Bigg Boss: ಕಿಚ್ಚ ಸುದೀಪ್ ಬದಲು ಈ ಸಲ ಬಿಗ್ ಬಾಸ್ ಹೋಸ್ಟ್ ಮಾಡೋ ನಟ ಇವರೇನಾ?
Bigg Boss: ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಬಗ್ ಬಾಸ್ ಕನ್ನಡ 11ನೇ ಸೀಸನ್‌ಗೆ ದಿನಗಣನೆ ಶುರುವಾಗಿದೆ. ಕಲರ್ಸ್ ಕನ್ನಡ ಈಗಾಗಲೇ ರಿಯಾಲಿಟಿ ಶೋ ಕುರಿತಾದ ಅಪ್‌ಡೇಟ್‌ಗಳನ್ನು ನೀಡಲು ಆರಂಭಿಸಿದೆ. ಆದರೆ ಈ ಸಲ ಬಿಗ್ ಬಾಸ್ ನಲ್ಲಿ ಸದೀಪ್(Kiccha Sudeep) ಇರಲ್ಲ ಎಂಬ ಅನುಮಾನ ಇದೀಗ ಹೆಚ್ಚಾಗಿದೆ. ಇದಕ್ಕೆ ಕಾರಣ ರಿಲೀಸ್ ಆಗಿರುವ ಮೊದಲ ಪ್ರೋಮೋದಲ್ಲಿ ಅಭಿನಯ ಚಕ್ರವರ್ತಿಯ ಸುಳಿವಿಲ್ಲದಿರುವುದು.
ಹೌದು, ಕಿಚ್ಚ ಸುದೀಪ್ ಬಿಗ್ ಬಾಸ್(Bigg Boss) ಜೊತೆ ಕೇವಲ 10 ವರ್ಷಗಳಿಗೆ ಅಂದರೆ 10 ಸೀಸನ್ ಗಳಿಗೆ ಮಾತ್ರ ಒಪ್ಪಂದ ಮಾಡಿಕೊಂಡಿದ್ದರು. ಅದು ಈಗ ಮುಗಿದಿದೆ. ಹೀಗಾಗಿ ಕಿಚ್ಚ 11 ಸೀಸನ್ ನಿಂದ ಬಿಗ್ ಬಾಸ್ ನಲ್ಲಿ ಕಾಣಿಸೋದಿಲ್ಲ. ಅವರ ಬದಲು ಬೇರೆಯವರು ಆಂಕರ್ ಆಗಿ ಬರುತ್ತಾರೆ ಎಂದೆಲ್ಲಾ ಹೇಳಲಾಗುತ್ತಿದೆ. ಅದೂ ಅಲ್ಲದೆ ಸುದೀಪ್ ಸುಳಿವಿಲ್ಲದೆ ಬಿಗ್ ಬಾಸ್ ಮೊದಲ ಪ್ರೋಮೋ ರಿಲೀಸ್ ಆಗಿರುವದು ಕುತೂಹಲವನ್ನು ಹೆಚ್ಚು ಮಾಡಿದೆ. ಈ ನಡುವೆ ಸುದೀಪ್ ಬದಲು ಈ ಇಬ್ಬರು ನಟರಲ್ಲಿ ಒಬ್ಬರು ಬಿಗ್ ಬಾಸ್ ಹೋಸ್ಟ್ ಮಾಡುತ್ತಾರೆ ಎನ್ನಲಾಗಿದೆ.
ಅಂದಹಾಗೆ ಈ ಹಿಂದೆ ಸುದೀಪ್ ಬದಲು ನಟ ರಮೇಶ್ ಅರವಿಂದ್ ಹೆಸರು ಕೇಳಿಬಂದಿತ್ತು. ಆದರೆ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ್ದ ಅವರು, “ನನಗೆ ಆ ರೀತಿಯ ಯಾವುದೇ ಆಫರ್ ಬಂದಿಲ್ಲ, ಆ ಬಗ್ಗೆ ಚರ್ಚೆ ಸಹ ನಡೆಸಲಾಗಿಲ್ಲ. ನನ್ನ ಹಾದಿ ಬೇರೆ ಇದೆ” ಎಂದು ಹೇಳಿದ್ದರು. ಈ ಬೆನ್ನಲ್ಲೇ ಇದೀಗ ಮತ್ತೋರ್ವ ನಟನ ಹೆಸರು ಕೂಡ ಕೇಳಿಬರುತ್ತಿದೆ. ‘ಕಾಂತಾರ’ ಸಿನಿಮಾದ ಬಳಿಕ ಸಖತ್ ಪ್ರಸಿದ್ಧಿ ಪಡೆದ ರಿಷಬ್ ಶೆಟ್ಟಿಗೆ ಈ ಆಫರ್ ನೀಡಬಹುದು. ಇವರಲ್ಲಿ ಒಳ್ಳೆಯ ಮಾತುಗಾರಿಕೆ ಇದ್ದು, ಬಿಗ್ ಬಾಸ್ ಹೋಸ್ಟ್ ಮಾಡಲು ಬೆಸ್ಟ್ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ವದಂತಿಯಷ್ಟೇ ಆಗಿದ್ದು, ಸತ್ಯ ಏನೆಂಬುದು ಮುಂದೆ ತಿಳಿದುಬರಲಿದೆ.
ಮೂಲಗಳ ಪ್ರಕಾರ, ಕಿಚ್ಚ ಸುದೀಪ್ ಅವರ 10 ವರ್ಷಗಳ ಬಿಗ್ ಬಾಸ್ ಒಪ್ಪಂದ ಮುಕ್ತಾಯವಾಗಿದೆ. ಆದರೆ, ಇನ್ನೊಂದಷ್ಟು ವರ್ಷಗಳ ಕಾಲ ಬಿಗ್ ಬಾಸ್‌ನ ಆಂಕರ್ ಆಗಿ ಸುದೀಪ್ ಅವರೇ ಮುಂದುವರಿಯುವ ಸಾಧ್ಯತೆ ಇದೆ. ಹಾಗೇನಾದರೂ ಸುದೀಪ್ ಬಿಗ್ ಬಾಸ್‌ನ ಆಂಕರಿಂಗ್ ಮುಕ್ತಾಯ ಮಾಡುತ್ತಾರೆ ಎಂದಾದಲ್ಲಿ ಕಲರ್ಸ್ ಕನ್ನಡ ಇಷ್ಟೆಲ್ಲಾ ಸಸ್ಪೆನ್ಸ್ ಅನ್ನು ಮಾಡೋದೇ ಇಲ್ಲ ಎಂಬುದನ್ನೂ ಗಮನದಲ್ಲಿಡಬೇಕು. ಬಿಗ್ ಬಾಸ್‌ನಲ್ಲಿ ಸುದೀಪ್ ಅವರೇ ಆಂಕರ್ ಆಗಿ ಮುಂದುವರಿಯಲಿದ್ದು, ಬಿಗ್ ಬಾಸ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುವ ದೃಷ್ಟಿಯಲ್ಲಿ ಇಂಥದ್ದೊಂದು ಪ್ರೋಮೋ ರಿಲೀಸ್ ಮಾಡಿರಬಹುದು ಎನ್ನಲಾಗಿದೆ.