Wifi Router: ರಾತ್ರಿ ಮಲಗಿದಾಗಲೂ ನಿಮ್ಮ ಮನೆಯ ವೈ-ಫೈ ಆನ್ ಇರುತ್ತಾ? ಇದೆಷ್ಟು ಡೇಂಜರ್ ಗೊತ್ತಾ ?
Wifi Ruter: ಇಂದು ಜನರು ಮೊಬೈಲ್ ಮೂಲಕ ಸಿಗುವ ನೆಟ್ ಅನ್ನು ಬಿಟ್ಟು ವೈ-ಫೈ ಹಿಂದೆ ಬಿದ್ದಿದ್ದಾರೆ. ಹೆಚ್ಚಿನವರು ಇಂದು ತಮ್ಮ ಮನೆಗಳಿಗೆ ವೈ-ಫೈ ರೂಟರ್(Wifi Ruter) ಅನ್ನು ಅಳವಡಿಸಿಕೊಂಡಿದ್ದಾರೆ. ಪ್ರಸ್ತುತ, ವರ್ಕ್ ಫ್ರಮ್ ಹೋಂ ನಿಂದ ಹಿಡಿದು ಆನ್ಲೈನ್ ಕ್ಲಾಸ್ ವರೆಗೆ ವೈ-ಫೈ ಬೇಕೇ ಬೇಕು. ಆದರೆ, ನೀವು ರಾತ್ರಿ ವೇಳೆ ಮಲಗುವ ಮೊದಲು ಇದನ್ನು ಆಫ್ ಮಾಡಿ ಇಡುವುದು ಕೂಡ ಅಗತ್ಯ.
ಹೌದು, ವೈ-ಫೈ ಬಳಸುವ ಹೆಚ್ಚಿನ ಮಂದಿ ಸದಾ ಅದನ್ನು ಆನ್ ಮಾಡಿಯೇ ಇಟ್ಟಿರುತ್ತಾರೆ. ಆದರೆ, ವೈಫೈ ರೂಟರ್ ಅನ್ನು ಸ್ವಿಚ್ ಆಫ್ ಮಾಡದೆ ಹಾಗೆ ಮಲಗುವುದು ಎಷ್ಟರ ಮಟ್ಟಿಗೆ ಸರಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಮನೆಯಲ್ಲಿ ಇಡೀ ರಾತ್ರಿ ವೈ-ಫೈ ಆನ್ ಇರುವುದರಿಂದ ಅದು ಹೇಗೆ ಅಪಾಯಕಾರಿ ಆಗಬಹುದು ಎಂದು ತಿಳಿಯೋಣ.
* ವೈ-ಫೈ ರೂಟರ್ ಅನ್ನು ರಾತ್ರಿಯಿಡೀ ಆನ್ ಮಾಡಿದರೆ, ಅದರಿಂದ ವಿದ್ಯುತ್ಕಾಂತೀಯ ವಿಕಿರಣವು ನಿರಂತರವಾಗಿ ಹೊರಸೂಸುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ಬರಬಹುದು.
* ಮಲಗುವ ಜಾಗದ ಬಳಿ ರೂಟರ್ ಇದ್ದರೆ ಅದು ಮೆದುಳಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎನ್ನುತ್ತಾರೆ ತಜ್ಞರು. ಇದು ನಿದ್ರಾಹೀನತೆಯ ಸಮಸ್ಯೆಯನ್ನು ಉಂಟುಮಾಡುತ್ತದೆ ಎಂದು ಸಹ ಸೂಚಿಸಲಾಗಿದೆ. ಅದಕ್ಕಾಗಿಯೇ ಮಲಗುವ ಸಮಯದಲ್ಲಿ ವೈ-ಫೈ ರೂಟರ್ ಅನ್ನು ಆಫ್ ಮಾಡಿ ಎಂದು ಹೇಳಲಾಗುತ್ತದೆ.
• ವೈಫೈ ರೂಟರ್ ರಾತ್ರಿಯಿಡೀ ಕಾರ್ಯನಿರ್ವಹಿಸುತ್ತಿದ್ದರೆ, ವೈ-ಫೈ ರೂಟರ್‌ನಿಂದ ಹೊರಹೊಮ್ಮುವ ವಿದ್ಯುತ್ಕಾಂತೀಯ ವಿಕಿರಣಗಳು ದೇಹಕ್ಕೆ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಆದಾಗ್ಯೂ, ತಕ್ಷಣಕ್ಕೆ ನಿಮಗೆ ಇದರ ಅನುಭವವಾಗುವುದಿಲ್ಲ, ಆದರೆ, ಭವಿಷ್ಯದಲ್ಲಿ ಇದರಿಂದ ಖಂಡಿತ ತೊಂದರೆ ಉಂಟಾಗಬಹುದು.
• -ಫೈ ರೂಟರ್ ಅನ್ನು ರಾತ್ರಿಯಿಡೀ ಆನ್ ಮಾಡಿದರೆ ಅದರಿಂದ ಹೊರಸೂಸುವ ಎಲೆಕ್ಟ್ರೋಮ್ಯಾಗ್ನೆಟಿಕ್ ರೇಡಿಯೇಷನ್ ದೇಹದಲ್ಲಿ ಹಲವಾರು ರೋಗಗಳನ್ನು ಉಂಟುಮಾಡುತ್ತದೆ ಎನ್ನುತ್ತಾರೆ ತಜ್ಞರು. ವಿದ್ಯುತ್ಕಾಂತೀಯ ವಿಕಿರಣವು ದೇಹದಲ್ಲಿ ಕೆಲವು ರೋಗಗಳನ್ನು ಉಂಟುಮಾಡಬಹುದು ಎಂದು ವಿಶೇಷವಾಗಿ ಎಚ್ಚರಿಸಲಾಗಿದೆ.