Hymenoplasty: ಮೊದಲ ರಾತ್ರಿ ಗಂಡನಿಗೆ ಡೌಟ್ ಬರಬಾರದೆಂದು ಇದನ್ನು ಮಾಡ್ತಾರಂತೆ ಹುಡುಗಿಯರು !! ಆಘಾತಕಾರಿ ವರದಿ ಬಹಿರಂಗ

Hymenoplasty: ಮದುವೆಗೂ ಮೊದಲೆ ಲೈಂಗಿಕ ಸಂಪರ್ಕ ಬೆಳೆಸಿ, ತಮ್ಮ ಕನ್ಯತ್ವ ಕಳೆದುಕೊಳ್ಳುವ ಕೆಲವು ಹುಡಗಿಯರು ಕನ್ಯಾ ಪೊರೆ ಹರಿದ ಕಾರಣ ಮೊದಲ ರಾತ್ರಿಯಲ್ಲಿಯೇ ಗಂಡನಿಗೆ ತನ್ನ ಗುಟ್ಟು ರಟ್ಟಾಗಬಹುದು ಎನ್ನುವ ಕಾರಣಕ್ಕೆ, ಈ ವಿಧಾನ ಬಳಸಿ ಬಚಾವ್ ಆಗುತ್ತಿದ್ದಾರಂತೆ ಇಂದಿನ ಹುಡುಗಿಯರು !! ಈ ಕುರಿತು ಅಘಾತಕಾರಿ ವರದಿಯೊಂದು ಬಹಿರಂಗವಾಗಿದೆ.
ಹೌದು, ಕಾಲ ಬದಲಾದಂತೆ ಜೀವನ ಶೈಲಿ, ಕ್ಷಣಿಕ ಸುಖದ ವಿಚಾರಗಳು, ಬಯಕೆಗಳು ಬದಲಾಗುತ್ತಿವೆ. ಮದುವೆಗೂ ಮುಂಚೆ ದೇಹ ಸಂಪರ್ಕ ಏರ್ಪಟ್ಟು ಅನೇಕ ಹುಡುಗಿಯರು ಕನ್ಯತ್ವ ಕಳೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಹುಡುಗಿಯರದ್ದು ಮಾತ್ರ ತಪ್ಪಲ್ಲ. ಹುಡುಗುರದ್ದೂ ಕೂಡ ಅಷ್ಟೇ ತಪ್ಪಿರುತ್ತದೆ. ಆದರೆ ಭವಿಷ್ಯದಲ್ಲಿ ಅಥವಾ ಮದುವೆ ಆದ ಸಂದರ್ಭದಲ್ಲಿ ಹುಡುಗರಿಗೆ ಇದರಿದ ಯಾವ ತೊಂದರೆಯೂ ಆಗದು. ಬಟ್, ಇದರಿಂದ ತುಂಬಾ ನೋವನ್ನು ಅನುಭವಿಸುವುದು ಮಾತ್ರ ಹುಡುಗಿಯರು. ಹೀಗಾಗಿ ಕನ್ಯಾ ಪೊರೆ ಹರಿದು ಹೋದರೆ ಮೊದಲ ರಾತ್ರಿಯಲ್ಲಿಯೇ ಗಂಡನಿಗೆ ತನ್ನ ಗುಟ್ಟು ರಟ್ಟಾಗಬಹುದು ಎನ್ನುವ ಕಾರಣಕ್ಕೆ, ಇಂದು ಅನೇಕ ಯೋನಿ ಶಸ್ತ್ರಚಿಕಿತ್ಸೆಗೆ ಮೊರೆ ಹೋಗುತ್ತಿದ್ದಾರೆ. ಅದೂ ಕೂಡ ಇಂದು ಇವರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಆತಂಕದ ವರದಿ ಬಂದಿದೆ.
ಏನಿದು ಯೋನಿ ಶಸ್ತ್ರ ಚಿಕಿತ್ಸೆ:
ಪುರುಷರ ಜೊತೆ ಪುರುಷರ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ ಸಂದರ್ಭಗಳಲ್ಲಿ ಯೋನಿ ಪೊರೆ ಹರಿದು ಹೋಗುತ್ತದೆ. ನೃತ್ಯಗಾರರು, ಯಕ್ಷಗಾನ ಕಲಾವಿದರ, ಕ್ರೀಡಾಪಟುಗಳು, ಹೀಗೆ ಕೆಲವು ಕ್ಷೇತ್ರಗಳಲ್ಲಿ ಇರುವ ಯುವತಿಯರಿಗೆ ಸಹಜವಾಗಿಯೇ ಈ ಪೊರೆ ಹರಿದು ಹೋಗುವ ಸಾಧ್ಯತೆ ಇರುತ್ತದೆ. ಆದರೆ ಸಾಮಾನ್ಯವಾಗಿ ಯುವತಿಯೊಬ್ಬಳು ಕನ್ಯೆ ಅಂದರೆ ಲೈಂಗಿಕ ಸಂಪರ್ಕ ಹೊಂದಿಲ್ಲ ಎಂದು ಸಾಬೀತು ಮಾಡುವುದೇ ಈ ಕನ್ಯಾಪೊರೆ.
