Ration card cancelled: ರೇಷನ್ ಕಾರ್ಡ್ ರದ್ದು ಮಾಡಿದ ಪಟ್ಟಿ ಬಿಡುಗಡೆ! ನಿಮ್ಮ ಹೆಸರಿದೆಯೇ ಚೆಕ್ ಮಾಡಿ

Ration card cancelled: ರಾಜ್ಯದಲ್ಲಿ ಅಕ್ರಮ ರೇಷನ್‌ ಕಾರ್ಡ್‌ದಾರರ (Illegal Bpl Ration Cards) ಸಂಖ್ಯೆ ಹೆಚ್ಚಳವಾಗಿದೆ. ಇದೀಗ ಆಹಾರ ಇಲಾಖೆಯು ಲಕ್ಷ ಲಕ್ಷ ಕಾರ್ಡ್‌ಗಳನ್ನು ಪತ್ತೆ ಮಾಡಿದ್ದು, ರೇಷನ್ ಕಾರ್ಡ್ ರದ್ದು ಮಾಡಿದ ಪಟ್ಟಿ ಬಿಡುಗಡೆ ಮಾಡಿದೆ.

 

ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ಒಟ್ಟು 10,97,621 ಅನರ್ಹ ಬಿಪಿಎಲ್ ಕಾರ್ಡದಾರರನ್ನು ಗುರುತಿಸುವ ಕೆಲಸ ಶೀಘ್ರ ಗತಿಯಲ್ಲಿದ್ದು, ಸರಕಾರಿ ನೌಕರಿಯಲ್ಲಿರುವವರು, ವಾರ್ಷಿಕ ಆದಾಯ ತೆರಿಗೆ ಪಾವತಿಸುವವರು, ಮತ್ತು ಆರ್ಥಿಕವಾಗಿ ಸಬಲರಾಗಿರುವವರು ಸಹ ಬಿಪಿಎಲ್ ಪಡೆದಿರುವುದು ಬೆಳಕಿಗೆ ಬಂದಿರುತ್ತದೆ. ಈ ಹಿನ್ನಲೆ ಆಹಾರ ಇಲಾಖೆಯಿಂದ ನಕಲಿ ಬಿಪಿಎಲ್ ಕಾರ್ಡದಾರರ ಹುಡುಕಿ ರದ್ದು ಪಡಿಸುವ ಕಾರ್ಯ ನಡೆದಿದ್ದು ಅಂತಹ ಅನರ್ಹ ಪಟ್ಟಿಯನ್ನು ಈ ಕೆಳಗಿನ ವಿಧಾನದ ಮೂಲಕ ನೋಡಬಹುದು.

ವಿಧಾನ-1: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಈ ಲಿಂಕ್  https://ahara.kar.nic.in/Home/Homeಕ್ಲಿಕ್ ಮಾಡಬೇಕು.

ವಿಧಾನ-2: ನಂತರ ಅದರಲ್ಲಿ ಇ-ರೇಷನ್ ಕಾರ್ಡ್ (E-ration card) ನಲ್ಲಿ show cancelled/suspended list ಮೇಲೆ ಕ್ಲಿಕ್ ಮಾಡಬೇಕು.

ವಿಧಾನ-3: ನಂತರ ಜಿಲ್ಲೆ, ತಾಲೂಕು, ತಿಂಗಳು, ವರ್ಷ ಆಯ್ಕೆ ಮಾಡಬೇಕು ನಂತರ go ಮೇಲೆ ಕ್ಲಿಕ್ ಮಾಡಿದರೆ ನಿಮಗೆ ನಿಮ್ಮ ತಾಲೂಕಿನಲ್ಲಿ ಆ ತಿಂಗಳಿನಲ್ಲಿ ರದ್ದಾದ ಎಲ್ಲಾ ರೇಷನ್ ಕಾರ್ಡ ದಾರರ ಪಟ್ಟಿ ಬರುತ್ತದೆ ಅದರಲ್ಲಿ ನಿಮ್ಮ ರೇಷನ್ ಕಾರ್ಡ್ ಇದೆಯಾ ಚೆಕ್ ಮಾಡಿಕೊಳ್ಳಿ.

 

Leave A Reply

Your email address will not be published.