Google Gmail: ಸೆಪ್ಟೆಂಬರ್ 20 ರ ನಂತರ Gmail ಖಾತೆ ಡಿಲೀಟ್ ಆಗುತ್ತೆ: ಕೂಡಲೇ ಈ ಕೆಲಸ ಮಾಡಿ
Google Gmail: ಟೆಕ್ನಾಲಜಿ ಈಗ ತುಂಬಾ ಮುಂದುವರಿದಿದೆ. ಅದರಲ್ಲೂ ಜಾಗತಿಕವಾಗಿ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ Gmail ವ್ಯಾಪಕವಾಗಿ ಬಳಸಲಾಗುವ ಇಮೇಲ್ ಪ್ಲಾಟ್ಫಾರ್ಮ್ಗಳಲ್ಲಿ ಒಂದಾಗಿದೆ. ಇನ್ನು ಸ್ಮಾರ್ಟ್ ಫೋನ್ ಇದ್ದಮೇಲೆ ಸಾಮಾನ್ಯವಾಗಿ google gmail ಇದ್ದೇ ಇರುತ್ತದೆ. ಆದ್ರೆ ನಿಮ್ಮ ಜಿಮೆಲ್ ಸಕ್ರಿಯ ಇದೆಯೇ ಇಲ್ಲವೇ ಎಂದು ಕನ್ಫರ್ಮ್ ಮಾಡ್ಕೊಳಿ.
ಹೌದು, ಯಾಕಂದ್ರೆ ಸೆಪ್ಟೆಂಬರ್ 20, 2024ರಿಂದ ನಿಷ್ಕ್ರಿಯ Gmail ಖಾತೆಗಳ ಡಿಲೀಟ್ ಮಾಡುವ ಹೊಸ ನೀತಿಯನ್ನು Google ಜಾರಿಗೆ ತಂದಿದೆ. ಅಂದರೆ ನಿಷ್ಕ್ರಿಯ ಖಾತೆಗಳನ್ನು ನಿರ್ವಹಿಸಿ ಮತ್ತು ಅದರ ಸರ್ವರ್ಗಳಲ್ಲಿ ಜಾಗವನ್ನು ಮುಕ್ತಗೊಳಿಸಲು ನಿಷ್ಕ್ರೀಯ ಖಾತೆಗಳನ್ನು ಡಿಲೀಟ್ ಮಾಡಲಿದೆ.
ಮುಖ್ಯವಾಗಿ ಎರಡು ವರ್ಷಗಳಲ್ಲಿ ಬಳಸದ ಯಾವುದೇ ವೈಯಕ್ತಿಕ Google ಖಾತೆಯನ್ನು ಡಿಲೀಟ್ ಮಾಡಲಾಗುತ್ತೆ. Google ಪ್ರಕಾರ, ಎರಡು ವರ್ಷಗಳ ಅವಧಿಯಲ್ಲಿ ಬಳಕೆದಾರರು ತಮ್ಮ Gmail ಖಾತೆಗೆ ಲಾಗ್ ಇನ್ ಆಗದಿದ್ದರೆ ಅಥವಾ ಅವರ ಸಂಯೋಜಿತ Google ಸೇವೆಗಳಲ್ಲಿ ಯಾವುದೇ ಕ್ರಿಯೆಗಳನ್ನು ಮಾಡದಿದ್ದರೆ, ಖಾತೆಯನ್ನು ಶಾಶ್ವತವಾಗಿ ಡಿಲೀಟ್ ಮಾಡಲಾಗುತ್ತೆ.
