Ramesh Aravind: ‘ನನಗೆ ಕಾಣೋದು 3 ದರ್ಶನ್, ಯಾರ್ಯಾರು ಅಂದ್ರೆ…’- ದರ್ಶನ್ ಕೇಸ್ ಬಗ್ಗೆ ನಾಡೇ ಮೆಚ್ಚುವಂತೆ ನಾಜೂಕಿನ ರಿಯಾಕ್ಷನ್ ಕೊಟ್ಟ ನಟ ರಮೇಶ್ !!

Share the Article

Ramesh Aravind: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಡಿ ನಟ ದರ್ಶನ್ ಜೈಲು ಸೇರಿದ್ದಾರೆ. ಕನ್ನಡ ಚಿತ್ರರಂಗ ಇದರಿಂದ ಮುಜುಗರಕ್ಕೆ ಒಳಗಾಗಿದೆ. ಕೆಲವು ನಟ-ನಟಿಯರು ನಿರಂತರವಾಗಿ ಜೈಲಿಗೆ ಬಂದು ದರ್ಶನ್(Darshan) ಭೇಟಿ ಆಗಿ ಅವರ ಪರ ಬ್ಯಾಟ್ ಬೀಸುತ್ತಿದ್ದರೆ, ಇನ್ನು ಕೆಲವರಿಗೆ ದರ್ಶನ್ ಪರ ನಿಲ್ಲಲೂ ಆಗದೆ, ಪೂರ್ಣವಾಗಿ ಬಿಟ್ಟುಕೊಡಲೂ ಆಗದೆ ಪರಿತಪಿಸುತ್ತಿದ್ದಾರೆ. ಚಿತ್ರರಂಗದವರ ಈಗಿನ ಪರಿಸ್ಥಿತಿಯನ್ನು ನಟ ರಮೇಶ್ ಅರವಿಂದ್(Ramesh Aravind) ‘ನನಗೆ 3 ಜನ ದರ್ಶನ್ ಕಾಣುತ್ತಾರೆ’ ಎಂದು ಬಹಳ ಜಾಣತನದಿಂದ ವಿವರಿಸಿದ್ದಾರೆ.

ಹೌದು, ತಮ್ಮ 60ನೇ ವರ್ಷದ ಜನ್ಮದಿನದಂದು ರಮೇಶ್‌ ಅರವಿಂದ್‌, ಸ್ಯಾಂಡಲ್‌ವುಡ್‌ ತಲೆತಗ್ಗಿಸುವಂತೆ ಆಗಿರುವ ವಿಚಾರದ ಬಗ್ಗೆ ಮಾತನಾಡಿದ್ದು ‘ದರ್ಶನ್‌ ಬಗ್ಗೆ ನಾನು ಇಷ್ಟು ದಿನದವರೆಗೂ ಮಾತನಾಡಿರಲಿಲ್ಲ. ಎಲ್ಲರೂ ಇಲ್ಲಿ ಇರುವ ಕಾರಣವಾಗಿ ನಾನು ಮಾತನಾಡುತ್ತೇನೆ. ನಾನು ಸಾಮಾನ್ಯವಾಗಿ ಇಂಥ ವಿಚಾರಗಳ ಬಗ್ಗೆ ಎಲ್ಲಿಯೂ ಮಾತನಾಡೋದಕ್ಕೆ ಹೋಗೋದಿಲ್ಲ. ಬಟ್‌ ಆ ವಿಚಾರ ಹಾಗಿರಲಿ. ಇಲ್ಲಿ ಒಬ್ಬ ದರ್ಶನ್‌ ಇಲ್ಲ. ಒಟ್ಟು ಮೂರು ದರ್ಶನ್‌ ಇದ್ದಾರೆ’ ಎಂದು ತಮ್ಮ ಮಾತು ಆರಂಭಿಸಿದ್ದಾರೆ.

ರಮೇಶ್ ಹೇಳಿದ 3 ದರ್ಶನ್:
ಒಬ್ಬರು ನಿನ್ನೆಯ ದರ್ಶನ್‌. ನಮಗೆ ಬಹಳ ಮಜಾ ಕೊಟ್ಟಂತ ಸೂಪರ್‌ಸ್ಟಾರ್‌ ಅವರು. ಅವರ ಚಿತ್ರಗಳು, ಫೆಂಟಾಸ್ಟಿಕ್‌ ದರ್ಶನ್‌. ವೀಕೆಂಡ್‌ ವಿತ್‌ ರಮೇಶ್‌ ಚೇರ್‌ನಲ್ಲಿ ಕುಳಿತ ದರ್ಶನ್‌ ಅದು ನಿನ್ನೆಯ ದರ್ಶನ್‌. ಹಾಗೆ ಇವತ್ತಿನ ದರ್ಶನ್‌ ಒಬ್ಬರಿದ್ದಾರೆ. ಅವರಿಂದ ನಮಗೆಲ್ಲರಿಗೂ ಆಗಿರೋ ಘಟನೆಯಿಂದ ಸ್ವಲ್ಪ ಬೇಜಾರಾಗಿದೆ. ಒಂದು ದೊಡ್ಡ ತಪ್ಪಾಗಿದೆ. ಆ ತಪ್ಪಿಗೆ ಆಗಬೇಕಾದ ಶಿಕ್ಷೆ ಆಗಲಿದೆ. ಆ ತಪ್ಪನ್ನು ಯಾರು ಮಾಡಿದ್ದಾರೋ ಅವರಿಗೆ ಶಿಕ್ಷೆ ಆಗಲೇಬೇಕು. ಆ ಕೆಲಸವನ್ನು ಕಾನೂನು ಮಾಡಲಿದೆ. ಬಟ್‌ ಇದೆಲ್ಲದಕ್ಕಿಂತ ಇನ್ನೊಬ್ಬ ದರ್ಶನ್‌ ಇದ್ದಾರೆ. ಅವರು ನಾಳೆಯ ದರ್ಶನ್‌. ಆ ನಾಳೆಯ ದರ್ಶನ್‌ ಇದ್ದಾರಲ್ಲ. ಈ ಸಮಸ್ಯೆಯಿಂದ ಹೊರಬಂದು, ಆಗಿರುವ ತಪ್ಪಿಗೆ ಶಿಕ್ಷೆ ಪಡೆದು ಹೊರಬಂದಾಗ, ನಾಳೆಯ ದರ್ಶನ್‌ ಏನ್‌ ಮಾಡ್ತಾರೆ? ಅನ್ನೋದೇ ತುಂಬಾ ಇಂಟ್ರಸ್ಟಿಂಗ್‌ ವಿಚಾರವೀಗ’ ಎಂದು ಹೇಳಿದ್ದಾರೆ.

Leave A Reply