Liquor Bottles: ಅಕ್ರಮ ಮದ್ಯದ ನಾಶ! ಪೊಲೀಸರ ಮುಂದೆಯೇ ಬಾಟಲಿ ದೋಚಿದ ಜನರು! ವಿಡಿಯೋ ವೈರಲ್

Liquor Bottles: ವಿವಿಧ ಪ್ರಕರಣಗಳಲ್ಲಿ ವಶ ಪಡಿಸಿಕೊಂಡ ಅಕ್ರಮ ಮದ್ಯವನ್ನು ನಾಶಪಡಿಸುವಾಗ ಪೊಲೀಸರನ್ನು ಲೆಕ್ಕಿಸದೇ ಮದ್ಯ ಪ್ರಿಯರು ಬಾಟಲಿಗಳನ್ನು (Liquor Bottles) ಹಿಡಿದು ಪರಾರಿಯಾದ ಘಟನೆ ಆಂಧ್ರಪ್ರದೇಶ (Andhra Pradesh) ಅಮರಾವತಿ (Amaravati) ಬಳಿಯ ಗುಂಟೂರು ಗ್ರಾಮದಲ್ಲಿ ನಡೆದಿದೆ.

 

ಇದೀಗ ಪೊಲೀಸರು ಅಕ್ರಮ ಮದ್ಯವನ್ನು ನಾಶ ಮಾಡುತ್ತಿರುವ ವೇಳೆ ಜನರು ಬಾಟಲಿ ಹಿಡಿದು ಓಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 50 ಲಕ್ಷ ರೂ. ಮೌಲ್ಯದ 24,031 ಮದ್ಯದ ಬಾಟಲಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು ಎಸ್‌ಪಿ ಸತೀಶ್ ಕುಮಾರ್ ನೇತೃತ್ವದಲ್ಲಿ ನಲ್ಲಚೆರುವು ಡಂಪಿಂಗ್ ಯಾರ್ಡ್ ನಲ್ಲಿ ವಿಲೇವಾರಿ ಮಾಡುವ ಸಂದರ್ಭದಲ್ಲಿ ನೂಕು ನುಗ್ಗುಲಿನ ಮದ್ಯೆ ಬಾಟಲಿ ದೋಚಿ ಜನರು ಪರಾರಿ ಆಗಿದ್ದಾರೆ.

ವೈರಲ್ ವಿಡಿಯೋ ಇಲ್ಲಿದೆ

https://t.co/FAxPS4aELB

ಜನರು ಮದ್ಯ ದೋಚುವ ಸಂದರ್ಭದಲ್ಲಿ ಅಲ್ಲೆ ಇದ್ದ ಪೊಲೀಸರು ಜನರನ್ನು ತಡೆಯಲು ಸಾದ್ಯವಾಗಲಿಲ್ಲ. ಆದ್ರೆ ನಾಶಕ್ಕೆ ಮುಂದಾಗಿದ್ದ ಬಾಟಲಿಗಳನ್ನು ದೋಚಿದವರ ವಿರುದ್ಧ ಕ್ರಮ ಕೈಗೊಳ್ಳಲು ಮದ್ಯ ಕಳ್ಳರ ಪತ್ತೆಗಾಗಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.