Prajwal Revanna Case: ಜಿಲ್ಲಾ ಪಂಚಾಯ್ತಿ ಸದಸ್ಯೆಯನ್ನು ರೇಪ್ ಮಾಡಿದ್ದು ಸತ್ಯ!! 3ನೇ ಚಾರ್ಜ್ ಶೀಟ್ ಸಲ್ಲಿಕೆ

Share the Article

Prajwal Revanna Case: ದೇಶಾದ್ಯಂತ ಸಂಚಲನ ಸೃಷ್ಟಿಸಿದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಮಾಡಿರುವ ಲೈಂಗಿಕ ದೌರ್ಜನ್ಯ ಸತ್ಯ ಎಂಬುದು ಸಾಭೀತಾಗಿದ್ದು ಈಗಾಗಲೇ 2 ದೋಷಾರೋಪ ಪಟ್ಟಿಗಳನ್ನು ಸಲ್ಲಿಸಲಾಗಿತ್ತು. ಇದೀಗ 3ನೇ ದೋಷಾರೋಪ ಪಟ್ಟಿಯೂ ಸಲ್ಲಿಕೆಯಾಗಿದ್ದು ಇನ್ನೂ ಭಯಾನಕ ವಿಚಾರಗಳು ಬಹಿರಂಗವಾಗಿವೆ.

ಹೌದು, ಪ್ರಜ್ವಲ್ ರೇವಣ್ಣ(Prajwal Revanna)ವಿರುದ್ಧ 3ನೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಇದರಲ್ಲಿ ಸಂತ್ರಸ್ತೆ ಜಿಲ್ಲಾ ಪಂಚಾಯಿತಿ ಸದಸ್ಯೆಯನ್ನು ಕಾಮುಕ ಪ್ರಜ್ವಲ್ ಅತ್ಯಾಚಾರ ಮಾಡಿದ್ದು ಸತ್ಯ ಎಂದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಸಂತ್ರಸ್ತೆ ಜಿಲ್ಲಾ ಪಂಚಾಯಿತಿ ಸದಸ್ಯೆಯ ಸೀರೆಯನ್ನು ಪ್ರಮುಖ ಸಾಕ್ಷ್ಯ ಮಾಡಿಕೊಂಡು, 120 ಸಾಕ್ಷಿಗಳ ವಿವರವನ್ನೊಳಗೊಂಡ 1,691 ಪುಟಗಳ ಸುದೀರ್ಘ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.

ಗನ್ ಪಾಯಿಂಟ್‌ನಲ್ಲಿ ಬೆದರಿಸಿ ಮಹಿಳೆ ಮೇಲೆ ಅತ್ಯಾಚಾರ ಎಸಗಲಾಗಿದೆ. ವೀಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ ಪದೇ ಪದೇ ಅತ್ಯಾಚಾರ ವೆಸಗಿ ದೌರ್ಜನ್ಯ ನಡೆಸಲಾಗಿದೆ. ಸಂಸದ ಅನ್ನೋ ಭಯದಿಂದ ದೂರು ಕೊಡದೆ ಸುಮ್ಮನಿರೋದಾಗಿ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.

Leave A Reply