Pan Card: ಪ್ಯಾನ್ ಕಾರ್ಡ್ ಇದೆಯೇ? ತಪ್ಪದೇ ಈ ವಿಷ್ಯ ತಿಳಿಯಿರಿ

Pan card: PAN ಕಾರ್ಡ್ ಆದಾಯ ತೆರಿಗೆ ಇಲಾಖೆಯಿಂದ ನೀಡಲಾದ 10-ಅಂಕಿಯ ವಿಶಿಷ್ಟ ಸಂಖ್ಯೆಯಾಗಿದೆ. ಪಾನ್ ಕಾರ್ಡ್ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಅಗತ್ಯವಾದ ಪ್ರಮುಖ ದಾಖಲೆಯಾಗಿದೆ. ಇದು ಬ್ಯಾಂಕ್ ಖಾತೆಗಳನ್ನು ತೆರೆಯಲು ಮತ್ತು ಇತರ ಹಲವಾರು ಹಣಕಾಸು ವಹಿವಾಟುಗಳಿಗೆ ಬಹು ಮುಖ್ಯವಾಗಿ ಬೇಕಾಗುತ್ತದೆ. ಸದ್ಯ ನೀವು ಪ್ಯಾನ್ ಕಾರ್ಡ್ ಹೊಂದಿರುವವರಾಗಿದ್ದರೆ, ಈ ಮಾಹಿತಿಯು ನಿಮಗೆ ಮುಖ್ಯವಾಗಿದೆ.

 

ಪ್ಯಾನ್ ಕಾರ್ಡ್ ನ್ನು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದು, ಬ್ಯಾಂಕ್ ಖಾತೆ ತೆರೆಯುವುದು, ಕ್ರೆಡಿಟ್ ಕಾರ್ಡ್ ಪಡೆಯುವುದು, ಆಸ್ತಿಯನ್ನು ಖರೀದಿಸುವುದು ಅಥವಾ ಮಾರಾಟ ಮಾಡುವುದು, 50,000 ಮೀರಿದ ವಹಿವಾಟು ಮಾಡೋದು, ವಿದೇಶ ಪ್ರವಾಸ ಹೀಗೆ ಈ ಮೇಲಿನ ಎಲ್ಲ ವಹಿವಾಟಿಗೆ ಪ್ಯಾನ್ ಕಾರ್ಡ್ ಹೊಂದಿರುವುದು ಬಹಳ ಮುಖ್ಯ.

ಎಲ್ಲಾ ಪ್ಯಾನ್ ಕಾರ್ಡ್ ಹೊಂದಿರುವವರು ತಮ್ಮ ಪ್ಯಾನ್ ಕಾರ್ಡ್ ಅನ್ನು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಈಗ ಕಡ್ಡಾಯವಾಗಿದೆ. ಒಂದು ವೇಳೆ ನಿಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ಅಮಾನ್ಯವಾಗುತ್ತದೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ನಿಮಗೆ ಸಾಧ್ಯವಾಗುವುದಿಲ್ಲ, ನಿಮಗೆ ಬ್ಯಾಂಕ್ ಖಾತೆಗಳು, ಮ್ಯೂಚುಯಲ್ ಫಂಡ್‌ಗಳು ಇತ್ಯಾದಿಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ, ಅಲ್ಲದೆ ಟಿಡಿಎಸ್ ದರಗಳು ದ್ವಿಗುಣಗೊಳ್ಳಲಿದೆ.

ಸದ್ಯ ನೀವು ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡುವುದು ಹೇಗೆ ಅನ್ನೋದು ಇಲ್ಲಿದೆ:

ಆದಾಯ ತೆರಿಗೆ ವೆಬ್‌ಸೈಟ್ www.incometax.gov.in ಗೆ ಭೇಟಿ ನೀಡಿ, ‘ಲಿಂಕ್ ಆಧಾರ್’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಿಮ್ಮ ಪ್ಯಾನ್ ಮತ್ತು ಆಧಾರ್ ಸಂಖ್ಯೆಗಳನ್ನು ನಮೂದಿಸಿ, OTP ಪರಿಶೀಲಿಸಿ ಸಲ್ಲಿಸಿ ಕ್ಲಿಕ್ ಮಾಡಿ.

ಮುಖ್ಯವಾಗಿ ನಿಮ್ಮ ಪ್ಯಾನ್ ಕಾರ್ಡ್ ಜೀವಿತಾವಧಿಯವರೆಗೆ ಮಾನ್ಯವಾಗಿರುತ್ತದೆ ಮತ್ತು ಅದನ್ನು ನವೀಕರಿಸುವ ಅಗತ್ಯವಿಲ್ಲ. ಒಂದು ವೇಳೆ ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋದರೆ, ನೀವು ನಕಲಿ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಇನ್ನು ಪ್ಯಾನ್ ಕಾರ್ಡ್‌ನಲ್ಲಿ ನಿಮ್ಮ ವಿವರ ತಪ್ಪು ಇದ್ದಲ್ಲಿ , ನೀವು ಅದನ್ನು ಆನ್‌ಲೈನ್‌ನಲ್ಲಿ ಸರಿಪಡಿಸಬಹುದು.

Leave A Reply

Your email address will not be published.