Belthangady: ರಬ್ಬರ್ ತೋಟದ ಕಳೆಯನ್ನು ತೆರವುಗೊಳಿಸುತ್ತಿದ್ದ ವೇಳೆ ಎದೆಗೆ ಚುಚ್ಚಿದ ರಬ್ಬರ್ ಕಪ್ ರಿಂಗ್: ವ್ಯಕ್ತಿ ಸಾವು

Share the Article

Belthangady: ರಬ್ಬರ್ ತೋಟದ ಕಳೆಯನ್ನು ಯಂತ್ರದ ಮೂಲಕ ತೆರವುಗೊಳಿಸುತ್ತಿದ್ದಾಗ, ರಬ್ಬರ್ ಮರಕ್ಕೆ ಕಪ್ ಸಿಲುಕಿಸುವ ರಿಂಗ್ ಎದೆಗೆ ಬಡಿದು ಗಂಭೀರ ಗಾಯಗೊಂಡ ಹಾರಿತ್ತಕಜೆ (Belthangady) ನಿವಾಸಿ ಕೊರಗಪ್ಪ ಗೌಡ (56) ಮೃತಪಟ್ಟಿದ್ದಾರೆ.

ಇಂದು (ಸೆ.17) ಬೆಳಗ್ಗೆ ಕಳೆ ತೆಗೆಯುವ ಯಂತ್ರಕ್ಕೆ ಸಿಕ್ಕಿದ ಕಬ್ಬಿಣದ ಸರಿಗೆಯ ರಿಂಗ್ ವೇಗವಾಗಿ ಎದೆಗೆ ಬಡಿದು ಆಳವಾದ ಗಾಯವಾಗಿದ್ದ, ಕೊರಗಪ್ಪ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಅಷ್ಟರಲ್ಲಿ ದಾರಿ ಮಧ್ಯೆ ಅವರು ಮೃತ ಪಟ್ಟಿದ್ದಾರೆ ಎಂದು ವೈದ್ಯರು ದೃಢ ಪಡಿಸಿದ್ದಾರೆ. ಈ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ಪತ್ನಿ ಲಲಿತಾ, ಮಕ್ಕಳಾದ ಹರ್ಷಿತ್, ಪ್ರವೀಣ್‌ರನ್ನು ಅಗಲಿದ್ದಾರೆ.

Leave A Reply