Monkeypox: ಮಂಕಿಪಾಕ್ಸ್ ಬೆಂಗಳೂರಿಗೆ ಎಂಟ್ರಿ: ಮತ್ತೆ ಕ್ವಾರಂಟೈನ್, ಮಾಸ್ಕ್ ಕಡ್ಡಾಯ!

Monkeypox: ಮಂಕಿಪಾಕ್ಸ್ ಬೆಂಗಳೂರಿಗೆ ಎಂಟ್ರಿ ಆಗಿದ್ದು ಒಂದು ವೇಳೆ ಮಂಕಿಪಾಕ್ಸ್ ಪ್ರಕರಣ ದೃಢ ಪಟ್ಟಲ್ಲಿ ಕ್ವಾರಂಟೈನ್, ಮಾಸ್ಕ್ ಕಡ್ಡಾಯವಾಗಿದೆ. ದೇಶದಲ್ಲಿ ಮಂಕಿಪಾಕ್ಸ್‌ನ ಮೊದಲ ಪ್ರಕರಣ ದೆಹಲಿಯಲ್ಲಿ ಪತ್ತೆಯಾದ ನಂತರ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲಾ ಪ್ರಯಾಣಿಕರಿಗೂ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.

ಸದ್ಯ ರಾಜ್ಯದಲ್ಲಿ ಮಂಕಿಪಾಕ್ಸ್ (Monkeypox) ಹರಡುವುದನ್ನು ತಡೆಯಲು, ಪ್ರತಿದಿನ ಸುಮಾರು 2000 ಪ್ರಯಾಣಿಕರನ್ನು ಪರೀಕ್ಷಿಸಲಾಗುತ್ತಿದೆ. ಈಗಾಗಲೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗಾಗಿ ನಾಲ್ಕು ಕಿಯೋಸ್ಕ್‌ಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ಸ್ಕ್ರೀನಿಂಗ್ ನಡೆಯುತ್ತದೆ. ಪ್ರತಿಯೊಬ್ಬ ಅಂತರರಾಷ್ಟ್ರೀಯ ಪ್ರಯಾಣಿಕರು ಇದರ ಮೂಲಕ ಹಾದು ಹೋಗಬೇಕು. ಇಲ್ಲಿ ಮಂಕಿಪಾಕ್ಸ್ ಪರೀಕ್ಷೆಯನ್ನು ಮಾಡಲಾಗುತ್ತಿದೆ. ಒಂದು ವೇಳೆ ಮಂಕಿಪಾಕ್ಸ್ ಪತ್ತೆಯಾದರೆ 21 ದಿನ ಕ್ವಾರಂಟೈನ್‌ ನಲ್ಲಿ ಇರಬೇಕಾಗುತ್ತದೆ. ಮತ್ತು ಐಸೋಲೇಶನ್‌ಗೆ ಒಳಗಾಗಬೇಕಾಗುತ್ತದೆ.

ಆರೋಗ್ಯ ತಜ್ಞರ ಪ್ರಕಾರ, ಜ್ವರ, ಚರ್ಮದ ಮೇಲೆ ದದ್ದುಗಳು, ತೀವ್ರ ತಲೆನೋವು, ಸ್ನಾಯುಗಳಲ್ಲಿ ನೋವು, ಬೆನ್ನು ನೋವು ಮುಂತಾದವು ಮಂಕಿಪಾಕ್ಸ್‌ನ ಪ್ರಮುಖ ಲಕ್ಷಣಗಳಾಗಿವೆ. ಇನ್ನು ಮುಖ್ಯವಾಗಿ ಮಂಕಿಪಾಕ್ಸ್ ಪ್ರಾಣಿಗಳಿಂದ ಮನುಷ್ಯನಿಗೆ ಹರಡುವ ವೈರಸ್ ಆಗಿದೆ. ಕೆಮ್ಮುವಾಗ, ಸೀನುವಾಗ ಅಥವಾ ಮಾತನಾಡುವಾಗ ಗಾಳಿಯ ಮೂಲಕ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹೀಗಾಗಿ ಮತ್ತೆ ಮಾಸ್ಕ್ ಧರಿಸುವುದು ಉತ್ತಮ ಎನ್ನಲಾಗಿದೆ. ಆದ್ದರಿಂದ ವಿಮಾನ ನಿಲ್ದಾಣಕ್ಕೆ ಬರುವ ಎಲ್ಲಾ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಸಹಕರಿಸಬೇಕೆಂದು ಪ್ರಾಧಿಕಾರ ಮನವಿ ಮಾಡಿದೆ. ರಾಜ್ಯದಲ್ಲಿ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಇದು ಕಡ್ಡಾಯ ತಪಾಸಣೆಯಾಗಿದೆ.

ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಈ ಬಗ್ಗೆ ಮಾಹಿತಿ ನೀಡಿದ್ದು, ವಿಶೇಷವಾಗಿ ಆಫ್ರಿಕನ್ ದೇಶಗಳಿಂದ ಬರುವವರು ಮಂಕಿಪಾಕ್ಸ್ ವೈರಸ್‌ಗಾಗಿ ಸ್ಕ್ರೀನಿಂಗ್‌ಗೆ ಒಳಗಾಗುತ್ತಾರೆ ಮತ್ತು ಪಾಸಿಟಿವ್ ಕಂಡುಬಂದಲ್ಲಿ 21 ದಿನಗಳ ಕಡ್ಡಾಯ ಕ್ವಾರಂಟೈನ್ ಮತ್ತು ಐಸೋಲೇಶನ್‌ಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಲಾಗಿದೆ.

Leave A Reply

Your email address will not be published.