Bangladesh: ಮಸೀದಿಗಳಲ್ಲಿ ನಮಾಜ್, ಆಜಾನ್ ವೇಳೆ ಹಿಂದೂಗಳು ದುರ್ಗಾದೇವಿ ಪೂಜೆ ನಿಲ್ಲಿಸಿ – ಬಾಂಗ್ಲಾ ಸರ್ಕಾರದ ಆದೇಶ !!

Bangladesh: ಮಸೀದಿಗಳಲ್ಲಿನ ನಮಾಜ್ ಹಾಗು ಆಜಾನ್ ಸಮಯದಲ್ಲಿ ಹಿಂದೂಗಳು ತಮ್ಮ ದುರ್ಗಾ ಪೂಜೆಯ ಹಾಗೂ ಮಂದಿರದ ಚಟುವಟಿಕೆಗಳನ್ನು ನಡೆಸದಂತೆ ಬಾಂಗ್ಲಾದೇಶದ ಮಧ್ಯಂತರ ಸರ್ಕಾರವು ಅಲ್ಲಿನ ಹಿಂದೂ ಸಮುದಾಯದ ಪೂಜಾ ಸಮಿತಿಗಳಿಗೆ ಆದೇಶ ಹೊರಡಿಸಿದೆ.

ಹೌದು, ಆಜಾನ್ ಮತ್ತು ನಮಾಜ್ (Namaz) ವೇಳೆ ಎಲ್ಲಾ ಮಂದಿರ ಹಾಗೂ ಪ್ರಾರ್ಥನಾಲಯಗಳ ಮೈಕ್ ಬಂದ್ ಮಾಡುವಂತೆ ಬಾಂಗ್ಲಾದೇಶದ (Bangladesh) ಸರ್ಕಾರ ಸೂಚಿಸಿದೆ. ನಮಾಜ್ ಹಾಗೂ ಆಜಾನ್‍ಗೂ 5 ನಿಮಿಷ ಮೊದಲೇ ಮಂದಿರಗಳ ಮೈಕ್ ಬಂದ್ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಆಜಾನ್ ಹಾಗೂ ನಮಾಜ್ ಸಮಯದಲ್ಲಿ ಸಂಗೀತ ಉಪಕರಣಗಳು ಹಾಗೂ ಸೌಂಡ್ ಸಿಸ್ಟಂ ಅನ್ನು ಸ್ವಿಚ್ ಆಫ್ ಮಾಡಿರುವಂತೆ ಪೂಜಾ ಸಮಿತಿಗಳಿಗೆ ಸೂಚನೆ ನೀಡಲಾಗಿದೆ. ಇದಕ್ಕೆ ಸಮಿತಿಗಳು ಒಪ್ಪಿಕೊಂಡಿವೆಯಂತೆ. ಹಿಂದೂಗಳ ಮೇಲಿನ ಹಿಂಸಾಚಾರದ ಬಳಿಕ, ಬಾಂಗ್ಲಾ ಸರ್ಕಾರದ ಮನವಿ ಚರ್ಚೆಗೆ ಗ್ರಾಸವಾಗಿದೆ.

ದೇಶದಲ್ಲಿ ವಾರ್ಷಿಕ ದುರ್ಗಾ ಪೂಜೆ ಆಚರಣೆಗಳಿಗೆ ತಯಾರಿ ನಡೆಸುತ್ತಿರುವಾಗ ಧಾರ್ಮಿಕ ಸಾಮರಸ್ಯವನ್ನು ಕಾಪಾಡುವ ಉದ್ದೇಶದಿಂದ ಈ ಸೂಚನೆ ನಿಡಲಾಗಿದೆ ಎಂದು ಬಾಂಗ್ಲಾ ಸರ್ಕಾರದ ಅಧಿಕಾರಿಗಳು ಸಮರ್ಥಿಸಿಕೊಂಡಿದ್ದಾರೆ. ಅಂತೆಯೇ “ನಮಾಜ್ ಸಮಯದಲ್ಲಿ ಅಂತಹ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕಾದ ಅಗತ್ಯವಿದೆ. ಆಜಾನ್‌ನ ಐದು ನಿಮಿಷಕ್ಕೂ ಮುಂಚೆಯಿಂದ ಇವುಗಳನ್ನು ನಿಲ್ಲಿಸುವ ಅಭ್ಯಾಸವನ್ನು ಪಾಲಿಸಬೇಕಿದೆ” ಎಂದು ಬಾಂಗ್ಲಾದಲ್ಲಿ ಹಿಂದೂ ಸಮುದಾಯದ ಅತ್ಯಂತ ದೊಡ್ಡ ಹಬ್ಬವಾಗಿರುವ ದುರ್ಗಾ ಪೂಜೆಗೂ ಮುನ್ನ ಮಧ್ಯಂತರ ಸರ್ಕಾರದ ಗೃಹ ಸಚಿವಾಲಯದ ಸಲಹೆಗಾರ ಲೆ. ಜನರಲ್ (ನಿವೃತ್ತ) ಮೊಹಮ್ಮದ್ ಜಹಾಂಗೀರ್ ಆಲಂ ಚೌಧುರಿ ಹೇಳಿದ್ದಾರೆ.

ಇಷ್ಟೇ ಅಲ್ಲದೆ ಢಾಕಾ ಸೌತ್ ಸಿಟಿಯಲ್ಲಿ 157 ಮತ್ತು ಢಾಕಾ ನಾರ್ತ್ ಸಿಟಿ ಕಾರ್ಪೊರೇಷನ್‌ಗಳಲ್ಲಿ 88 ಸೇರಿದಂತೆ ದೇಶಾದ್ಯಂತ 32,666 ಪೂಜಾ ಮಂಟಪಗಳನ್ನು (ತಾತ್ಕಾಲಿಕ ಪೂಜಾ ಸ್ಥಳಗಳು) ಸ್ಥಾಪಿಸಲಾಗುತ್ತದೆ. ಕಳೆದ ವರ್ಷದ 33,431 ಕ್ಕೆ ಹೋಲಿಸಿದರೆ ಸ್ವಲ್ಪ ಕಡಿಮೆ ಮಂಟಪಗಳ ಸ್ಥಾಪಿಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಂಖ್ಯೆ ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಈ ವೇಳೆ ಯಾವುದೇ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ವಿಗ್ರಹಗಳ ನಿರ್ಮಾಣದಿಂದ ಪ್ರಾರಂಭಿಸಿ ಎಲ್ಲಾ ಪೂಜಾ ಸ್ಥಳಗಳಲ್ಲಿಯೂ 24 ಗಂಟೆಗಳ ಭದ್ರತೆಯನ್ನು ಒದಗಿಸಲು ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಚೌಧರಿಯವರು ತಿಳಿಸಿದ್ದಾರೆ.

Leave A Reply

Your email address will not be published.