Marriage: ಮೊದಲ ರಾತ್ರಿ ನಡೆಯುವ ಮುನ್ನ ವಧುವಿನ ಮುಖ ನೋಡಿ ಮದುಮಗ ಕೇಳಿದ್ದು ಆಧಾರ್ ಕಾರ್ಡ್!

Marriage: ಇಲ್ಲೊಬ್ಬ ಮದುವೆ (Marriage) ಆಗಲು ತನ್ನ ಸಮುದಾಯದ ಹುಡುಗಿಯೇ ಬೇಕೆಂದು 43 ವರ್ಷ ಆಗುವರೆಗೆ ಕಾದು ಕೊನೆಗೆ ಹೆಣ್ಣಿಗೆ ವರದಕ್ಷಿಣೆ ಕೊಟ್ಟು ಮದುವೆ ಮಾಡಿಕೊಳ್ಳುವ ಹಾಗೆ ಆಗಿದೆ. ಆದ್ರೆ ಕೊನೆಗೆ ಆಗಿದ್ದೇ ಬೇರೆ.

 

ಹೌದು, ಮಗನಿಗೆ ಹೆಣ್ಣು ಹುಡುಕಲು ಕಷ್ಟ ಪಟ್ಟ ಛತ್ತೀಸಗಢದ ದುರ್ಗದ ಉದ್ಯಮಿ ತಮ್ಮ ಮಗನಿಗೆ ಮದುವೆ ಮಾಡಲು ಹಲವು ವರ್ಷಗಳಿಂದ ಹೆಣ್ಣು ಹುಡುಕುತ್ತಿದ್ದರು. ಕೊನೆಗೆ ಸಂಬಂಧಿಕರೊಬ್ಬರು ಉದ್ಯಮಿಗೆ ಮದುವೆ ಬ್ರೋಕರ್ ಮೊಬೈಲ್ ನಂಬರ್ ನೀಡುತ್ತಾರೆ. ಬ್ರೋಕರ್‌ಗೆ ಕರೆ ಮಾಡಿದ ಉದ್ಯಮಿ ಎಲ್ಲಾ ವಿಷಯವನ್ನು ಹೇಳುತ್ತಾರೆ. ಅವರ ವೀಕ್ನೆಸ್ ಅರಿತ ಬ್ರೋಕರ್ ಕೆಲವೇ ದಿನಗಳಲ್ಲಿ ಕರೆ ಮಾಡಿ ನಿಮ್ಮ ಮಗನಿಗೆ ಹೆಣ್ಣು ಸಿಕ್ಕಿದೆ, ಬಂದು ನೋಡಿಕೊಂಡು ಹೋಗುವಂತೆ ಹೇಳಿದ್ದಾನೆ.

ಮಗನಿಗೆ 43 ವರ್ಷವಾಗಿರುವ ಕಾರಣ ಮದುವೆಯ ಎಲ್ಲಾ ಖರ್ಚುಗಳನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಉದ್ಯಮಿ ಹೇಳಿದ್ದಾರೆ. ನಂತರ ವಧುವಿನ ಪೋಷಕರು 17.5 ಲಕ್ಷ ರೂಪಾಯಿ ನೀಡುವಂತೆ ಡಿಮ್ಯಾಂಡ್ ಮಾಡಿದ್ದರು. ಅಂತೆಯೇ ಮದುವೆಗೂ ಮುನ್ನವೇ ಹಣ ಸಹ ನೀಡಿದ್ದರು.

ಕೊನೆಗೂ ಮಗನ ಮದುವೆ ಜೈನ ಸಮುದಾಯದ ಯುವತಿ ಜೊತೆ ನಡೆಯಿತು ಎಂದು ಉದ್ಯಮಿ ಸಹ ಸಂತೋಷವಾಗಿದ್ದರು. ಅಲ್ಲದೆ ದುರ್ಗದಲ್ಲಿ ನೂತನ ದಂಪತಿಗಾಗಿ ಫಸ್ಟ್ ನೈಟ್‌ ಸಹ ಅರೇಂಜ್ ಮಾಡಲಾಗಿತ್ತು. ಆದ್ರೆ ವರನಿಗೆ ಯುವತಿ ಬಗ್ಗೆ ಸಣ್ಣ ಅನುಮಾನವಿತ್ತು. ಮಂಚದ ಮೇಲೆ ನಾಚಿಕೊಂಡು ಕುಳಿತಿದ್ದ ವಧು ಬಳಿ ಬಂದ ವರ ಆಧಾರ್ ಕಾರ್ಡ್ ಕೇಳಿದ್ದಾನೆ. ವಧು ಆಧಾರ್ ಕಾರ್ಡ್ ನೀಡಲು ಒಪ್ಪದಿದ್ದಾಗ, ವರ ಆಕೆಯ ಬ್ಯಾಗ್ ಪರಿಶೀಲನೆ ಮಾಡಿದ್ದಾನೆ. ಆಧಾರ್ ಕಾರ್ಡ್ ಸಿಕ್ಕಾಗ ವಧುವಿನ ಹೆಸರು ಬೇರೆಯಾಗಿತ್ತು. ವಿಷಯ ತಿಳಿಯುತ್ತಲೇ ಕೋಣೆಯಿಂದ ಹೊರ ಬಂದ ವರ ತಂದೆಗೆ ನಾವು ಮೋಸ ಹೋಗಿರೋದನ್ನು ಹೇಳಿದ್ದಾನೆ. ಇದೀಗ ದುರ್ಗದ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದಾರೆ.

Leave A Reply

Your email address will not be published.