Varsha kaveri: ಫೋಟೋ, ವಿಡಿಯೋ ಇಟ್ಕೊಂಡು ವರುಣ್ ಆರಾಧ್ಯನಿಂದ ಬ್ಲಾಕ್ಮೇಲ್ ಆರೋಪ – ಇದ್ದಕ್ಕಿದ್ದಂತೆ ಇಡೀ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟ ವರ್ಷ ಕಾವೇರಿ

Varsha Kaveri: ನಟ ಹಾಗೂ ರೀಲ್ಸ್ ಸ್ಟಾರ್ ಆಗಿರೋ ವರುಣ್ ಆರಾಧ್ಯ(Varun Aradhya) ತನ್ನ ಮಾಜಿ ಪ್ರಿಯತಮೆ ವರ್ಷ ಕಾವೇರಿಯ ಖಾಸಗಿ ಪೊಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಜೀವ ಬೆದರಿಕೆ ಹಾಕಿದ್ದಾನೆಂದು ಆತನ ವಿರುದ್ಧ ದೂರು ದಾಖಲಾಗಿತ್ತು. ಆದರೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಟ್ವಿಸ್ಟ್ ನೀಡಿದ್ದು ದೂರು ನೀಡಿದ್ದಾಳೆ ಎನ್ನಲಾದ ಮಾಜಿ ಪ್ರಿಯತಮೆ ವರ್ಷ ಕಾವೇರಿಯೇ ಎನ್ನುವುದು ಆಶ್ಚರ್ಯ.
ಕನ್ನಡದ ಬೃಂದಾವನ ಧಾರಾವಾಹಿಯ(Brundavana Serial) ನಟ ವರುಣ್ ಆರಾಧ್ಯ ಮಾಜಿ ಪ್ರಿಯತಮೆ ವರ್ಷ ಕಾವೇರಿಯ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನು ಬಿಡುಗಡೆ ಮಾಡುವುದಾಗಿ ಹಾಗೂ ಪ್ರಾಣ ಬೆದರಿಕೆ ಹಾಕಿದ್ದಾನೆ ಎಂದು ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಪಶ್ಚಿಮ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಇಡೀ ಮಾಧ್ಯಮಗಳು ವರದಿ ಮಾಡಿದ್ದವು. ಆದರೀಗ ಈ ಸುದ್ದಿ ಸುಳ್ಳೆಂದು ವರ್ಷ ಕಾವೇರಿಯೇ ಇನ್ಸ್ಟಾಗ್ರಾಮ್ ಸ್ಟೋರಿ ಹಾಕಿದ್ದಾಳೆ.
ಹೌದು, ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಪೋಸ್ಟ್ ಶೇರ್ ಮಾಡಿರುವ ವರ್ಷಾ, ಮಾಧ್ಯಮಗಳ ಮೂಲಕ ನೀವು ನೋಡುತ್ತಿರುವುದು ಸುಳ್ಳು ಮಾಹಿತಿಯಾಗಿದೆ. ಇದು ಇನ್‌ಸ್ಟಾಗ್ರಾಂ ಪ್ರೊಫೈಲ್ ಮತ್ತು ಇತರ ಸಾಮಾಜಿಕ ಮಾಧ್ಯಮ ಫ್ಲಾಟ್‌ಫಾರ್ಮ್‌ಗಳಿಂದ ಎಲ್ಲಾ ರೀಲ್‌ಗಳನ್ನು ತೆಗೆದುಹಾಕುವುದರ ಕುರಿತು… ನಕಲಿ ಸುದ್ದಿಗಳನ್ನು ಹರಡುವುದನ್ನು ನಿಲ್ಲಿಸಿ… ಎಂದು ವರ್ಷಾ ಬರೆದಿದ್ದಾರೆ. ಈ ಮೂಲಕ ತನ್ನ ಬಗ್ಗೆ ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ. ಅಲ್ಲದೆ, ಮಾಧ್ಯಮಗಳಲ್ಲಿ ಸುದ್ದಿ ನೋಡಿ ನನಗೆ ಯಾರೆಲ್ಲ ಮೆಸೇಜ್ ಮಾಡುತ್ತಿದ್ದೀರಾ ಅವರೆಲ್ಲ ಸುಮ್ಮನಿರಿ ಇನ್ನು ಕೆಲವೇ ದಿನಗಳಲ್ಲಿ ನಾನು ಸ್ಪಷ್ಟನೆ ನೀಡುತ್ತೇನೆ ಎಂದಿದ್ದಾರೆ.
ಏನಿದು ಪ್ರಕರಣ?
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬೃಂದಾವನ ಧಾರಾವಾಹಿಯಲ್ಲಿ ವರುಣ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ. 2019 ರಿಂದ ಪ್ರೇಮಿಗಳಾಗಿದ್ದ ವರುಣ್ ಆರಾಧ್ಯ ಜೋಡಿ ರೀಲ್ಸ್ ನಲ್ಲಿ ಸಾಕಷ್ಟು ಫೇಮಸ್ ಆಗಿತ್ತು. ಇನ್ನೂ ಈ ವರುಣ್ ಇಬ್ಬರು ಸಲುಗೆಯಿಂದ ಇದ್ದಾಗ ಖಾಸಗಿ ಪೋಟೋ, ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದನಂತೆ. ಲವ್ ನಲ್ಲಿ ಎಲ್ಲಾ ಚೆನ್ನಾಗಿದ್ದಾಗ ಈ ವರುಣ್ ಕಳೆದ ವರ್ಷ ಬೇರೆ ಯುವತಿಯ ಖಾಸಗಿ ಫೋಟೋ, ವಿಡಿಯೋಗಳನ್ನು ತನ್ನ ಮೊಬೈಲ್ ನಲ್ಲಿ ಇಟ್ಟುಕೊಂಡಿದ್ದನಂತೆ. ಮೊಬೈಲ್ ನಲ್ಲಿ ಮಾಜಿ ಪ್ರೇಯಸಿ ಇದು ಯಾರ ಫೋಟೋಗಳು ಎಂದು ಪ್ರಶ್ನೆ ಮಾಡಿದಾಗ ವರುಣ್ ಆರಾಧ್ಯ ಬೆದರಿಕೆ ಹಾಕಿದ್ದಾನಂತೆ.
ಈ ಬಗ್ಗೆ ಯಾರ ಬಳಿಯಾದ್ರು ಹೇಳಿದ್ರೆ ನಿನ್ನ ಖಾಸಗಿ ಫೋಟೋ, ವಿಡಿಯೋಗಳು ನನ್ನ ಬಳಿ ಇವೆ. ಅವುಗಳನ್ನು ಸಹ ಹರಿಬಿಡುವುದಾಗಿ ಬೆದರಿಸಿದ್ದಾನೆ. ಇದರಿಂದ ನೊಂದ ಯುವತಿ ದೂರು ದಾಖಲಿಸಾದ್ದಳೆ ಎಂದು ಕರ್ನಾಟಕದ ಮಾಧ್ಯಮಗಳು ವರದಿ ಮಾಡಿದ್ದವು.