Pramod muthalik: ಮುಸ್ಲಿಮರ ಜೊತೆ ಯಾವುದೇ ವ್ಯವಹಾರ ಮಾಡಬೇಡಿ, ಬಹಿಷ್ಕಾರ ಹಾಕಿ ಎಂದ ಪ್ರಮೋದ್ ಮುತಾಲಿಕ್

Pramod muthalik: ಈಗಾಗಲೇ ನಾಗಮಂಗಲದ ಗಣೇಶನ ಉತ್ಸವದಲ್ಲಿ ಮುಸ್ಲಿಂ ಗಲಬೆ ನಡೆದಿದ್ದು, ಇದರಿಂದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆಕ್ರೋಶಗೊಂಡಿದ್ದಾರೆ.

 

ನಾಗಮಂಗಲದಲ್ಲಿ ಕಿಡಿಗೇಡಿಗಳು ಗಣೇಶನ ಮೆರವಣಿಗೆಯಲ್ಲಿ ಕಲ್ಲು, ಚಪ್ಪಲಿ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ಮಸೀದಿ ಗಲಾಟೆ ಮಾಡುವ ಕೇಂದ್ರವೇ? ಮಸೀದಿ ಮುಂದೆ ಗಣೇಶನ ಮೆರವಣಿಗೆ ಹೋಗಬಾರದಾ? ಪೂರ್ವಯೋಜಿತ ಗಲಭೆ ಇದು, ಪೊಲೀಸರಿಗೆ ಇದು ಗೊತ್ತಾಗಲಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುತಾಲಿಕ್ (Pramod muthalik) ಅವರು, ನಾಳೆ ನಾನು ನಾಗಮಂಗಲಕ್ಕೆ ಹೋಗುತ್ತೇನೆ, ತಡೆಯಿರಿ ನೋಡೋಣ! ಮುಸ್ಲಿಮರ ಜೊತೆ ಯಾವುದೇ ವ್ಯವಹಾರ ಮಾಡಬೇಡಿ, ಮುಸ್ಲಿಂರನ್ನು ಬಹಿಷ್ಕಾರ ಹಾಕಿ. ವಕ್ಪ್ ಬೋರ್ಡ್ ರದ್ದು ಮಾಡಬೇಕು, ಇವರಿಗಷ್ಟೇ ಯಾಕೆ ಬೋರ್ಡ್? ಮಸೀದಿ ಮೇಲೆ ಮೈಕ್ ನಿಲ್ಲಿಸಿ, ರಾಜ್ಯದಲ್ಲಿ ನಾನೇ ಡಿಜೆ ನಿಲ್ಲಿಸುತ್ತೇನೆ ಎಂದು ಆಕ್ರೋಶಗೊಂಡಿದ್ದಾರೆ.

Leave A Reply

Your email address will not be published.