Uttar pradesh: ಅನ್ಯಧರ್ಮ ಪ್ರೀತಿ: ನಾನು ಅಪಾಯದಲ್ಲಿದ್ದೇನೆ, ನನಗೆ ರಕ್ಷಣೆ ನೀಡಿ ಎಂದು ಮುಖ್ಯಮಂತ್ರಿಯಲ್ಲಿ ಮುಸ್ಲಿಂ ಯುವತಿ ಮನವಿ!

Uttar pradesh: ಅನ್ಯಧರ್ಮದ ಯುವಕನನ್ನು ಪ್ರೀತಿಸಿದ ಹಿನ್ನೆಲೆ, ನಾನು ಅಪಾಯದಲ್ಲಿದ್ದೇನೆ, ನನಗೆ ರಕ್ಷಣೆ ನೀಡಿ ಎಂದು ಮುಖ್ಯಮಂತ್ರಿಯಲ್ಲಿ ಮನವಿ ಮಾಡಿದ ಸುದ್ದಿಯೊಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.

 

ಮುಸ್ಲಿಂ ಯುವತಿಯೊಬ್ಬಳು, ನನ್ನ ಕುಟುಂಬದವರು ನನಗೆ ಹೊಡೆದು ಸಾಯಿಸಬಹುದು, ನನಗೆ ಸಹಾಯ ಮಾಡಿ ಎಂದು ಅಲಿಘಢನಲ್ಲಿರುವ ಹಿಂದೂ ಯುವಕನನ್ನು ಪ್ರಿತಿಸಿದ ಮುಸ್ಲಿಂ ಯುವತಿಯಿಂದ ಉತ್ತರ ಪ್ರದೇಶ (Uttar pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಮನವಿ ಮಾಡಿದ್ದಾರೆ.

ಯುವತಿಯು, “ನನ್ನ ಪ್ರಿಯಕರನ ಹೆಸರು ಶೌರ್ಯ ವರ್ಮಾ ಎಂದಾಗಿದ್ದು, ನಾವಿಬ್ಬರು ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದೇವೆ, ನನಗೆ ಹಿಂದೂ ಧರ್ಮದಲ್ಲಿ ನಂಬಿಕೆ ಇದೆ. ನಾನು ಶೌರ್ಯನನ್ನು ಮದುವೆಯಾಗಲು ಬಯಸುತ್ತೇನೆ. ಈ ವಿಚಾರದಲ್ಲಿ ನಾನು ದೃಢ ನಿರ್ಧಾರ ಮಾಡಿದ್ದೇನೆ. ನಾನು ಅದನ್ನು ಎಂದಿಗೂ ಬದಲಾಯಿಸುವುದಿಲ್ಲ; ಆದರೆ ನಮ್ಮ ಮದುವೆಗೆ ನನ್ನ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನನ್ನ ಕುಟುಂಬದವರು ನನ್ನನ್ನು ಮನೆಯಲ್ಲಿ ಕೂಡಿ ಹಾಕಿದ್ದು ಮತ್ತು ಅವರು ನನ್ನನ್ನು ಸಾಯಿಸಬಹುದು. ನನ್ನ ಜೀವಕ್ಕೆ ಅಪಾಯವಿದೆ ಎಂದು ಹೇಳಿದ್ದಾಳೆ.

ಈ ಬಗ್ಗೆ ಪೊಲಿಸರು, ಇಬ್ಬರೂ ಪ್ರಜ್ಞಾಪೂರ್ವಕರಾಗಿದ್ದು, ಅವರು ಪರಸ್ಪರ ಮದುವೆಯಾಗಲು ನಿರ್ಧರಿಸಿದ್ದಾರೆ. ಹಾಗಾಗಿ ಪೊಲೀಸರು ಅವರಿಗೆ ರಕ್ಷಣೆ ಹಾಗೂ ಸಂಪೂರ್ಣ ನೆರವು ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

1 Comment
  1. MichaelLiemo says

    ventolin 90: Buy Ventolin inhaler online – ventolin hfa price
    ventolin 200 mcg

Leave A Reply

Your email address will not be published.