BMTC Bus: ಬೆಂಗಳೂರಲ್ಲಿ ಹೊಸದಾಗಿ 100 ಬಿಎಂಟಿಸಿ ಬಸ್​ಗೆ ಚಾಲನೆ ನೀಡಿದ ಮುಖ್ಯಮಂತ್ರಿ; ಇದರ ವಿಶೇಷತೆ ಏನೇನು ಗೊತ್ತಾ?

BMTC Bus: ಇಂದು ಬೆಂಗಳೂರಲ್ಲಿ ಹೊಸದಾಗಿ 100 ಬಿಎಂಟಿಸಿ ಬಸ್​ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ. ಈಗಾಗಲೇ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಸಾರಿಗೆ ಇಲಾಖೆ ಹೊಸ ಬಸ್ ಖರೀದಿ ಮಾಡುತ್ತಿದೆ. ಅದರಂತೆ ಬಿಎಂಟಿಸಿ(BMTC)ಗೆ ಹೊಸದಾಗಿ 840 ಬಸ್​ಗಳು ಸೇರ್ಪಡೆಯಾಗಲಿದೆ. ಇದೀಗ ಮೊದಲ ಹಂತದಲ್ಲಿ 100 ಬಸ್​ಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಇಂದು ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ಸ್ ಬಳಿ ಚಾಲನೆ ನೀಡಿದರು.

 

ಸದ್ಯ ಹೊಸ ಮಾದರಿಯ ಬಸ್ ವಿಶೇಷತೆಗಳ ಬಗ್ಗೆ ಹೇಳುವುದಾದರೆ, ಇದು ಪರಿಸರ ಸ್ನೇಹಿ ಬಸ್ ಆಗಿದ್ದು, ಶೇಕಡಾ 90 ರಷ್ಟು ಮಾಲಿನ್ಯ ಮಟ್ಟ ಕಮ್ಮಿಯಾಗಿದೆ. ಇನ್ನು 11 ಮೀಟರ್ ಉದ್ದ, ಹವಾನಿಯಂತ್ರಣರಹಿತ, ಡೀಸೆಲ್ ಚಾಲಿತ ಬಸ್ ಆಗಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ 3 ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಜೊತೆಗೆ 3 ಎಲ್.ಇ.ಡಿ ಬೋರ್ಡ್, ವಾಯ್ಸ್ ಅನೌನ್ಸ್ಮೆಂಟ್ ವ್ಯವಸ್ಥೆ ಜೊತೆಗೆ ಮಹಿಳೆಯರ ಸೇಫ್ಟಿಗೆ ತುರ್ತು ಪ್ಯಾನಿಕ್ ಅಲಾರ್ಮ್ ಬಟನ್, ಅಗ್ನಿ ಅವಘಡ ತಪ್ಪಿಸಲು FDAS ( fire detection and alarm system), ತುರ್ತು ಸಂದರ್ಭಗಳಲ್ಲಿ ಪ್ರಯಾಣಿಕರ ನಿಲುಗಡೆಗೆ ಸ್ಟಾಪ್ ಬಟನ್ ಕೂಡಾ ಅಳವಡಿಸಲಾಗಿದೆ.

Leave A Reply

Your email address will not be published.