Amith Shah: ‘ಒನ್ ನೇಷನ್-ಒನ್ ಎಲೆಕ್ಷನ್’ ಜಾರಿಗೆ ಮುಹೂರ್ತ ಫಿಕ್ಸ್?! ಅಮಿತ್ ಶಾ ಕೊಟ್ರು ಬಿಗ್ ಅಪ್ಡೇಟ್

Amith Shah: ಪ್ರಧಾನಿ ನರೇಂದ್ರ ಮೋದಿ(PM Modi) ಸರ್ಕಾರದ ಕೆಲವು ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ‘ಒನ್ ನೇಷನ್-ಒನ್ ಎಲೆಕ್ಷನ್’ ಯೋಜನೆ ತುಂಬಾ ಪ್ರಮುಖವಾದುದು. ಮೋದಿ ಅಧಿಕಾರದ ಚುಕ್ಕಾಣಿ ಹಿಡಿದಾಗಿಂದಲೂ ಈ ಯೋಜನೆ ಜಾರಿಗೆ ಹಪಹಪಿಸುತ್ತಿದ್ದಾರೆ. ಈ ಸಲದ ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲವು ಸಾಧಿಸಿ ಈ ಯೋಜನೆ ಜಾರಿಗೆ ತರಲು ಬಿಜೆಪಿ ಪ್ಲಾನ್ ಮಾಡಿತ್ತು. ಆದರೆ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿ ಮೈತ್ರಿ ಸರ್ಕಾರ ರಚಿಸಿತು. ಜನ ಈ ಯೋಜನೆ ಬಿಜೆಪಿ ತಿಲಾಂಜಲಿ ಹಾಡೋದು ಪಕ್ಕಾ ಎಂದು ಮಾತನಾಡಿದ್ದರು. ಆದರೀಗ ಅಚ್ಚರಿ ಎಂಬಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ(Amitj Shah) ಅವರು ‘ಒನ್ ನೇಷನ್-ಒನ್ ಎಲೆಕ್ಷನ್’ ಜಾರಿ ಬಗ್ಗೆ ಬಿಗ್ಅಪ್ಡೇಟ್ ನೀಡಿದ್ದಾರೆ.

ಯಸ್, ಎನ್ ಡಿಎ(NDA) ಸರ್ಕಾರದ 3ನೇ ಅವಧಿಯಲ್ಲೇ ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ತರಲಾಗುವುದು. ಇದಕ್ಕೆ ಎಲ್ಲ ಮೈತ್ರಿ ಪಕ್ಷಗಳ ಬೆಂಬಲ ಇದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ ಮೋದಿ ಪ್ರಸ್ತಾಪಿಸಿರುವ ‘ಒಂದು ದೇಶ ಒಂದು ಚುನಾವಣೆ’ ನೀತಿಯನ್ನು ಎನ್‌ಡಿಎ ಮಿತ್ರಪಕ್ಷಗಳಾದ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಅವರ ಜೆಡಿಯು, ಕೇಂದ್ರ ಸಚಿವ ಚಿರಾಗ್‌ ಪಾಸ್ವಾನ್‌ ಅವರ ಎಲ್‌ಜೆಪಿ ಬೆಂಬಲಿಸಿವೆ ಎಂದು ಅವರು ತಿಳಿಸಿದ್ದಾರೆ.

ಒಂದು ದೇಶ- ಒಂದು ಚುನಾವಣೆ ಏಕೆ?
ದೇಶದೆಲ್ಲೆಡೆ ಏಕಕಾಲಕ್ಕೆ ಚುನಾವಣೆ ನಡೆಸುವ ಸಮಯ ಬಂದಿದೆ.ಏಕಕಾಲದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ನಡೆಯುವುದರಿಂದ ವೆಚ್ಚ ತಗ್ಗಲಿದೆ ಎಂದು ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಅಲ್ಲದೆ ವರ್ಷದುದ್ದಕ್ಕೂ ಚುನಾವಣೆ ನಡೆಯುವುದು ದೇಶದ ಅಭಿವೃದ್ದಿ ದೃಷ್ಟಿಯಿಂದ ಉತ್ತಮವಲ್ಲ. ಏಕಕಾಲಕ್ಕೆ ಚುನಾವಣೆ ನಡೆಸುವುದರಿಂದ ಮಾನವ ಸಂಪನ್ಮೂಲ ಸದ್ಮಳಕೆ ಆಗುವುದರಿಂದ ನೀತಿ ಸಂಹಿತಂ ಸಂಕಟ ಸಹ ಪರಿಹಾರವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಅಂದಹಾಗೆ ರಾಷ್ಟ್ರೀಯ ಸಂಪನ್ಮೂಲಗಳು ಜನಸಾಮಾನ್ಯರಿಗೆ ಬಳಕೆಯಾಗುವಂತೆ ಪಕ್ಷಗಳನ್ನು ಕೋರಿದ ಅವರು, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಕನಸನ್ನು ನನಸಾಗಿಸಲು ನಾವು ಮುಂದಾಗಬೇಕು ಎಂದಿದ್ದರು. ‘ಒಂದು ರಾಷ್ಟ್ರ, ಒಂದು ಚುನಾವಣೆ’ ಎಂಬುದು ಬಿಜೆಪಿ ತನ್ನ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ನೀಡಿದ ಪ್ರಮುಖ ಭರವಸೆಗಳಲ್ಲಿ ಒಂದಾಗಿದೆ.

ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಈ ವರ್ಷದ ಮಾರ್ಚ್‌ನಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ಮೊದಲ ಹಂತವಾಗಿ ಶಿಫಾರಸು ಮಾಡಿತು. ಪ್ರತ್ಯೇಕವಾಗಿ, ಕಾನೂನು ಆಯೋಗವು 2029 ರಿಂದ ಪ್ರಾರಂಭವಾಗುವ ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಪುರಸಭೆಗಳು ಮತ್ತು ಪಂಚಾಯತ್‌ಗಳಂತಹ ಸ್ಥಳೀಯ ಸಂಸ್ಥೆಗಳಿಗೆ ಎಲ್ಲಾ ಮೂರು ಹಂತದ ಸರ್ಕಾರಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಶಿಫಾರಸು ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

Leave A Reply

Your email address will not be published.