ಇತ್ತೀಚಿನ ವರ್ಷಗಳಲ್ಲಿ, 20 ರಿಂದ 30 ವರ್ಷದ ಯುವತಿಯರು ಹೈಮನೋಪ್ಲ್ಯಾಸ್ಟಿ (Hymenoplasty) ಎಂಬ ಶಸ್ತ್ರಚಿಕಿತ್ಸೆಗೆ ಒಳಗಾಗುವ ಯುವತಿಯರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹೈಮನೋಪ್ಲ್ಯಾಸ್ಟಿ ಅನ್ನು ಕನ್ನಡದಲ್ಲಿ ಹೇಳುವುದಾದರೆ ಕನ್ಯತ್ವ ಶಸ್ತ್ರಚಿಕಿತ್ಸೆ. ಅಂದರೆ ಮದುವೆಯಾಗುವ ಮೊದಲು ಯಾರ ಜೊತೆಗಾದರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರೆ, ಗಂಡನಾಗುವವನಿಗೆ ಆ ಬಗ್ಗೆ ತಿಳಿಯಬಾರದು ಎಂದು ಮಾಡಿಸಿಕೊಳ್ಳುವ ಶಸ್ತ್ರಚಿಕಿತ್ಸೆ ಇದಾಗಿದೆ. ಹರಿದು ಹೋಗಿರುವ ಕನ್ಯಾಪೊರೆಯನ್ನು ಸರಿಮಾಡುತ್ತದಂತೆ ಈ ಆಪರೇಷನ್. ಮೊದಲ ರಾತ್ರಿಯಲ್ಲಿ ಸೆಕ್ಸ್ನಲ್ಲಿ ತೊಡಗಿದಾಗ ಗಂಡನಿಗೆ ಯಾವುದೇ ರೀತಿಯ ಸಂಶಯ ಬರಬಾರದು ಎನ್ನುವ ಕಾರಣಕ್ಕೆ ಇಂಥದ್ದೊಂದು ಭಯಾನಕ ಆಪರೇಷನ್ಗೆ ಪ್ರಾಣ ಪಣಕ್ಕಿಟ್ಟು ಹೋಗುತ್ತಿದ್ದಾರೆ ಯುವತಿಯರು!!
ಭಾರತದಲ್ಲಿ ಹೆಚ್ಚಾಗುತ್ತಿದೆ ಯೋನಿ ಶಸ್ತ್ರಚಿಕಿತ್ಸೆ:
ಈ ಆಪರೇಷನ್ ಮಾಡಿಸಿಕೊಳ್ಳುವುದು ಬಹಳ ವರ್ಷಗಳಿಂದಲೂ ನಡೆದಿದೆ. ವಿದೇಶಗಳಲ್ಲಿ ಈ ಸಂಸ್ಕೃತಿ ಹೆಚ್ಚಾಗಿತ್ತು. ಸಂಪ್ರದಾಯಸ್ಥರ ದೇಶ ಎಂದು ಎನ್ನಿಸಿಕೊಳ್ಳುವ ಭಾರತದಲ್ಲಿ ವಿವಾಹಪೂರ್ವ ಲೈಂಗಿಕತೆ ಅಷ್ಟಾಗಿ ಇರಲಿಲ್ಲ. ಆದರೆ ಬರುಬರುತ್ತಾ ಇಂಥ ಯುವತಿಯರ ಸಂಖ್ಯೆ ಹೆಚ್ಚಾಗುತ್ತಿದೆ ಎಂದಿದೆ ಈ ವರದಿ. ಭಾರತದಲ್ಲಿಯೂ ಇತ್ತೀಚಿನ ದಿನಗಳಲ್ಲಿ 20 ರಿಂದ 30 ಪ್ರತಿಶತದಷ್ಟು ಹೈಮನೋಪ್ಲ್ಯಾಸ್ಟಿ ಹೆಚ್ಚಳಕ್ಕೆ ಸಾಕ್ಷಿಯಾಗಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿದೆ.
ಇಷ್ಟೆಲ್ಲಾ ಆದರೂ ಅಚ್ಚರಿ ಏನಂದ್ರೆ ಇಂತಹ ಒಂದು ನರಕಯಾತನೆ ಬರೀ ಹುಡುಗಿಯರಿಗೆ ಮಾತ್ರ ಇದೆ ಅನ್ನೋದು ದುರಂತ!! ಯಾಕೆಂದರೆ ಮದುವೆಗೆ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡರೂ ಪುರುಷರು ಸಾಚಾತನವನ್ನು ಸಾಬೀತು ಮಾಡುವ ಪ್ರಸಂಗವೇ ಇರುವುದಿಲ್ಲಲವ್ಲಾ.. !!