Gang rape: ಬರ್ತ್ ಡೇ ಪಾರ್ಟಿಯಲಿ ಇಬ್ಬರು ಡಾನ್ಸರ್ ಗಳ ಮೇಲೆ ಸಾಮೂಹಿಕ ಅತ್ಯಾಚಾರ!

Gang rape: ನೃತ್ಯ ಮಾಡಲು ನಿರಾಕರಿಸಿದ, ನೃತ್ಯಗಾರ್ತಿಯರ ಮೇಲೆ ಸಾಮೂಹಿಕವಾಗಿ 8 ಮಂದಿ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ಬೆಳಕಿಗೆ ಬಂದಿದೆ.

 

ಬರ್ತ್​ಡೇ ಪಾರ್ಟಿಯಲ್ಲಿ, ಆರೋಪಿಗಳು ಆರ್ಕೆಸ್ಟ್ರಾ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ಡಾನ್ಸರ್ ಗಳನ್ನು ಬೆದರಿಸಿ 10 ಕಿ.ಮೀ ದೂರದ ಆರೋಪಿ ಒಬ್ಬನ ಮನೆಗೆ ಕರೆದೊಯ್ದಿದ್ದಾರೆ, ಬರ್ತ್​ ಡೇ ಪಾರ್ಟಿಯಲ್ಲಿ ನೃತ್ಯ ಮಾಡುವಂತೆ ಆ ಇಬ್ಬರು ಯುವತಿಯರ ಬಳಿ ಕೇಳಿದ್ದಾರೆ. ಆದರೆ ಅವರು ನಿರಾಕರಿಸಿದ್ದಕ್ಕೆ ಕುಡಿದ ಮತ್ತಿನಲ್ಲಿ ಇಬ್ಬರ ಮೇಲೆ 8 ಮಂದಿ ಅತ್ಯಾಚಾರವೆಸಗಿದ್ದಾರೆ (Gang rape) .

ಇದೀಗ ಪೊಲೀಸರು ಅಪರಾಧಕ್ಕೆ ಬಳಸಿದ್ದ ಎರಡು ಎಸ್‌ಯುವಿ ಕಾರುಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಅಲ್ಲದೆ ಯುವತಿಯರ ವೈದ್ಯಕೀಯ ಪರೀಕ್ಷೆ ಮುಗಿದಿದ್ದು ವರದಿ ಇನ್ನಷ್ಟೇ ಬರಬೇಕಿದೆ.

Leave A Reply

Your email address will not be published.