Fact Vid: AI ಮೂಲಕ ಹಿಂದೂ ದೇವತೆಗಳಿಗೆ ಅವಮಾನ! Fact Vid ಫೇಸ್ಬುಕ್ ಪೇಜ್ ವಿರುದ್ದ ಎಫ್‌ಐಆರ್ ದಾಖಲು
Fact Vid: ಹಿಂದೂ ದೇವರ ಪೋಟೋಗಳನ್ನು ಆರ್ಟಿಪಿಷಿಯಲ್ ಇಂಟಿಲಿಜೆನ್ಸ್ ಮೂಲಕ ಅವಮಾನಿಸಿ ಚಿತ್ರಿಸಿ ಅದನ್ನು ಸಾಮಾಜಿಕ ಜಾಲತಾಣ ಫೆಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದ Fact Vid ಫೇಸ್ಬುಕ್ ಪೇಜ್ ವಿರುದ್ದ ಹಿಂದೂ ಜನಜಾಗೃತಿ ಸಮಿತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
‘Fact Vid’ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ ಅನೇಕ ದಿನಗಳಿಂದ AI (Artificial Intelligence) ತಾಂತ್ರಿಕ ಸಹಾಯದಿಂದ ಹಿಂದೂ ದೇವತೆಗಳ ಜೊತೆಗೆ ಅಶ್ಲೀಲ ಫೋಟೋಗಳನ್ನು ನಿರಂತರವಾಗಿ ಫೇಸ್ಬುಕ್ ಜಾಲತಾಣದ ಮುಖಾಂತರ ಪ್ರಸಾರ ಮಾಡಲಾಗುತ್ತಿದೆ. ಈ Al ಆಧಾರಿತ ಚಿತ್ರಗಳಿಂದ ಕೋಟ್ಯಂತರ ಹಿಂದೂ ಬಾಂಧವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ. ಈ ಕುರಿತು 10 ಸೆಪ್ಟೆಂಬರ್ 2024 ಮಂಗಳವಾರದಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಉರ್ವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
‘Fact Vid’ ಫೇಸ್ಬುಕ್ ಪೇಜ್ ನಲ್ಲಿ ಹಿಂದೂ ಧರ್ಮದ ಶ್ರದ್ಧಾಸ್ಥಾನ ಭಗವಾನ್ ಶಿವ, ಕೃಷ್ಣ, ರಾಮ, ಗಣೇಶ ಮೊದಲಾದ ದೇವತೆಗಳು ಸ್ತ್ರೀಯೊಂದಿಗೆ ಅಶ್ಲೀಲವಾಗಿ ವರ್ತಿಸುತ್ತಿರುವಂತೆ, ವಿವಿಧ ರೀತಿಯಲ್ಲಿ ಚಿತ್ರಿಸಲಾಗಿದೆ. ಈ ಪೋಸ್ಟ್ ಗಳಿಗೆ ಅನೇಕ ಮತಾಂಧರು ಕೆಟ್ಟ ಕಮೆಂಟ್ ಗಳನ್ನೂ ಹಂಚಿಕೊಳ್ಳುತ್ತಿದ್ದಾರೆ.
ಈ ದೂರಿನಲ್ಲಿ ನ್ಯಾಯವಾದಿ ತೀರ್ಥೇಶ್ ಇವರು, ಫೇಸ್ಬುಕ್ ಪೇಜ್ ‘Fact Vid’ ನನ್ನು ನಿಯಂತ್ರಿಸುತ್ತಿರುವ ಅಡ್ಮಿನ್ ಮತ್ತು ಸದ್ರಿ ಪೇಜ್ ನಲ್ಲಿ ಹಿಂದೂ ದೇವತೆಗಳ ಅವಹೇಳನ ಮಾಡುವ ಕಮೆಂಟ್ ಗಳನ್ನೂ ಹಾಕುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 299, 192, 353 ಮತ್ತು 67 IT Act ಸೆಕ್ಷನ್ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು, ಮತ್ತು AI Tool ಗಳನ್ನು ನಿಯಂತ್ರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
Your blog is a true hidden gem on the internet. Your thoughtful analysis and engaging writing style set you apart from the crowd. Keep up the excellent work!