲನಚಿತ್ರ ಪ್ರೇಕ್ಷಕರು ಕೇವಲ 99 ರೂ.ಗೆ ಸಿನಿಮಾ ವೀಕ್ಷಿಸುವ ಅವಕಾಶ ನೀಡಲಾಗುತ್ತಿದೆ.

ಅಷ್ಟು ಮಾತ್ರವಲ್ಲದೆ ಚಿತ್ರಮಂದಿರದಲ್ಲಿನ ಫುಡ್ ಐಟಂಗಳ ಮೇಲೆ ಒಂದೊಳ್ಳೆಯ ಆಫರ್‌ಗಳನ್ನು ನಿಗದಿ ಮಾಡಿದ್ದಾರೆ. ಇದರ ಕುರಿತು ಚಿತ್ರಮಂದಿರಗಳ ವೈಬ್‌ಸೈಟ್‌ನಲ್ಲಿ ಸಂಪೂರ್ಣ ವಿವರ ಸಿಗಲಿದೆ. ಇದರ ಜೊತೆಗೆ ಆನ್‌ಲೈನ್‌ನಲ್ಲಿ ಸಿನಿಮಾ ಟಿಕೆಟ್ ಬುಕ್ಕಿಂಗ್ ಅವಕಾಶ ಕೂಡ ಇದೆ.

Leave A Reply

Your email address will not be published.