Liquor Price Increase: ಮದ್ಯ ಪ್ರಿಯರಿಗೆ ಮತ್ತೆ ಶಾಕ್ : ಅಕ್ಟೋಬರ್ 1ರಿಂದಲೇ ಹೊಸ ದರ ಜಾರಿ!

Liquor Price Increase: ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ನೀಡುತ್ತಾ ಬಂದಿದ್ದು, ಇದೀಗ ಸರ್ಕಾರ ಮತ್ತೊಮ್ಮೆ ಮದ್ಯ ಬೆಲೆ ಹೊಸ ದರಪಟ್ಟಿ (Liquor Price Increase) ಬಿಡುಗಡೆ ಮಾಡಲಿದೆ. ಹೌದು, ಅಕ್ಟೋಬರ್ ಮೊದಲ ವಾರದಿಂದಲೇ ಮತ್ತೆ ಪರಿಷ್ಕೃತ ದರ ಜಾರಿ ಮಾಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

2023ರ ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು (CM Siddaramaiah) ಐಎಂಎಲ್ ಮೇಲೆ ಶೇ.20 ಮತ್ತು ಬಿಯರ್ ಮೇಲೆ ಶೇ.10 ಅಬಕಾರಿ ಸುಂಕ ಹೆಚ್ಚಿಸಿದ್ದರು. ಈಗ ಮತ್ತೊಮ್ಮೆ ಬಿಯರ್ ಬೆಲೆ ಏರಿಕೆ ಬಗ್ಗೆ ಅಬಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಅಕ್ಟೊಬರ್ 1 ರಿಂದ ಬೆಲೆ ಏರಿಕೆಯಾಗುವ ಸಾಧ್ಯತೆ ಖಚಿತವಾದಂತಿದೆ.

ಈ ಮದ್ಯ ಬೆಲೆ ಏರಿಕೆ ಹಿನ್ನಲೆ, ಸರ್ಕಾರದ ನಿರ್ಧಾರಕ್ಕೆ ಬಾರ್ ಮಾಲೀಕರು ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಯರ್ ಮಾರಾಟ ಹೆಚ್ಚಾದ ಸಂದರ್ಭದಲ್ಲಿ ಗ್ರಾಹಕರ ಜೊತೆಗೆ ಮಾರಾಟಗಾರರಿಗೂ ಪರಿಣಾಮ ಬೀಳಲಿದೆ. ಸರ್ಕಾರ ಏರಿಕೆ ಬದಲು ದರ ಇಳಿಕೆ ಬಗ್ಗೆ ಯೋಚನೆ ಮಾಡಿದರೆ ಹೆಚ್ಚು ಮಾರಾಟವಾಗಲಿದೆ. ಈ ಮೂಲಕ ಸರ್ಕಾರ ಮತ್ತು ಮಾಲೀಕರಿಗೆ ಅನೂಕೂಲವಾಗಲಿದೆ ಎನ್ನುತ್ತಿದ್ದಾರೆ.

ಬೆಲೆ ಏರಿಕೆ ವಿವರಗಳನ್ನು ನೋಡುವುದಾದರೆ:

ಬಡ್ವೈಸರ್ ಪ್ರಿಮಿಯಂ:

200 ರಿಂದ 215

ಕೆಎಫ್ ಪ್ರಿಮಿಯಂ:

168 ರಿಂದ 180

ಕೆಎಫ್ ಸ್ಟ್ರೋಮ್ :

177 ರಿಂದ 187

ಕೆಎಫ್ ಸ್ಟ್ರಾಂಗ್:

168 ರಿಂದ 180

ಕೆಎಫ್ ಅಲ್ಟ್ರಾ:

199 ರಿಂದ 220

ಟ್ಯುಬರ್ಗ್ ಸ್ಟ್ರಾಂಗ್:

168 ರಿಂದ 180

ಯುಬಿ ಪ್ರಿಮೀಯಂ: 131 ರಿಂದ 143

ಯುಬಿ ಸ್ಟ್ರಾಂಗ್:

131 ರಿಂದ 142

ಇಷ್ಟೇ ಅಲ್ಲದೆ ಇನ್ನುಳಿದ ಬ್ರ‍್ಯಾಂಡ್‌ಗಳ ಮೇಲೂ ಸುಮಾರು 10 ರಿಂದ 20 ರೂ.ವರೆಗೂ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಅಕ್ಟೋಬರ್ ಮೊದಲ ವಾರವೇ ಹೊಸ ದರಗಳು ಪರಿಷ್ಕರಣೆಗೊಳ್ಳುವ ಸಾಧ್ಯತೆ ಇದೆ.

Leave A Reply

Your email address will not be published.