Flyover: ಫ್ಲೈಓವರ್‌ ಕಾಮಗಾರಿ ಎಡವಟ್ಟು; ಎಎಸ್‍ಐ ಸಾವು

Flyover: ಈಗಾಗಲೇ ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್‌ನಿಂದ (Flyover) ಕಬ್ಬಿಣದ ರಾಡ್ ಬಿದ್ದು ಭೀಕರವಾಗಿ ಗಾಯಗೊಂಡಿದ್ದ ಹುಬ್ಬಳ್ಳಿ ಉಪನಗರ ಠಾಣೆಯ ಎಎಸ್‍ಐ ನಾಭಿರಾಜ್ ದಯಣ್ಣವರ (ASI Nabhiraj Dayannavar) ಅವರು ಸಾವನ್ನಪ್ಪಿದ್ದಾರೆ.

 

ಹುಬ್ಬಳ್ಳಿ ಕೋರ್ಟ್ ವೃತ್ತದಲ್ಲಿ ಫ್ಲೈಓವರ್ ಕಾಮಗಾರಿ ನಡೆಯುತ್ತಿದ್ದು, ಫ್ಲೈಓವರ್ ಅನ್ನು 320 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದ್ರೆ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಎಎಸ್‍ಐ ತಲೆ ಮೇಲೆ ಮಂಗಳವಾರ ಸಂಜೆ ರಾಡ್ ಬಿದ್ದಿದೆ. ಈ ವೇಳೆ ಎಎಸ್‍ಐ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ನಾಲ್ಕು ದಿನಗಳ ಕಾಲ ನಂತರ ಚಿಕಿತ್ಸೆ ಫಲಿಸದೇ ASI ಮೃತಪಟ್ಟಿದ್ದಾರೆ.

Leave A Reply

Your email address will not be published.