Outer Space: ಸೂರ್ಯನಿದ್ದರೂ ಬಾಹ್ಯಾಕಾಶ ಸದಾ ಕತ್ತಲಾಗಿರುವುದು ಏಕೆ?
Outer Space: ಕೌತುಕಮಯವಾದ ಜಗತ್ತಿನ ಕೆಲವು ಕೌತುಗಳು ಸದಾ ಕಾಡುವಂತವು. ಅವುಗಳಿಗೆ ವಿಜ್ಞಾನಗಳೂ ಉತ್ತರಿಸಲಾಗದು. ತಿಳಿಯಲು ಪ್ರಯತ್ನಿಸಿದಷ್ಟು, ಅವುಗಳ ಆಳ-ಅಗಲವನ್ನು ಕೆದಕಿದಷ್ಟು ಅವು ಹೆಚ್ಚು ಹೆಚ್ಚು ಕುತೂಹಲವಾಗಿಯೇ ಮಾರ್ಪಾಡಾಗುತ್ತದೆ. ಅಂತೆಯೇ ಈ ಬಾಹ್ಯಾಕಾಶ(Outer Space), ಸೌರವ್ಯೂಹ ಎಲ್ಲವೂ. ಇವುಗಳ ಕುರಿತು ಕೆಲವೊಂದು ಸತ್ಯ ಸಂಗತಿಗಳನ್ನು ನಾವು ತಿಳಿದಾಗ ನಿಜಕ್ಕೂ ಆಶ್ಚರ್ಯವಾಗಿಬಿಡುತ್ತದೆ. ಅಂತೆಯೇ ನಾವೀಗ ಬಾಹ್ಯಾಕಾಶದ ಕತ್ತಲೆಯ ಹಿಂದಿನ ರಹಸ್ಯವನ್ನು ತಿಳಿಯೋಣ.
ಭೂಮಿಯಿಂದ ನೋಡಿದಾಗ ನಮಗೆ ಆಕಾಶ ನೀಲಿಯಾಗಿ ಕಾಣುತ್ತದೆ. ಆಕಾಶ ಅನ್ನೋದು ನೀಲಿಯಲ್ಲ. ಆಕಾಶ ಎಂದರೆ ಕಾಲಿ. ಈ ಕಾಲಿ ಜಾಗವನ್ನು ನಮ್ಮ ವಾತಾವರಣದಿಂದ ನಿಂತು ನೋಡುವಾಗ ಅದು ನೀಲಿಯಾಗಿ ಕಾಣುತ್ತದೆ. ಆದರೆ, ಅದು ನಿಜವಾಗಲೂ ಇರೋದು ಕಡುಕತ್ತಲೆಯಲ್ಲಿ. ಅಂದರೆ ಅದು ಕತ್ತಲೆಯಾಗಿದೆ. ಅಲ್ಲಿ ಒಂದು ಸಣ್ಣ ಬೆಳಕೂ ಕೂಡ ಇಲ್ಲ. ಹಾಗಿದ್ದರೆ ಸೂರ್ಯನೇ ಇದ್ದರೂ ಇಡೀ ಬಾಹ್ಯಾಕಾಶ ಕತ್ತಲಾಗಿರೋದು ಯಾಕೆ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ.
ಬಾಹ್ಯಾಕಾಶ ಸದಾ ಕತ್ತಲೆಯಿಂದ ಕೂಡಿರಲು ಅತ್ಯಂತ ಪ್ರಮುಖ ಕಾರಣ, ಬಾಹ್ಯಾಕಾಶದಲ್ಲಿ ಯಾವುದೇ ವಾತಾವರಣವಿಲ್ಲ. ಬೆಳಕಿನ ಚದುರುವಿಕೆಯ ನಿಯಮ ಭೂಮಿಯಲ್ಲಿ ಅನ್ವಯವಾಗುತ್ತದೆ. ಆದರೆ, ಬಾಹ್ಯಾಕಾಶದಲ್ಲಿ ಅಂತಾ ವಾತಾವರಣವೇ ಇರೋದಿಲ್ಲ. ಸೂರ್ಯನಿಂದ ಬರುವ ಬೆಳಕು ನೇರವಾಗಿ ಹೋಗುತ್ತದೆ. ಬೆಳಕು ಏನನ್ನಾದರೂ ತಾಗುವವರೆಗೂ ಸರಳ ರೇಖೆಯಲ್ಲಿ ಚಲಿಸುತ್ತದೆ. ಇದನ್ನು ಬೆಳಕಿನ ಚದುರುವಿಕೆಯ ನಿಯಮ (ರೇಲೇ ಸ್ಕ್ಯಾಟರಿಂಗ್ ಎಂದೂ ಕರೆಯಲಾಗುತ್ತದೆ). ಭೂಮಿಯಲ್ಲಿ ಬೆಳಕನ್ನು ಚದುರಿಸಲು ವಾತಾವರಣವಿದೆ. ಬಾಹ್ಯಾಕಾಶದಲ್ಲಿ, ಬೆಳಕನ್ನು ಚದುರಿಸಲು ಏನೂ ಇಲ್ಲ, ಆದ್ದರಿಂದ ಅದು ತನ್ನ ನೇರ ರೇಖೆಯಲ್ಲಿ ಚಲಿಸುತ್ತದೆ.
