Supreme Court : ಬುಲ್ಡೋಜರ್ ಕಾರ್ಯಾಚರಣೆಗೆ ಬಿಗ್ ಬ್ರೇಕ್ – ಅನುಮತಿ ಇಲ್ಲದೆ ದೇಶದಲ್ಲಿ ಯಾರ ಆಸ್ತಿಯನ್ನೂ ಧ್ವಂಸಮಾಡುವಂತಿಲ್ಲ ಎಂದ ಸುಪ್ರೀಂ ಕೋರ್ಟ್!!

Supreme Court : ಉತ್ತರ ಪ್ರದೇಶದಲ್ಲಿ(UP) ಏನಾದರೂ ಕೃತ್ಯವೆಸಗಿ ಸಿಕ್ಕಿಬಿದ್ದ ಅಪರಾಧಿಗಳ ಮನೆಯನ್ನು, ಆಸ್ತಿಯನ್ನು ಬುಲ್ಡೋಜರ್ ಮೂಲಕ ಧ್ವಂಸ ಮಾಡುವ ವಿಚಿತ್ರ ಕಾರ್ಯಾಚರಣೆ ದೇಶಾದ್ಯಂತ ಸದ್ದು ಮಾಡಿತ್ತು. ಅಪರಾಧಿಗಳಿಗೆ ನಡುಕವನ್ನೂ ಹುಟ್ಟಿಸಿತ್ತು. ಅಲ್ಲದೆ ಕೆಲವು ಬಿಜೆಪಿ ಆಡಳಿತದ ರಾಜ್ಯಗಳು ತಮ್ಮ ರಾಜ್ಯದಲ್ಲೂ ಈ ರೀತಿ ಮಾಡಬೇಕೆಂದು ಚಿಂತಿಸಿತ್ತು. ಆದರೀಗ ಇದೆಲ್ಲದರ ನಡುವೆಯೇ ಈ ಬುಲ್ಡೋಜರ್ ಕಾರ್ಯಾಚರಣೆಗೆ ಬಿಗ್ ಬ್ರೇಕ್ ಸಿಕ್ಕಿದೆ. ಸುಪ್ರೀಂ ಕೋರ್ಟ್(Supreme Court) ಈ ಕುರಿತು ಮಹತ್ವದ ತೀರ್ಪು ನೀಡಿದೆ.

ಹೌದು, ‘ತನ್ನ ಅನುಮತಿಯಿಲ್ಲದೆ ದೇಶದಲ್ಲಿ ಬುಲ್ಡೋಜರ್(Bulldozer) ಬಳಸಿ ಯಾವುದೇ ನೆಲಸಮಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ನ್ಯಾಯಪೀಠವು ಈ ಮಹತ್ವದ ತೀರ್ಮಾನ ಹೊರಡಿಸಿದೆ. ಅಕ್ಟೋಬರ್ 1ರಂದು ಮುಂದಿನ ವಿಚಾರಣೆಯ ದಿನಾಂಕದವರೆಗೆ ತಡೆಯಾಜ್ಞೆ ಜಾರಿಯಲ್ಲಿರುತ್ತದೆ ಎಂದು ಹೇಳಿದೆ.

ಆದಾಗ್ಯೂ, ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು, ರೈಲ್ವೆ ಮಾರ್ಗಗಳು, ಜಲಮೂಲಗಳ ಅತಿಕ್ರಮಣಗಳಿಗೆ ಈ ತಡೆಯಾಜ್ಞೆ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.ದಂಡನಾತ್ಮಕ ಕ್ರಮವಾಗಿ ಅಪರಾಧಗಳ ಆರೋಪ ಹೊತ್ತಿರುವ ವ್ಯಕ್ತಿಗಳ ಕಟ್ಟಡಗಳನ್ನು ನೆಲಸಮಗೊಳಿಸುವಲ್ಲಿ ವಿವಿಧ ರಾಜ್ಯ ಸರ್ಕಾರಗಳ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯಲ್ಲಿ ಈ ನಿರ್ದೇಶನವನ್ನು ನೀಡಿದೆ.

Leave A Reply

Your email address will not be published.