ಆದ್ದರಿಂದ ಎರಡು ಅಥವಾ ಅದಕ್ಕಿಂತ ಹೆಚ್ಚಿನ Gmail ಖಾತೆಗಳನ್ನು ಹೊಂದಿರುವ ಬಳಕೆದಾರರಿಗೆ, ಎಲ್ಲಾ ಖಾತೆಗಳು ಸಕ್ರಿಯವಾಗಿವೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಯಾಕೆಂದರೆ ಒಂದು ವೇಳೆ ಜಿಮೇಲ್ ಡಿಲೀಟ್ ಆದರೆ ನಿಮ್ಮ ಖಾತೆ ಜೊತೆಗೆ ಎಲ್ಲಾ ಸಂಬಂಧಿತ ಡೇಟಾವನ್ನು, ಇಮೇಲ್ಗಳು, ಫೋಟೋಗಳು, ಡಾಕ್ಯುಮೆಂಟ್ಗಳು ಮತ್ತು ಖಾತೆಗೆ ಸಂಬಂಧಿಸಿದ ಇತರ ಪ್ರಮುಖ ಡೇಟಾ ಶಾಶ್ವತವಾಗಿ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚು.
ಅದಕ್ಕಾಗಿ ನಿಮ್ಮ ಖಾತೆ ಮತ್ತು ಎಲ್ಲಾ ಸಂಬಂಧಿತ ಡೇಟಾವನ್ನು ಉಳಿಸಿಕೊಳ್ಳಲು, ಬಳಕೆದಾರರು ತಮ್ಮ ಖಾತೆಯ ಸಕ್ರಿಯ ಸ್ಥಿತಿಯನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳಬಹುದಾದ ಹಲವಾರು ಸರಳ ಕ್ರಮಗಳನ್ನು Google ಇಲ್ಲಿ ತಿಳಿಸಿದೆ. ನಿಮ್ಮ ಜಿಮೇಲ್ ಖಾತೆಯನ್ನು ಅಳಿಸದಂತೆ ನೋಡಿಕೊಳ್ಳುವುದು ಹೇಗೆ ಎಂಬುದು ಇಲ್ಲಿದೆ ನೋಡಿ.
ಜಿಮೇಲ್ ಡಿಲೀಟ್ ಆಗಬಾರದು ಎಂದರೆ ಹೀಗೆ ಮಾಡಿ:
ಇಮೇಲ್ ಕಳುಹಿಸಿ ಅಥವಾ ಓದಿ: ನಿಮ್ಮ ಲ್ಲಿರುವ ಎಲ್ಲಾ Gmail ಖಾತೆಗೆ ಲಾಗಿನ್ ಆಗುವುದು ಮತ್ತು ಇಮೇಲ್ ಕಳುಹಿಸುವುದು ಅಥವಾ ಓದುವುದರಿಂದ ನಿಮ್ಮ ಜಿಮೇಲ್ ಸಕ್ರಿಯವಾಗುತ್ತೆ.
Google ಫೋಟೋಗಳನ್ನು ಬಳಸಿ:
ನಿಮ್ಮ ಖಾತೆಯನ್ನು ಸಕ್ರಿಯಗೊಳಿಸಲು ನೀವು ಫೋಟೋವನ್ನು ಹಂಚಿಕೊಳ್ಳಬಹುದು.
YouTube ವೀಡಿಯೊವನ್ನು ವೀಕ್ಷಿಸಿ: Google YouTube ಅನ್ನು ಹೊಂದಿದೆ, ಆದ್ದರಿಂದ ನಿಮ್ಮ Gmail ಖಾತೆಗೆ ಲಾಗ್ ಇನ್ ಆಗಿರುವಾಗ ವೀಡಿಯೊವನ್ನು ವೀಕ್ಷಿಸುವುದು ಚಟುವಟಿಕೆಯಾಗಿ ಅರ್ಹತೆ ಪಡೆಯುತ್ತದೆ. ಈ ಹಂತವು ನಿಮ್ಮ ಖಾತೆಯನ್ನು Googleನ ಮೂಲಕ ಬಳಸಲಾಗುತ್ತಿದೆ ಎಂದು ಖಚಿತಪಡಿಸಿಕೊಳ್ಳಿ.
Google ಡ್ರೈವ್ ಅಥವಾ Google ಸರ್ಚ್ ಬಳಸಿ:
Google ಡ್ರೈವ್ ಅನ್ನು ಪ್ರವೇಶಿಸುವುದರಿಂದ ನಿಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಬಹುದು.