Dakshina Kannada: ಬಿ.ಸಿ. ರೋಡಿನಲ್ಲಿ ಈದ್ ಆಚರಣೆ – ‘ಮೆರವಣಿಗೆ ಹೇಗ್ ಮಾಡ್ತೀರಿ ನೋಡೋಣ’ ಎಂದ ಶರಣ್ ಪಂಪ್ವೆಲ್, ‘ಧಮ್ ಇದ್ರೆ ತಡಿ’ ಎಂದ ಮಹಮ್ಮದ್ ಶರೀಫ್ !!

Dakshina Kannada: ನಾಗಮಂಗಲ (Nagamangala) ಗಣೇಶ ಮೆರವಣಿಗೆ (Ganesha Rally) ವೇಳೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಪ್ರತಿಭಟನೆ (Protest) ನಡೆಯುತ್ತಿರುವ ವೇಳೆ ಕೋಮು ಸಂಘರ್ಷದ ಗೂಡಾಗಿರುವ ದಕ್ಷಿಣ ಕನ್ನಡದಲ್ಲಿ ಈದ್ ಮಿಲಾದ್ ಆಚರಣೆಗೆ ಹಿಂದೂ, ಮುಸ್ಲಿಂ ಮುಖಂಡರಿಂದ ಸವಾಲೆಸೆಯಲಾಗಿದೆ.

 

ಹೌದು, ಮುಸ್ಲಿಂ ಸಂಘಟನೆಗಳು ಮಂಗಳೂರಿನ ಬಿಸಿ ರೋಡ್ ನಲ್ಲಿ ಈದ್ ಮಿಲಾದ್ (Eid-Milad) ಆಚರಣೆಗೆ ಭರದಿಂದ ಸಿದ್ದತೆ ನಡೆಸಿದೆ. ತಯಾರಿ ಮಾತ್ರ ಮಾಡಿ, ಅದ್ಧೂರಿಯಾಗಿ ಮೆರವಣಿಗೆ ಮಾಡಿದ್ದರೆ ಯಾರಿಗೂ ಸಮಸ್ಯೆ ಇರುತ್ತಿರಲಿಲ್ಲ. ಆದರೀಗ ಅಲ್ಲಿ ಕಾಂಗ್ರೆಸ್ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮುಹಮ್ಮದ್ ಶರೀಫ್ ಹಾಗೂ ಅವರ ಸಹೋದರ ಹಸೈನಾರ್ ಕೋಲು ಕೊಟ್ಟು ಪೆಟ್ಟು ತಂದ ಘಟನೆ ನಡೆಯಲಿದೆ.

ಹೌದು, ಹಿಂದೂಪರ ಸಂಘಟನೆಯ ಮುಖಂಡ ಶರಣ್ ಪಂಪ್ವೆಲ್‌ ಗೆ ಓಪನ್ ಚಾಲೆಂಜ್ ನೀಡಿರುವ ಬಂಟ್ವಾಳ ಪುರಸಭಾ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್, ವಾಟ್ಸಪ್ ಆಡಿಯೋ ಮೂಲಕ ಧಮ್ ಇದ್ರೆ ಮಿಲಾದ್ ಮೆರವಣಿಗೆ ತಡಿ ಎಂದು ಸವಾಲ್ ಹಾಕಿದ್ದಾರೆ. ‘ಶರಣ್ ಪಂಪ್ವೆಲ್ ಧಮ್ ಇದ್ರೆ ಬಿಸಿರೋಡ್ ಮೆರವಣಿಗೆ ತಡಿ, ಮೆರವಣಿಗೆ ಸಾಗುವಾಗ ಧಮ್ ಇದ್ರೆ ಬಂದು ನಿಲ್ಲು, ನೀನು ಯಾವ ಸ್ಥಳಕ್ಕೆ ಬರ್ತಿ ಅಂತಾ ಹೇಳು, ಸೋಮವಾರ ಬೆಳಗ್ಗೆ 7 ಗಂಟೆಗೆ ಮೆರವಣಿಗೆ ನಡೆಯುತ್ತದೆ, ನೀನು ಬಂದು ಮೆರವಣಿಗೆ ಆಗುವಾಗ ಧಮ್ ಇದ್ರೆ ನಿಲ್ಲು ಎಂದು ಪ್ರಚೋದನಾತ್ಮಕ ರಿತಿಯಲ್ಲಿ ಆಡಿಯೋ ಸಂದೇಶ ರವಾನಿಸಿದ್ದಾರೆ.

ಅಂದಹಾಗೆ ನಾಗಮಂಗಲ ಗಣೇಶೋತ್ಸವದ ಕುರಿತು ಹಿಂದೂಪರ ಮುಖಂಡ ಶರಣ್ ಪಂಪ್ವೆಲ್ (Sharan Pampwell) ಅವರು ‘ಮೆರವಣಿಗೆ ಹೇಗೆ ಮಾಡ್ತೀರಿ ನೋಡೋಣ ಎಂದು ಪ್ರಚೋದನಕಾರಿ ಭಾಷಣ ಮಾಡಿದ್ದರು. ಸದ್ಯ ಇದನ್ನು ಸವಾಲಾಗಿ ತೆಗೆದುಕೊಂಡಿರುವ ಬಂಟ್ವಾಳ (Bantwal) ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಷರೀಫ್ ಧಮ್ ಇದ್ರೆ ಬಿಸಿ ರೋಡ್‌ಗೆ (BC Road) ಬಾ ಎಂದು ಓಪನ್ ಚಾಲೆಂಜ್ ಹಾಕಿದ್ದಾರೆ.

ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಮುಸ್ಲಿಂ ಮುಖಂಡರು ಸವಾಲು ಹಾಕಿದ್ದ ಹಿನ್ನೆಲೆಯಲ್ಲಿ, ಫೇಸ್ ಬುಕ್ ನಲ್ಲಿ ಬಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ ನಾಳೆ ಬೆಳಿಗ್ಗೆ ಬಿ.ಸಿ. ರೋಡ್ ಗೆ ಬರುವುದಾಗಿ ಪೋಸ್ಟ್ ಮಾಡಿದ್ದಾರೆ.

ಇನ್ನು ಈ ಎರಡೂ ಕೋಮಿನ ಮುಖಂಡರ ಈ ರೀತಿಯಾದ ಉದ್ಧಟತನದ ಹೇಳಿಕೆಯಿಂದಾಗಿ ಆತಂಕದ ವಾತಾವರನ ನಿರ್ಮಾಣವಾಗಿದೆ. ಸದ್ಯ ನಾಳೆ (ಸೆಪ್ಟೆಂಬರ್ 16ರಂದು) ಬಂಟ್ವಾಳ ನಗರದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದ್ದು, ಆಡಿಯೋ ಸವಾಲು ಹಾಕಿರುವ ಪುರಸಭೆ ಮಾಜಿ ಅಧ್ಯಕ್ಷ ಮಹಮ್ಮದ್ ಷರಿಫ್ ನನ್ನು ವಶಕ್ಕೆ ಪಡೆದಿದ್ದಾರೆ.

Leave A Reply

Your email address will not be published.