Ganesh chaturthi 2024: ನೀವೊಮ್ಮೆ ಕಣ್ತುಂಬಿಕೊಳ್ಳಿ! 2 ಕೋಟಿ 70 ಲಕ್ಷ ನೋಟುಗಳಿಂದ ಗಣೇಶನಿಗೆ ಅದ್ಧೂರಿ ಸಿಂಗಾರ!
Ganesh chaturthi 2024: ಗಣೇಶನ ಹಬ್ಬಕ್ಕೆ ಅದ್ದೂರಿ ಸಿದ್ಧತೆ ಭಾರತಡೆಲ್ಲೆಡೆ ಗಲ್ಲಿ ಗಲ್ಲಿಯಲ್ಲಿ ನಡೆಯುತ್ತೆ. ಆದ್ರೆ ನೀವು ಈ ರೀತಿ ಅಲಂಕಾರ ಮಾಡಿದ ಗಣಪತಿಯನ್ನು ನೋಡಿರಲು ಸಾಧ್ಯವಿಲ್ಲ. ಹೌದು, 2 ಕೋಟಿ 70 ಲಕ್ಷ ನೋಟುಗಳಿಂದ ಗಣೇಶನಿಗೆ ಅದ್ಧೂರಿ ಸಿಂಗಾರ ಮಾಡಲಾಗಿದೆ.
ಆಂಧ್ರಪ್ರದೇಶದ ಎನ್ಟಿಆರ್ ಜಿಲ್ಲೆಯ ನಂದಿಗಾಮದ ವಾಸವಿ ಮಾರುಕಟ್ಟೆ ಬಳಿ ಪ್ರತಿಷ್ಠಾಪಿಸಿರುವ ಗಣೇಶಮೂರ್ತಿ ಮಂಟಪವನ್ನು 2 ಕೋಟಿ 70 ಲಕ್ಷ ರೂಪಾಯಿ ನೋಟುಗಳಿಂದ ಸಿಂಗರಿಸಲಾಗಿದೆ.
ಹೌದು, ನಂದಿಗಾಮದ ವಾಸವಿ ಬಜಾರ್ನ ಸಮಿತಿ ಸದಸ್ಯರು 42ನೇ ಗಣೇಶೋತ್ಸವದ ಪ್ರಯುಕ್ತ ರಾಜ ದರ್ಬಾರ್ ಗಣಪತಿ ಪ್ರತಿಷ್ಠಾಪಿಸಿ ಅದ್ಧೂರಿಯಾಗಿ ಗಣೇಶ ಚತುರ್ಥಿ (Ganesh chaturthi 2024) ಆಚರಿಸುತ್ತಿದ್ದಾರೆ. ಇದರ ಭಾಗವಾಗಿ ಶುಕ್ರವಾರ 10, 20, 50, 100, 200, 500ವಿವಿಧ ಮುಖಬೆಲೆಯ 2 ಕೋಟಿ 70 ಲಕ್ಷ ರೂಪಾಯಿ ಹಣದಿಂದ ಗಣೇಶ ಸೇರಿದಂತೆ ಇಡೀ ಮಂಟಪವನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಇದೀಗ ಈ ವಿಭಿನ್ನ ಅಲಂಕಾರ ಕಾಣ್ತುಂಬಿಕೊಳ್ಳಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.