BJP: ‘ಹಿಂದುತ್ವದ ಫೈರ್ ಬ್ರಾಂಡ್ ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ತಪ್ಪಿಸಿದ್ದು ನಾನೇ’ – BJP ನಾಯಕನಿಂದ ಸ್ಪೋಟಕ ಹೇಳಿಕೆ

BJP: ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಲ್ಲಿ ಪಕ್ಕಾ ಹಿಂದುತ್ವವಾದಿಯಾದ ಅನಂತ್ ಕುಮಾರ್(Ananth Kumar Hegde) ಹೆಗಡೆಗೆ ಬಿಜೆಪಿ ಟಿಕೆಟ್ ನೀಡದೇ ಇದ್ದದ್ದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಮೋದಿ ಸಚಿವ ಸಂಪುಟದಲ್ಲೇ ಕೆಲಸ ಮಾಡಿದ್ದ ನಾಯಕನಿಗೆ ಯಾರು ಟಿಕೆಟ್ ತಪ್ಪಿಸಿದರು ಎಂಬುದು ಯಕ್ಷ ಪ್ರಶ್ನೆಯಾಗಿತ್ತು. ಆದರೀಗ ಇಂದು ಬಿಜೆಪಿ(BJP) ನಾಯಕೊಬ್ಬರು ಅನಂತ್ ಕುಮಾರ್ ಹೆಗಡೆಗೆ ಟಿಕೆಟ್ ತಪ್ಪಿಸಿದ್ದು ನಾನೇ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.

 

ಉತ್ತರ ಕನ್ನಡ ಜಿಲ್ಲೆ(Uttara Kannada) ಕಳೆದ 27 ವರ್ಷಗಳಿಂದ ಬಿಜೆಪಿ ಭದ್ರಕೋಟೆ ಕ್ಷೇತ್ರವಾಗಿತ್ತು, ಫೈರ್‌ಬ್ರಾಂಡ್ ಹಿಂದುತ್ವವಾದಿ ಅನಂತಕುಮಾರ್ ಹೆಗಡೆ ಇಲ್ಲಿನ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2019ರಲ್ಲಿ ಅವರು 4.79 ಲಕ್ಷ ಮತಗಳ ಅಂತರದಿಂದ ಗೆದ್ದಿದ್ದರು. ನಂತರ ಅವರು ವಿವಾದಗಳಿಂದಲೇ ಹೆಚ್ಚು ಸುದ್ದಿಯಾದರು. ಅವುಗಳಿಂದ ಅವರು ಹೊರಬರಲು ಸಾಧ್ಯವಾದರೂ ಕೂಡ ಸಮಸ್ಯೆಯೇ ಅವರನ್ನು ಸಿಲುಕಿಸಿಹಾಕಿಕೊಂಡದ್ದು ಸುಳ್ಳಲ್ಲ. ಸಂವಿಧಾನ ಬದಲಾವಣೆ ಹೇಳಿಕೆಯೇ ಅವರಿಗೆ ಮುಳವಾಯಿತು. ಇದು ಟಿಕೆಟ್ ತಪ್ಪಲೂ ಕಾರಣವಾಗಿತ್ತು. ಹೀಗಾಗಿ ಅನಂತ್ ಕುಮಾರ್ ಹೆಗಡೆ (Anant Kumar Hegde) ಅವರಿಗೂ ಟಿಕೆಟ್ ತಪ್ಪಿಸಿ ಅವರ ಜಾಗಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮಣೆ ಹಾಕಲಾಗಿತ್ತು. ಅದಕ್ಕೆ ಕಾರಣ ಏನೆಂದು ಛಲವಾದಿ ನಾರಾಯಣ ಸ್ವಾಮಿ(Chalavadi Narayana Swamy) ರಿವಿಲ್ ಮಾಡಿದ್ದಾರೆ.

ಹೌದು, ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದರಿರುವಾಗಲೇ ಅನಂತ್ ಕುಮಾರ್ ಹೆಗಡೆ ಅವರಿಗೆ ಟಿಕೆಟ್ ತಪ್ಪಿಸಿದ್ದು ಬಿಜೆಪಿ ಕಾರ್ಯಕರ್ತರಿಗೆ ಬೇಸರ ಉಂಟು ಮಾಡಿತ್ತು. ಹಲವು ಬಿಜೆಪಿ ಕಾರ್ಯಕರ್ತರು ಕೇಂದ್ರದ ನಾಯಕರ ವಿರುದ್ಧ ಆಕ್ರೋಶ ಕೂಡ ಹೊರಹಾಕಿದ್ದರು. ಇದೀಗ ಅವರಿಗೆ ಟಿಕೆಟ್ ಕೊಡಬೇಡಿ ಎಂದು ನಾನೇ ವರಿಷ್ಠರಿಗೆ ಮನವಿ ಮಾಡಿದ್ದೆ ಎಂದು ವಿಧಾನ ಪರಿಷತ್ ವಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಅಲ್ಲದೆ ಅನಂತ್ ಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿದ್ರು, ಕೇಂದ್ರ ಮಂತ್ರಿ ಇದ್ದಾಗಲೇ ಮೋದಿಜಿಯವರು ಅನಂತ್ ಕುಮಾರ್ ಅವರನ್ನು ಪಾರ್ಲಿಮೆಂಟಿಗೆ ಕರೆಸಿ ದೇಶದ ಜನರ ಕ್ಷಮೇ ಕೇಳುವಂತೆ ಹೇಳಿದ್ರು, ಕ್ಷಮೇ ಕೇಳಿಸಿದ್ದರು ಆದ್ರೆ, ಅವರು ಪುನಃ ಸಂವಿಧಾನ ಬದಲಾವಣೆ ಮಾತನಾಡಿದ್ರು ಹಾಗಾಗಿ ನಾನೇ ನಮ್ಮ ಮುಖಂಡರಿಗೆ ಖಡಕ್ ಆಗಿ ಹೇಳಿದ್ದೆ ಯಾವುದೇ ಕಾರಣಕ್ಕೂ ಅನಂತ್ ಕುಮಾರ್‌ ಅವರಿಗೆ ಟಿಕೆಟ್ ಕೊಡಬೇಡಿ ಎಂದಿದ್ದೆ ಎಂದಿದ್ದಾರೆ.

Leave A Reply

Your email address will not be published.