ಅಲ್ಲದೆ ಬಾಹ್ಯಾಕಾಶ ಅನ್ನೋದು ಸಂಪೂರ್ಣ ನಿರ್ವಾತ. ಅಲ್ಲಿ ಗುರುತ್ವಾಕರ್ಷಣೆ, ವಾತಾವರಣ ಏನೂ ಇಲ್ಲ. ಸೂರ್ಯನಿಂದ ಬಂದ ಬೆಳಕನ್ನು ರಿಫ್ಲೆಕ್ಟ್ ಅಥವಾ ಡಿಫ್ಯೂಸ್ ಮಾಡಲು ಯಾವುದೇ ಕಾಯಗಳಿಲ್ಲ. ಅತ್ಯಂತ ದೂರದೂರದಲ್ಲಿರುವ ನಕ್ಷತ್ರಗಳು ಹಾಗೂ ನಕ್ಷತ್ರಪುಂಜಗಳ ಹೊರತಾಗಿ ಬೆಳಕಿನ ಯಾವುದೇ ಮೂಲ ಬಾಹ್ಯಾಕಾಶದಲ್ಲಿಲ್ಲ.
ಇದಲ್ಲದೆ ಎಷ್ಟು ದೂರ ಬೆಳಕು ಸಾಗುತ್ತದೆಯೋ ಅಷ್ಟು ಮಂದವಾಗುತ್ತದೆ. ಕೊನೆಗೆ ಅದು ಕತ್ತಲೆಯಾಗುತ್ತದೆ. ಅದೇ ಕಾರಣಕ್ಕೆ ಬಾಹ್ಯಾಕಾಶದಲ್ಲಿ ಅತ್ಯಂತ ದೂರದಲ್ಲಿರುವ ನಕ್ಷತ್ರಗಳು ಬಹಳ ಮಂದವಾಗಿ ಕಾಣುತ್ತದೆ. ಬೆಳಕಿ ಅತ್ಯಂತ ದೂರದವರೆಗೆ ಸಾಗುವ ಕಾರಣ ಬೆಳಕು ಅಲ್ಲಿ ಮಂದವಾಗುತ್ತದೆ. Olbers Paradox ಹೇಳುವಂತೆ ರಾತ್ರಿಯ ಆಕಾಶವು ಅಪಾರ ಸಂಖ್ಯೆಯ ನಕ್ಷತ್ರಗಳ ಹೊರತಾಗಿಯೂ ಏಕರೂಪವಾಗಿ ಪ್ರಕಾಶಮಾನವಾಗಿಲ್ಲ ಏಕೆಂದರೆ ಬ್ರಹ್ಮಾಂಡವು ಅಪರಿಮಿತವಾಗಿ ಹಳೆಯದು ಮತ್ತು ಏಕರೂಪವಾಗಿಲ್ಲ; ದೂರದ ನಕ್ಷತ್ರಗಳ ಬೆಳಕು ಇನ್ನೂ ನಮ್ಮನ್ನು ತಲುಪಿಲ್ಲ. ಹೀಗಾಗಿ ಈ ಎಲ್ಲಾ ಕಾರಣಗಳಿಂದ ಸೂರ್ಯನಿದ್ದರೂ ನಮಗೆ ಬಾಹ್ಯಾಕಾಶ ಸದಾ ಕತ್ತಲಾಗಿರುತ್ತದೆ.