Lokayukta investigation: ಬಿಜೆಪಿಗೆ ಮತ್ತೆ ವಕ್ಕರಿಸಿದೆ ಶನಿ ಕಾಟ! 2019ರ ಆಪರೇಷನ್‌ ಕಮಲ ಕೇಸ್ನಲ್ಲಿ ಹಲವರಿಗೆ ಸಂಕಷ್ಟ!

Lokayukta investigation: ಇದೀಗ ಬಿಜೆಪಿಗೆ ಮತ್ತೆ ವಕ್ಕರಿಸಿದೆ ಶನಿ ಕಾಟ! ಹೌದು, 2019ರ ಆಪರೇಷನ್‌ ಕಮಲ ಕೇಸ್ನಲ್ಲಿ ಯಡಿಯೂರಪ್ಪ ಸೇರಿ ಹಲವರಿಗೆ ಸಂಕಷ್ಟ ಎದುರಾಗಲಿದೆ.

 

ಅಂದರೆ 2019ರ ‘ಆಪರೇಷನ್‌ ಕಮಲ’ ಪಕ್ಷಾಂತರ ಪ್ರಕರಣದ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ 17 ಶಾಸಕರ ವಿರುದ್ಧ ಭ್ರಷ್ಟಾಚಾರ ನಿಗ್ರಹ (ತಿದ್ದುಪಡಿ) ಕಾಯ್ದೆ 2018 ಅಡಿಯಲ್ಲಿ ಲೋಕಾಯುಕ್ತ ತನಿಖೆಗೆ ಅನುಮತಿ ನೀಡುವಂತೆ ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್‌ಗೆ ಬೆಂಗಳೂರಿನ ‘ಜನಾಧಿಕಾರ ಸಂಘರ್ಷ ಪರಿಷತ್ತು’ ಮನವಿ ಮಾಡಿದೆ.

ಇನ್ನು ‘ಜನಾಧಿಕಾರ ಸಂಘರ್ಷ ಪರಿಷತ್ತು’ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ’ಕ್ಕೆ ಪ್ರಕರಣ ದಾಖಲಿಸಿ ಭ್ರಷ್ಟಾಚಾರ ತಡೆ ಕಾಯ್ದೆ ಅನ್ವಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ ಹಿನ್ನಲೆ, ವಿಚಾರಣೆ ನಡೆಸಿದ್ದ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಸದರಿ ಪ್ರಕರಣ ‘ಭ್ರಷ್ಟಾಚಾರ ನಿಗ್ರಹ (ತಿದ್ದುಪಡಿ) ಕಾಯ್ದೆ 2018 ಕಲಂ 7’ ಅಡಿಯಲ್ಲಿ ಭ್ರಷ್ಟಾಚಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

ಅದರಂತೆ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಪ್ರತಾಪಗೌಡ ಪಾಟೀಲ್, ಬಿ.ಸಿ. ಪಾಟೀಲ್, ಅರಬೈಲ್ ಶಿವರಾಮ ಹೆಬ್ಬಾರ್, ಎಸ್.ಟಿ. ಸೋಮಶೇಖರ್,ಬಿ.ಎ. ಬಸವರಾಜ್, ಮುನಿರತ್ನ, ಡಾ. ಕೆ. ಸುಧಾಕರ್, ಆನಂದ ಸಿಂಗ್, ಆರ್. ಶಂಕರ್, ಎ.ಎಚ್. ವಿಶ್ವನಾಥ್, ಕೆ. ಗೋಪಾಲಯ್ಯ, ಕೆ.ಸಿ. ನಾರಾಯಣಗೌಡ, ರೋಶನ್ ಬೇಗ, ಎನ್. ನಾಗರಾಜು ಎಂಟಿಬಿ, ಶ್ರೀಮಂತ ಪಾಟೀಲ್ ಹಾಗೂ ಬಿ.ಎಸ್. ಯಡಿಯೂರಪ್ಪ ವಿರುದ್ಧ ಲೋಕಾಯುಕ್ತದಿಂದ ತನಿಖೆ (Lokayukta investigation) ನಡೆಸಲು ಅನುಮತಿ ನೀಡುವಂತೆ ಆದರ್ಶ್ ಅಯ್ಯರ್ ಅರ್ಜಿ ಸಲ್ಲಿಸಿದ್ದಾರೆ.

Leave A Reply

Your email address will not be published.